ಆಂಟಿ ತುಂಬಾ ತುಂಟಿ: ಮದುವೆಯಾಗಿ ಮೂರು ಮಕ್ಕಳಿದ್ರೂ ಅಕ್ರಮ ಸಂಬಂಧ, ಪ್ರಿಯಕರನ ಜತೆ ಎಸ್ಕೇಪ್!

ಆಕೆ ಮೂರು ಮಕ್ಕಳ ತಾಯಿ. ಮದುವೆಯಾಗಿ 11 ವರ್ಷವಾಗಿತ್ತು. ಗಂಡ ಕ್ಯಾಬ್​ ಡ್ರೈವರ್​ ಕಷ್ಟಪಟ್ಟು ದುಡಿಯುತ್ತಿದ್ದ. ಆದ್ರೆ ಆವತ್ತೊಂದು ರಾತ್ರಿ ಗಂಡ ಕೆಲಸಕ್ಕೆ ಹೋಗಿದ್ದ.

Share this Video
  • FB
  • Linkdin
  • Whatsapp

ಆಕೆ ಮೂರು ಮಕ್ಕಳ ತಾಯಿ. ಮದುವೆಯಾಗಿ 11 ವರ್ಷವಾಗಿತ್ತು. ಗಂಡ ಕ್ಯಾಬ್​ ಡ್ರೈವರ್​ ಕಷ್ಟಪಟ್ಟು ದುಡಿಯುತ್ತಿದ್ದ. ಆದ್ರೆ ಆವತ್ತೊಂದು ರಾತ್ರಿ ಗಂಡ ಕೆಲಸಕ್ಕೆ ಹೋಗಿದ್ದ. ಮನೆಯಲ್ಲಿ ಹೆಂಡತಿ ಮಕ್ಕಳು ಇದ್ವು. ಬೆಳಗ್ಗೆ ವಾಪಸ್​ ಬಂದು ನೋಡಿದ್ರೆ ಹೆಂಡತಿ ಮತ್ತು ಒಂದು ಹೆಣ್ಣು ಮಗು ನಾಪತ್ತೆ. ಉಳಿದ ಇಬ್ಬರು ಗಂಡು ಮಕ್ಕಳನ್ನ ಕೇಳಿದ್ರೆ ಅಮ್ಮ ಅಂಕಲ್​ ಜೊತೆ ಹೋದಳು ಅನ್ನೋದಷ್ಟೇ ಉತ್ತರ. ಯಸ್​​​. ಅಲ್ಲಿ ಅಂಟಿ ಅಂಕಲ್​​ ಜೊತೆ ಎಸ್ಕೇಪ್​ ಆಗಿದ್ಲು. ಆದ್ರೆ ಯಾವಾಗ ಹೆಂಡತಿ ಪರಾರಿಯಾಗಿದ್ದಾಳೆ ಅನ್ನೋದು ಗೊತ್ತಾಯ್ತೋ ಆಕೆಯ ಪೂರ್ವಪರ ತಿಳಿಯಲು ಮುಂದಾಗಿದ್ದಾನೆ. ಆಗಲೇ ನೋಡಿ ಆ ಆಂಟಿಗೆ ಕೇವಲ ಒಬ್ಬ ಬಾಯ್​ಫ್ರೆಂಡ್​​ ಇರಲಿಲ್ಲ.

ಬದಲಿಗೆ ಆಕೆಯ ಕಹನಿ ದೊಡ್ಡದ್ದೇ ಇದೆ ಅನ್ನೋದು ಗೊತ್ತಾಗಿದ್ದು. ಅಷ್ಟಕ್ಕೂ ಆ ಹೆಣ್ಣುಮಗಳು ಈಗ ಎಸ್ಕೇಪ್​ ಆಗಿರೋದು ಯಾರ ಜೊತೆ? ಯಾಕೆ ಅವಳು ಹೀಗೆ ಮಾಡಿದ್ಲು. ಒಂದು ಖತರ್ನಾಕ್​ ಆಂಟಿಯ ರಂಗೀಲ ಆಟದ ಕಥೆಯೇ ಇವತ್ತಿನ ಎಫ್​ಐಆರ್​. ತಾಳಿ ಕಿತ್ತು ಕೊಟ್ಟವಳು ಎಲ್ಲಿ ಬರ್ತಾಳೆ. ಆದ್ರೆ ಗಂಡ ಮಾತ್ರ ಇವತ್ತಿಗೂ ಆಕೆನೇ ಬೇಕು ಅಂತ ಕಣ್ಣೀರು ಹಾಕುತ್ತಿದ್ದಾನೆ. ಆ ಮಕ್ಕಳನ್ನ ನೋಡ್ತಿದ್ರಂತೂ ಕರಳು ಚುರುಕ್​ ಅನ್ನುತ್ತೆ. ಆದ್ರೆ ಈ ಲೀಲಾಳ ಲೀಲೆ ಕೇವಲ ಸಂತು ಅನ್ನೋ ಹೆಸರಲ್ಲಿ ಮುಗಿಯೋದಿಲ್ಲ. ಆಕೆ ಅವನ ಜೊತೆ ಎಸ್ಕೇಪ್​ ಆದಮೇಲೆ ಆಕೆಯ ಮತ್ತಷ್ಟು ರಂಗೀನ್​ ಆಟಗಳು ಬಯಲಾಗಿವೆ.

ಆಕೆ ಮಂಜುನಾಥನನ್ನ ಮದುವೆಯಾಗೋ ಮೊದಲೇ ಬೇರೊಬ್ಬನನ್ನ ಪ್ರೀತಿಸಿ ಮನೆ ಬಿಟ್ಟು ಹೋಗಿದ್ಲಂತೆ.. ನಂತರ ವಾಪಸ್​ ಬಂದು ಮಂಜುನಾಥನ ಬೆನ್ನು ಬಿದ್ದು ಮದುವೆಯಾಗಿದ್ದಳಂತೆ. ಮದುವೆಯಾದ ಮೇಲೆ ನೆಟ್ಟಗೇ ಸಂಸಾರ ಮಾಡಿದ್ದ ಲೀಲಾ ಇತ್ತೀಚೆಗೆ ಸಂತೂನ ಪರಿಚಯವಾಗುತ್ತೆ. 2 ವರ್ಷ ಗಂಡನಿಗೆ ಗೊತ್ತಾಗದೇ ಲವ್ವಡವ್ವಿ ಶುರುವಿಟ್ಟುಕೊಳ್ತಾಳೆ, ಗಂಡ ಇಲ್ಲದಿದ್ದಾಗ ಸಂತೂ ಮನೆಗೇ ಬರ್ತಿದ್ದ. ಮಕ್ಕಳು ಕೇಳಿದ್ರೆ ಆವಾಜ್​ ಹಾಕ್ತಿದ್ರು. ಆದ್ರೆ ಗಣೇಶ ಹಬ್ಬದ ದಿನ ಅದೇನ್​ ಪ್ಲಾನ್​ ಮಾಡಿದ್ರೋ ಲೀಲಾ ಮತ್ತು ಸಂತೂ ಇಬ್ಬರೂ ಎಸ್ಕೇಪ್​ ಆಗಿಬಿಟ್ಟಿದ್ದಾರೆ. ಮಕ್ಕಳನ್ನ ಕಟ್ಟಿಕೊಂಡು ಮಂಜುನಾಥ ರಸ್ತೆಯಲ್ಲಿ ನಿಂತು ಗೋಳಾಡ್ತಿದ್ದಾನೆ. ನಿಜಕ್ಕೂ ಇವತ್ತು ಆ ಮಕ್ಕಳನ್ನ ನೋಡ್ತಿದ್ರೆ ಅಯ್ಯೋ ಅನಿಸುತ್ತೆ. ಆ ಮಕ್ಕಳ ಮುಖವನ್ನ ನೋಡಿಯಾದ್ರೂ ಲೀಲಾ ಮನಸು ಬದಲಿಸಬೇಕಿತ್ತು. ನೋಡೋಣ ಈ ಪ್ರಕರಣ ಎಲ್ಲಿಗೆ ಹೋಗಿ ನಿಲ್ಲುತ್ತೆ?

Related Video