ಕದ್ರಿ ಸೇರಿ ಮೂರು ಹಿಂದೂ ಮಂದಿರಗಳನ್ನು ಟಾರ್ಗೆಟ್ ಮಾಡಿದ್ದ ಶಾರೀಕ್?
ಕದ್ರಿ ದೇವಸ್ಥಾನ ಸೇರಿ ಮೂರು ಹಿಂದೂ ದೇವಾಲಯಗಳು ಉಗ್ರರ ಟಾರ್ಗೆಟ್ ಆಗಿದ್ದವು ಎಂಬ ಆತಂಕಕಾರಿ ಮಾಹಿತಿ ಲಭ್ಯವಾಗಿದೆ.
ಮಂಗಳೂರು: ಶಂಕಿತ ಉಗ್ರ ಶಾರೀಕ್ ಮಂಗಳೂರಿನಲ್ಲಿ ಬಾಂಬ್ ಸ್ಫೋಟಿಸುವ 10 ದಿನಗಳ ಮೊದಲು, ಕದ್ರಿ ದೇವಾಲಯ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಓಡಾಟ ನಡೆಸಿದ್ದ ಎಂದು ತಿಳಿದು ಬಂದಿದೆ. ಹೀಗಾಗಿ, ಕದ್ರಿ ಮಾತ್ರವಲ್ಲದೆ, ಕುದ್ರೋಳಿ, ಮಂಗಳಾದೇವಿ ದೇವಾಲಯ, ನಗರದ ಇನ್ನಿತರ ಪ್ರಮುಖ ಸ್ಥಳಗಳನ್ನೂ ಕೂಡ ಶಾರೀಕ್ ಟಾರ್ಗೆಟ್ ಮಾಡಿಕೊಂಡಿದ್ದಾನೇ ಎಂಬ ಶಂಕೆ ಉದ್ಭವವಾಗಿದೆ. ಇನ್ನು ಡಿಪಿಯಲ್ಲಿ ಶಿವನ ಫೋಟೋ ಕೂಡ ಇತ್ತು. ಹೀಗಾಗಿ ಕದ್ರಿ ದೇವಸ್ಥಾನ ಸೇರಿ ಮೂರು ಹಿಂದೂ ದೇವಾಲಯಗಳು ಉಗ್ರರ ಟಾರ್ಗೆಟ್ ಆಗಿದ್ದವು ಎಂದು ಹೇಳಲಾಗುತ್ತಿದೆ.