Asianet Suvarna News Asianet Suvarna News

Shami Plant Astrology: ಶನಿ ಕಾಟದಿಂದ ತಪ್ಪಿಸುತ್ತೆ ಶಮಿ ಸಸ್ಯ!

ವಾಸ್ತು ಮತ್ತು ಜ್ಯೋತಿಷ್ಯದಲ್ಲಿ ಶಮಿ ಸಸ್ಯವನ್ನು ಬಹಳ ಮುಖ್ಯವೆಂದು ವಿವರಿಸಲಾಗಿದೆ. ಇದನ್ನು ಶಿವನ ಆರಾಧನೆಯಲ್ಲಿಯೂ ಬಳಸಲಾಗುತ್ತದೆ. ಶನಿ ಕಾಟದಿಂದ ಬೇಸತ್ತವರಿಗೆ ಶಮಿ ಸಹಾಯಕ್ಕೆ ಬರಬಹುದು. 

Shami Plant Astrology know the astrological importance of Shami plant skr
Author
First Published Nov 25, 2022, 12:24 PM IST

ಮರಗಳು ಮತ್ತು ಸಸ್ಯಗಳ ಅನೇಕ ಪ್ರಾಮುಖ್ಯತೆ, ಅನುಕೂಲಗಳು ಮತ್ತು ಅನಾನುಕೂಲಗಳನ್ನು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಇದರೊಂದಿಗೆ ಮನೆಯಲ್ಲಿ ಯಾವ ಗಿಡಗಳನ್ನು ನೆಡಬೇಕು, ಯಾವುದನ್ನು ನೆಡಬಾರದು ಎಂಬುದನ್ನೂ ತಿಳಿಸಲಾಗಿದೆ. ಶಮಿ ಸಸ್ಯಕ್ಕೆ ಜ್ಯೋತಿಷ್ಯ, ವಾಸ್ತು ಶಾಸ್ತ್ರ ಮತ್ತು ಧಾರ್ಮಿಕವಾಗಿಯೂ ಹೆಚ್ಚಿನ ಪ್ರಾಮುಖ್ಯತೆ ಇದೆ. ಶತಶತಮಾನಗಳಿಂದಲೂ ಋಷಿಮುನಿಗಳು, ದೇವಾನುದೇವತೆಗಳು, ತಾಂತ್ರಿಕರು, ಜ್ಯೋತಿಷಿಗಳು ಶಮಿಯ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಅದನ್ನು ಬೆಳೆಸುವ ಮಹತ್ವ ಮತ್ತು ಧಾರ್ಮಿಕ ನಂಬಿಕೆ ಏನೆಂದು ತಿಳಿಯೋಣ.

ಜ್ಯೋತಿಷ್ಯದಲ್ಲಿ ಶಮಿ ಸಸ್ಯದ ಪ್ರಾಮುಖ್ಯತೆ(Significance of Shami plant)
ನಂಬಿಕೆಯ ಪ್ರಕಾರ, ಶಮಿ ಶಿವನಿಗೆ ತುಂಬಾ ಪ್ರಿಯ. ಇದನ್ನು ಮನೆಯಲ್ಲಿ ಬೆಳೆಸಿದರೆ ಶಿವನ ಆಶೀರ್ವಾದ ಸಿಗುತ್ತದೆ. ಶಿವನ ಆರಾಧನೆ ಮತ್ತು ರುದ್ರಾಭಿಷೇಕದಲ್ಲಿ ಶಮಿ ಎಲೆಗಳ ಬಳಕೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅದೇ ಸಮಯದಲ್ಲಿ, ಹವನ ಮತ್ತು ಯಾಗದಲ್ಲಿ ಯಜ್ಞಕ್ಕಾಗಿ ಬಳಸುವ ವಸ್ತುಗಳಲ್ಲಿ ಇದರ ತೊಗಟೆ ಹಾಕಲಾಗುತ್ತದೆ. ಯಾವುದೇ ಹವನ ಮತ್ತು ಯಾಗವನ್ನು ಶಮಿ ತೊಗಟೆ ಬಳಕೆಯಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಮಹಾಭಾರತದ ಕಾಲದ ನಂಬಿಕೆಯಂತೆ ಪಾಂಡವರು ಶಮೀ ವೃಕ್ಷದ ಕೆಳಗೆ ಆಯುಧಗಳನ್ನು ಬಚ್ಚಿಟ್ಟು ವಿಜಯವನ್ನು ಪಡೆಯಲು ಈ ಮರವನ್ನು ಪೂಜಿಸಿದರು. ಆದ್ದರಿಂದ ಯಾವುದೇ ಯುದ್ಧಕ್ಕೆ ಹೋಗುವ ಮೊದಲು ಈ ಮರವನ್ನು ಪೂಜಿಸುವ ಸಂಪ್ರದಾಯವು ಪ್ರಾರಂಭವಾಯಿತು.

Mercury retrograde 2022: ವರ್ಷಾರಂಭದಲ್ಲೇ ಬುಧ ವಕ್ರಿಯಿಂದ ಈ ರಾಶಿಗಳಿಗೆ ಸಂಕಷ್ಟ

ಶನಿದೇವನ ಕೋಪದಿಂದ ರಕ್ಷಿಸುತ್ತದೆ!
ಧಾರ್ಮಿಕ ನಂಬಿಕೆಗಳಂತೆ ಒಬ್ಬೊಬ್ಬ ದೇವರಿಗೆ ಒಂದೊಂದು ವಾಹನ, ಹೂವು ಇಷ್ಟವಿರುವಂತೆ ಒಂದೊಂದು ಸಸ್ಯವೂ ಇಷ್ಟವಿರುತ್ತದೆ. ವಿಷ್ಣುವಿಗೆ ಬಾಳೆಗಿಡ, ಗಣೇಶನಿಗೆ ಗರಿಕೆಯಂತೆ ಶನಿದೇವನಿಗೆ ಶಮಿ ಸಸ್ಯವೆಂದರೆ ಪ್ರೀತಿ. ಶಮಿ ಗಿಡವನ್ನು ಮನೆಯಲ್ಲಿ ನೆಟ್ಟರೆ ಮನೆಯ ಯಾವುದೇ ಸದಸ್ಯರ ಮೇಲೆ ನಡೆಯುತ್ತಿರುವ ಶನಿದೇವನ(Shanidev) ಸಾಡೇಸಾತಿ ಮತ್ತು ಧೈಯಾ ಪರಿಣಾಮಗಳು ಕಡಿಮೆಯಾಗುತ್ತದೆ. ಶಮಿ ಸಸ್ಯವನ್ನು ತುಳಸಿಯಂತೆ ಬಳಸಬಹುದು. ಅಂದರೆ ಇದರ ಎಲೆ, ತೊಗಟೆ, ರಸ ಇತ್ಯಾದಿಗಳೆಲ್ಲವನ್ನೂ ಹೆಚ್ಚು ಬಳಸಿದಷ್ಟೂ ಶನಿಯ ನಕಾರಾತ್ಮಕ ಪರಿಣಾಮಗಳು ತಗ್ಗುತ್ತವೆ. ಮನೆಯ ಯಾವುದೇ ಸದಸ್ಯರ ಮದುವೆ(marriage)ಯಲ್ಲಿ ವಿಳಂಬವಾಗುತ್ತಿದ್ದರೆ, ಈ ಸಸ್ಯವನ್ನು ನೆಡಬೇಕು ಎನ್ನಲಾಗುತ್ತದೆ. ಮನೆಯಿಂದ ಹೊರಗೆ ಹೋಗುವಾಗ, ಈ ಸಸ್ಯವನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ವಾಸ್ತು ಶಾಸ್ತ್ರದಲ್ಲಿ ಶಮಿ ಗಿಡದ ಮಹತ್ವ
ವಾಸ್ತು ಶಾಸ್ತ್ರ(Vastu Shastra)ದ ಪ್ರಕಾರ ಮನೆಯಲ್ಲಿ ಶಮಿ ಗಿಡ ನೆಟ್ಟರೆ ಧನಾತ್ಮಕ ಶಕ್ತಿ ಬರುತ್ತದೆ. ಮನೆಯಲ್ಲಿ ಆರ್ಥಿಕ ಸಮೃದ್ಧಿಯ ಆಗಮನದೊಂದಿಗೆ, ಸಂತೋಷ ಮತ್ತು ಶಾಂತಿ ಉಳಿಯುತ್ತದೆ. ಇದನ್ನು ಮನೆಯ ಮುಖ್ಯ ಬಾಗಿಲಿನ ಎಡಭಾಗದಲ್ಲಿ ಇಡಬೇಕು. ಈ ಗಿಡವನ್ನು ಮನೆಯೊಳಗೆ ನೆಡಬಾರದು, ನೀವು ಅದನ್ನು ತಾರಸಿ ಮೇಲೆ ನೆಡಬಹುದು.

ಮಹಾರಾಷ್ಟ್ರ, ಉತ್ತರ ಕರ್ನಾಟಕ, ಮಧ್ಯಪ್ರದೇಶಗಳಲ್ಲಿ ದಸರಾ ಆಚರಣೆಯ ಶುಭ ದಿನದಂದು ಅದೃಷ್ಟಕ್ಕಾಗಿ ಸ್ನೇಹಿತರು, ಸಂಬಂಧಿಕರು ಇತ್ಯಾದಿಗಳಿಗೆ ಶಮಿ ಎಲೆಗಳನ್ನು ನೀಡುವ ಸಂಪ್ರದಾಯವಿದೆ. ಅಂದರೆ, ಈ ಸಸ್ಯವು ಅದೃಷ್ಟವನ್ನೂ ತರುತ್ತದೆ. 

ಹೀಗೂ ಕನಸು ನನಸಾಗಬಹುದು ನೋಡಿ: ತಮಿಳುನಾಡಿನಲ್ಲೊಂದು ವಿಚಿತ್ರ ಘಟನೆ

ಭೂಮಿಗೂ ಒಳ್ಳೆಯದು
ಶಮೀ ವೃಕ್ಷ ಭೂಮಿಗೆ ತುಂಬಾ ಒಳ್ಳೆಯದು. ಇದು ಸಾರಜನಕ(Nitrogen)ವನ್ನು ಮಣ್ಣಿನಲ್ಲಿ ಸೇರಿಸುವ ಮೂಲಕ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಕಡಿಮೆ ನೀರಿನಲ್ಲಿಯೂ ಬೆಳೆಯಬಹುದು. ಈ ಶಮಿಯನ್ನು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಗೆ ಸಂಬಂಧಿಸಿದ ಔಷಧಿಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios