ತಲಾಖ್‌ ಕೊಡದ ಮಡದಿ ತಲೆಗೆ ನಡುರಸ್ತೆಯಲ್ಲಿ ಬೆಂಕಿ ಹಚ್ಚಿದ ಪತಿ

ತಲಾಖ್‌ ಕೊಡದ ಪತ್ನಿಗೆ ಹೆಂಡತಿಯೊಬ್ಬ ನಡುರಸ್ತೆಯಲ್ಲಿ ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ನಡೆದಿದೆ. ಇದರ ಭಯಾನಕ ದೃಶ್ಯಗಳು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. 

First Published Jul 8, 2022, 9:48 PM IST | Last Updated Jul 8, 2022, 9:48 PM IST

ತಲಾಖ್‌ ಕೊಡದ ಪತ್ನಿಗೆ ಹೆಂಡತಿಯೊಬ್ಬ ನಡುರಸ್ತೆಯಲ್ಲಿ ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ನಡೆದಿದೆ. ಇದರ ಭಯಾನಕ ದೃಶ್ಯಗಳು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ತಲಾಖ್‌ ನೀಡಲಿಲ್ಲ ಎಂಬ ಕಾರಣಕ್ಕೆ ಪತಿಯೋರ್ವ ಹೆಂಡತಿ ತಲೆಗೆ ನಡುರಸ್ತೆಯಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ವೇಳೆ ಮಹಿಳೆ ನೆಲಕ್ಕೆ ಬಿದ್ದು ಸಹಾಯಕ್ಕಾಗಿ ಹೊರಳಾಡಿದ್ದಾಳೆ. ಈ ವೇಳೆ ದಾರಿಹೋಕರು ರಸ್ತೆಯ ಗುಂಡಿಯಲ್ಲಿದ್ದ ನೀರನ್ನು ಆಕೆಯ ತಲೆಗೆ ಹಾಕಿ ಬೆಂಕಿ ನಂದಿಸಿದ್ದಾರೆ. ಈ ಭಯಾನಕ ಘಟನೆಯ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿವೆ.