Asianet Suvarna News Asianet Suvarna News

ಬೆಳಗಾವಿಯಲ್ಲಿ ಪಾಗಲ್ ಪ್ರೇಮಿಯ ಹುಚ್ಚಾಟ: ಪ್ರೀತಿ ನಿರಾಕರಿಸಿದ್ಧಕ್ಕೆ ಯುವತಿ ಮನೆ ಮೇಲೆ ದಾಳಿ!

ಯುವತಿ ಜತೆ ಮದುವೆ ಮಾಡಿ ಕೊಡುವಂತೆ ತಾಯಿಗೂ ತಿಪ್ಪಣ್ಣ ಧಮ್ಕಿ 
ಮದುವೆ ಮಾಡಿ ಕೊಡದಿದ್ದರೆ ಹತ್ಯೆಗೈಯ್ಯುವುದಾಗಿ ತಿಪ್ಪಣ್ಣ ಬೆದರಿಕೆ 
ಕೆಲ ತಿಂಗಳ ಹಿಂದೆ ಯುವತಿ ಮನೆಗೆ ಬೆಂಕಿ ಹಚ್ಚಿ ಹುಚ್ಚಾಟ ಮೆರೆದಿದ್ದ

ಬೆಳಗಾವಿಯಲ್ಲಿ(Belagavi) ಪಾಗಲ್‌ ಪ್ರೇಮಿಯೊಬ್ಬ(Pagal Lover) ಹುಚ್ಚಾಟ ಮೆರೆದಿದ್ದು, ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮನೆ ಮೇಲೆ ದಾಳಿ(Attack on House) ಮಾಡಿದ್ದಾನೆ. ಮನೆಯ ಕಿಡಿಕಿ ಗಾಜು ಒಡೆದು ಹಾಕಿದ್ದು, ಮದುವೆ ಆಗು ಎಂದು 3 ವರ್ಷಗಳಿಂದ ಯುವತಿಯನ್ನು ಆತ ಪೀಡಿಸುತ್ತಿದ್ದನಂತೆ(Love). ಬೆಳಗಾವಿ ತಾಲೂಕಿನ ಕಿಣೈ ಗ್ರಾಮದ ತಿಪ್ಪಣ್ಣ ಡೋಕರೆ (28) ಪಾಗಲ್‌ ಪ್ರೇಮಿ. ಬಿಕಾಂ ಓದುತ್ತಿರುವ ಯುವತಿ ಹಿಂದೆ ತಿಪ್ಪಣ್ಣ ಡೋಕರೆ ಬಿದ್ದಿದ್ದ. ಕಾಲೇಜಿಗೆ ಹೋಗುವಾಗಲೇಫಾಲೋ ಮಾಡಿ ಯುವತಿಗೆ ಪೀಡಿಸುತ್ತಿದ್ದ. ತಿಪ್ಪಣ್ಣ ಹುಚ್ಚಾಟಕ್ಕೆ ಕಾಲೇಜಿಗೆ ಹೋಗುವುದನ್ನೇ ಯುವತಿ ನಿಲ್ಲಿಸಿದ್ದಳಂತೆ. ಕಿಣೈಯಲ್ಲಿರುವ ಮನೆಯಲ್ಲಿ ತಾಯಿ ಜತೆಗೆ ಯುವತಿ ವಾಸವಿದ್ದಳು. ಯುವತಿಯನ್ನು ಮದುವೆ ಮಾಡಿಕೊಡುವಂತೆ ಧಮ್ಕಿಯನ್ನು ಹಾಕಿದ್ದನಂತೆ. ಕೆಲಸ ಇಲ್ಲದೆ ಊರಲ್ಲಿ ಸೋಮಾರಿಯಾಗಿರುವ ತಿಪ್ಪಣ್ಣ ಡೋಕರೆ, ಒಂದೇ ಸಮುದಾಯಕ್ಕೆ ಸೇರಿದರೂ ಮದುವೆ ಮಾಡಲು ನಿರಾಕರಣೆ ಮಾಡಲಾಗಿದೆ. ತಿಪ್ಪಣ್ಣನ ಕಿರಿಕಿರಿಗೆ  ಬೇಸತ್ತು ಕುಟುಂಬ ಪೊಲೀಸರ ಮೊರೆ ಹೋಗಿದೆ. ಮೂರು ವರ್ಷಗಳ ಹಿಂದೆಯೇ ತಿಪ್ಪಣ್ಣ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರ ಎಚ್ಚರಿಕೆಯಿಂದ ಯುವತಿ ತಂಟೆಗೆ ಹೋಗದೇ ಸೈಲೆಂಟ್ ಆಗಿದ್ದನಂತೆ. ಈಗ ಮತ್ತೆ ಬಾಲಬಿಚ್ಚಿರುವ ತಿಪ್ಪಣ್ಣ, ಮತ್ತೆ ಪೊಲೀಸರ ಮೊರೆ ಹೋದ ಕುಟುಂಬ.

ಇದನ್ನೂ ವೀಕ್ಷಿಸಿ:  ಪಾಸ್‌ಪೋರ್ಟ್ ರದ್ದಾದ್ರೆ ವಿದೇಶದಲ್ಲೇ ಪ್ರಜ್ವಲ್ ಲಾಕ್..? ನಿಯಮ ಹೇಳೋದೇನು..?