Asianet Suvarna News Asianet Suvarna News

ಪಾಸ್‌ಪೋರ್ಟ್ ರದ್ದಾದ್ರೆ ವಿದೇಶದಲ್ಲೇ ಪ್ರಜ್ವಲ್ ಲಾಕ್..? ನಿಯಮ ಹೇಳೋದೇನು..?

ಪ್ರಜ್ವಲ್ ಬಾರದೇ ಇದ್ದರೆ ಕುಟುಂಬದಿಂದ್ಲೇ ಬಹಿಷ್ಕಾರ ಹಾಕ್ತಾರಾ ದೊಡ್ಡಗೌಡ್ರು..?
ಎಸ್ಕೇಪ್ ದಾರಿಗಳೆಲ್ಲಾ ಒಂದೊಂದಾಗಿ ಬಂದ್.. ಪ್ರಜ್ವಲ್‌ಗೆ ಕಾದಿದೆ ಸಂಕಷ್ಟ..!
ಶುರುವಾಯ್ತು ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಪ್ರಕ್ರಿಯೆ..!
 

ಪ್ರಜ್ವಲ್‌ ರೇವಣ್ಣ(Prajwal Revanna) ಪೆನ್‌ಡ್ರೈವ್ ವೀರ.. ಹಾಸನದಲ್ಲಿ ಅಶ್ಲೀಲ ವೀಡಿಯೊಗಳ(Obscene video case) ಹವಾ ಎಬ್ಬಿಸಿ ವಿದೇಶದಲ್ಲಿ ಅವಿತು ಕೂತಿರೋ ಪ್ರಜ್ವಲ್ ರೇವಣ್ಣನ ಮುಂದಿರೋ ಎಸ್ಕೇಪ್ ದಾರಿಗಳಲ್ಲೇ ಒಂದೊಂದಾಗಿ ಮುಚ್ಚಿಕೊಳ್ತಾ ಇವೆ. ದೊಡ್ಡ ಕುಟುಂಬದ ಕುಡಿ ನಾನು, ಏನ್ ಮಾಡಿದ್ರೂ ನಡೆಯತ್ತೆ ಅನ್ನೋ ಧೈರ್ಯದಲ್ಲಿ ವಿದೇಶದಲ್ಲಿ ಬೆಚ್ಚಗೆ ಕೂತಿರುವ ಪ್ರಜ್ವಲ್ ರೇವಣ್ಣನಿಗೆ ಕುಟುಂಬದಿಂದ್ಲೇ ದೊಡ್ಡ ವಾರ್ನಿಂಗ್ ಸಿಕ್ಕಿದೆ. ಮಾಜಿ ಪ್ರಧಾನಿ, ಪ್ರಜ್ವಲ್ ರೇವಣ್ಣನ ಅಜ್ಜ ಸ್ವತಃ ದೇವೇಗೌಡರೇ(HD Devegowda) ಮೊಮ್ಮಗನ ವಿರುದ್ಧ ವಾಪಸ್ ಬರ್ತೀಯೋ ಇಲ್ವೋ ಅಂತ ಗುಡುಗಿದ್ದಾರೆ. ಪ್ರಜ್ವಲ್ ರೇವಣ್ಣನ ಪೆನ್‌ಡ್ರೈವ್ ಪ್ರಕರಣ(Prajwal Revanna pen drive case) ದೇವೇಗೌಡರ ಕುಟುಂಬಕ್ಕೆ ತಂದಿರೋ ಮುಜುಗರ ಅಷ್ಟಿಷ್ಟಲ್ಲ. ಇದ್ರಿಂದ ದೇವೇಗೌಡ್ರು ಅದೆಷ್ಟು ನೊಂದಿದ್ದಾರೆ ಅನ್ನೋದನ್ನು ಅವ್ರ ಇತ್ತೀಚಿನ ಮುಖಭಾವವೇ ಹೇಳ್ತಾ ಇದೆ. ಜೀವಮಾನದಲ್ಲಿ ಎಂದೂ ಗಡ್ಡ ಬಿಡದ ಗೌಡರು, ಈಗ ಗಡ್ಡ ಬಿಟ್ಟಿದ್ದಾರೆ. ಆ ಹಿರಿಜೀವಕ್ಕೆ ಅಷ್ಟು ನೋವು ಕೊಟ್ಟಿದ್ದಾನೆ ಈ ಮೊಮ್ಮಗ ಮಹಾಶಯ.

ಇದನ್ನೂ ವೀಕ್ಷಿಸಿ:  ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗಿಲ್ವಾ ರಕ್ಷಣೆ..? ಚಿಕಿತ್ಸೆಗೆಂದು ಬಂದರೆ ರೋಗಿಗಳ ಮೇಲೆ ಇದೆಂಥಾ ಕ್ರೌರ್ಯ..?