ಭ್ರಷ್ಟಾಚಾರ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದ ಅಜಿತ್‌ ರೈ: ಪೊಲೀಸರ ಕೈಗೆ ತಗ್ಲಾಕ್ಕೊಂಡಿದ್ದು ಹೇಗೆ ?

ಭ್ರಷ್ಟಾಚಾರ ಹಣದಿಂದ ತಹಶೀಲ್ದಾರ್‌ ಅಜಿತ್‌ ರೈ ಐಷಾರಾಮಿ ಜೀವನವನ್ನು ನಡೆಸುತ್ತಿದ್ದ. ಶೋಕಿ ಜೀವನವೇ ಆತನ ಬದುಕಿಗೆ ಮುಳ್ಳಾಗಿದ್ದು, ಅದರಿಂದಲೇ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದಾನೆ.

Share this Video
  • FB
  • Linkdin
  • Whatsapp

ಬೆಂಗಳೂರು: ಕೆ.ಆರ್‌.ಪುರ ತಹಶೀಲ್ದಾರ್‌ ಅಜಿತ್‌ ರೈ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿರುವುದೇ ಒಂದು ರೋಚಕ ಕಥೆಯಾಗಿದೆ. ಈತ ಭ್ರಷ್ಟಾಚಾರದ ಹಣದಿಂದ ಐಷಾರಾಮಿ ಮತ್ತು ಶೋಕಿ ಜೀವನವನ್ನು ನಡೆಸುತ್ತಿದ್ದ. ಇದೇ ಈತ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳಲು ಕಾರಣವಾಗಿದೆ. ಆತನ ಬಳಿ ಇದ್ದ ಐಷಾರಾಮಿ ಕಾರುಗಳು ಹಾಗೂ ಜೀವನ ಶೈಲಿಯಿಂದ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಭ್ರಷ್ಟಾಚಾರ ಆರೋಪದಡಿ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್‌ ಅಜಿತ್‌ ರೈ ಮನೆ ಮೇಲೆ ಬುಧವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಸತತ 30 ಗಂಟೆಗಳ ಪರಿಶೀಲನೆ ವೇಳೆ ಅಕ್ರಮ ಆಸ್ತಿ ಗಳಿಕೆ ಮಾಡಿರುವುದು ಕಂಡುಬಂದಿತ್ತು.

ಇದನ್ನೂ ವೀಕ್ಷಿಸಿ: ಇಂದಿನಿಂದ ಹೊಸ ಸರ್ಕಾರದ ಚೊಚ್ಚಲ ಬಜೆಟ್‌ ಅಧಿವೇಶನ: ಜುಲೈ 7 ರಂದು ಅಯವ್ಯಯ ಮಂಡನೆ

Related Video