ಪ್ರಜ್ವಲ್ ಪೆನ್‌ಡ್ರೈವ್ ಕೇಸ್ ಸಿಬಿಐ ಹೆಗಲಿಗೆ ಬೀಳುತ್ತಾ? ಹೈಕೋರ್ಟ್ ಮೊರೆ ಹೋಗಲು ಹೆಚ್‌ಡಿಕೆ ಚಿಂತನೆ?
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣವನ್ನು(Prajwal Revanna pen drive case) ಸಿಬಿಐ(CBI) ತನಿಖೆಗೆ ವಹಿಸುವಂತೆ ಒತ್ತಾಯಿಸಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ(HD Kumaraswamy) ಹೈಕೋರ್ಟ್(High Court) ಮೊರೆ ಹೋಗುವ ಸಾಧ್ಯತೆ ಇದೆ. ಸಿಬಿಐ ತನಿಖೆ ಬಗ್ಗೆ ಕಾನೂನು ತಜ್ಞರ ಜೊತೆ ಹೆಚ್‌ಡಿಕೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕಾನೂನಿನಲ್ಲಿ ಏನೇನು ಅವಕಾಶಗಳಿವೆ ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆಯಂತೆ. ಈ ಮೂಲಕ ಮುಂದಿನ ಕಾನೂನು ಹೋರಾಟಕ್ಕೆ ಹೆಚ್‌ಡಿಕೆ ರೆಡಿಯಾದಂತೆ ಆಗಿದೆ. ಸಿಬಿಐಗೆ ವಹಿಸಲು ರಾಜ್ಯಪಾಲರನ್ನು ಜೆಡಿಎಸ್ ಭೇಟಿಯಾಗಿತ್ತು. ರಾಜಭವನಕ್ಕೆ ನಿಯೋಗ ತೆರಳಿ ಮನವಿಯನ್ನು ಸಲ್ಲಿಸಿದೆ. ಅಲ್ಲದೇ ಎಸ್‌ಐಟಿ ತನಿಖೆ ವಿರುದ್ಧ ಕುಮಾರಸ್ವಾಮಿ ಅಸಮಾಧಾನವನ್ನು ಹೊರಹಾಕಿದ್ದಾರೆ.
ಇದನ್ನೂ ವೀಕ್ಷಿಸಿ: ಎಣ್ಣೆ ಹೊಡೆದು ಡ್ರೈವ್ ಮಾಡೋ ಮುನ್ನ ಹುಷಾರ್..! ಆರ್‌ಟಿಒದಿಂದಲೂ ಇನ್ಮುಂದೆ ಡ್ರಿಂಕ್ ಅಂಡ್ ಡ್ರೈವ್ ಆಪರೇಷನ್!