Asianet Suvarna News Asianet Suvarna News

ಪ್ರೇಮಿಗೆ ಹೇಳಿದಳು ಮದುವೆಯಾಗಲ್ಲ ಐ ಆ್ಯಮ್ ಸಾರಿ, ಅವಳೆದೆಗೆ ಚುಚ್ಚೇ ಬಿಟ್ಟ 16 ಬಾರಿ!

ಬದುಕು ಕಟ್ಟಿಕೊಳ್ಳಲು ಎರಡು ಮಕ್ಕಳೊಂದಿಗೆ ಬೆಂಗಳೂರಿಗೆ ಆಗಮಿಸಿದ ಈಕೆ, ಕಷ್ಟಪಟ್ಟು ದುಡಿದು ಜೀವನ ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಳು. ಈ ವೇಳೆ ಪರಿಚಯವಾದನೊಬ್ಬನ ಜೊತೆ ಆತ್ಮೀಯವಾಗುತ್ತಿದ್ದಂತೆ ಮದುವೆ ಪ್ರಪೋಸಲ್  ನಿರಾಕರಿಸಿ ಕೊಲೆಯಾಗಿ ಹೋಗಿದ್ದಾಳೆ.

ಬೆಂಗಳೂರು(ಏ.02) ಕೋಲ್ಕತಾದಿಂದ ತನ್ನ ಇಬ್ಬರು ಮಕ್ಕಳೊಂದಿಗೆ 42 ವರ್ಷದ ಫರೀದಾ ಬೆಂಗಳೂರಿಗೆ ಆಗಮಿಸಿದ್ದಳು. ಬೆಂಗಳೂರಿನಲ್ಲಿ ಕೆಲಸ ಗಿಟ್ಟಿಸಿಕೊಂಡು ಕೆಲದಲ್ಲಿ ಮಗ್ನಳಾಗಿದ್ದಳು. ಈ ವೇಳೆ ಪರಿಚಯವಾಗಿದ್ದವನೇ ಗಿರೀಶ್ ಅಲಿಯಾಸ್ ರೆಹಾನ್ ಅಹಮ್ಮದ್. ಗಂಡನ ನಿಧನದ ಬಳಿಕ ಬೆಂಗಳೂರಿಗೆ ಆಗಮಿಸಿದ ಫರೀದಾಗೆ ಬೆಂಗಳೂರಲ್ಲಿ ರೆಹಾನ್ ಅಹಮ್ಮದ್ ಜೊತೆ ಪ್ರೀತಿ ಶುರುವಾಗಿದೆ. ಆದರೆ ಇದಕ್ಕಿದ್ದಂತೆ ಜಯನಗರದ ಪಾರ್ಕ್ ಬಳಿ ಇದೇ ರೆಹಾನ್ ಅಹಮ್ಮದ್‌ನಿಂದ ಕೊಲೆಯಾಗಿದ್ದಾಳೆ. ಅಷ್ಟಕ್ಕೂ ಪ್ರೀತಿಯಲ್ಲಿ ಬಿದ್ದಿದ್ದ ಫರೀದಾಳು ಕೊಲೆಯಾಗಿದ್ದೇಕೆ?
 

Video Top Stories