ಚಿನ್ನದ ಮೇಲಿನ ವ್ಯಾಮೋಹಕ್ಕೆ ವೃದ್ಧೆ ಬಲಿ: ಪಕ್ಕದ ಮನೆಯ ತಾಯಿ-ಮಗನಿಂದ ಕೃತ್ಯ

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಶಾಂತಿನಗರದಲ್ಲಿ ನಡೆದ ವೃದ್ಧೆಯ ಕೊಲೆ ಪ್ರಕರಣ ಇಂಟರೆಸ್ಟಿಂಗ್ ತಿರುವು ಪಡೆದಿದ್ದು, ಪಕ್ಕದ ಮನೆಯವರು ಖಾರದ ಪುಡಿ ಎರಚಿ ಚಿನ್ನಕ್ಕಾಗಿ ಕೊಲೆ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಶಾಂತಿನಗರದಲ್ಲಿ ಮನೆಯೊಳಗೆ ಮಂಚದ ಮೇಲೆ ಮಲಗಿದ್ದ ವೃದ್ಧೆಯ ಕೊಲೆ ಪ್ರಕರಣ ಜನರನ್ನು ಬೆಚ್ಚಿ ಬೀಳಿಸಿತ್ತು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ 74 ವರ್ಷದ ಗೀತಾ ಎಂಬ ವೃದ್ಧೆಯನ್ನು ಪಕ್ಕದ ಮನೆಯವರೇ ಆದ 70 ವರ್ಷದ ಶಾಂತಾಬಾಯಿ ಹಾಗೂ ಆಕೆಯ 47 ವರ್ಷದ ಮಗ ಆನಂದ್ ಕಿರಣ್ ಶಿಂಧೆ ಖಾರದ ಪುಡಿ ಎರಚಿ ಚಿನ್ನಕ್ಕಾಗಿ ಕೊಲೆ ಮಾಡಿರುವುದು ಈಗ ಬಯಲಾಗಿದೆ. ಈ ಇಬ್ಬರು ವೃದ್ಧೆಯ ಬಳಿ ಇದ್ದ ಚಿನ್ನವನ್ನು ಕೇಳಿದ್ದು, ಆದ್ರೆ ಆಕೆ ನಿರಾಕರಿಸಿದಾಗ ಕೊಲೆ ಮಾಡಿದ್ದಾರೆ.

ಬಾಗಲಕೋಟೆಯಲ್ಲಿ ಮರ್ಯಾದಾ ಹತ್ಯೆ: ಅಪ್ರಾಪ್ತೆ ಮತ್ತು ಬಾಯ್‌ಫ್ರೆಂಡ್‌ ಕೊಲೆ ಮಾಡಿದ ಕುಟುಂಬ

Related Video