Mangaluru Auto Blast Case: ಅಪ್ಪ ಕಾರ್ಗಿಲ್ ವೀರ, ಮಗ ಉಗ್ರ ಸಂಚುಕೋರ: ಮಾಜಿ ಸೈನಿಕನ ಮಗ ಭಯೋತ್ಪಾದಕನಾದ ಕಥೆ

Mangaluru Auto Rickshaw Blast Case: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್‌ನ ಮಾಸ್ಟರ್‌ಮೈಂಡ್ ಇವನೇ, ಬೆಚ್ಚಿ ಬೀಳಿಸುತ್ತಿದೆ ಅಬ್ದುಲ್ ಮತೀನ್‌ ತಾಹನ ಕರಾಳ ಚರಿತ್ರೆ, ಸೇನೆಯಲ್ಲಿ 26 ವರ್ಷ ಸೇವೆ ಸಲ್ಲಿಸಿದ್ದರು ಮತೀನ್ ತಂದೆ ಮನ್ಸೂರ್, NIA ಮೋಸ್ಟ್ ವಾಂಟೆಡ್ ಮತೀನ್.. ಎಂಥಾ ತಂದೆಗೆ ಎಂಥಾ ಮಗ? 

Share this Video
  • FB
  • Linkdin
  • Whatsapp

ಮಂಗಳೂರು (ನ. 23): ಆ ತಂದೆ ಕಾರ್ಗಿಲ್ ಯುದ್ಧದಲ್ಲಿ (Kargil War) ಪಾಕಿಸ್ತಾನದ ಸೈನಿಕರ ವಿರುದ್ಧ ಹೋರಾಡಿದವರು. ಕಣ್ಣಿಗೆ ಎಣ್ಣೆ ಬಿಟ್ಕೊಂಡು 26 ವರ್ಷಗಳ ಕಾಲ ದೇಶದ ಗಡಿ ಕಾದವರು. ಆದ್ರೆ ಆ ತಂದೆಯ ಮಗ ಮಾತ್ರ ದೇಶದ ಭದ್ರತೆಗೆ ಧಕ್ಕೆ ತಂದಿರೋ ಭಯೋತ್ಪಾದಕ. ಇದು ಮಂಗಳೂರಿನ ಕುಕ್ಕರ್‌ ಬಾಂಬ್ (Mangaluru Auto Blast) ಬ್ಲಾಸ್ಟಿನ ಮಾಸ್ಟರ್ ಮೈಂಡ್, NIA ಮೋಸ್ಟ್ ವಾಂಟೆಡ್ ಟೆರರಿಸ್ಟ್ ಅಬ್ದುಲ್ ಮತೀನ್‌ನ ಕರಾಳ ಕಥೆ. ನೀವು ನೆಮ್ಮದಿಯಿಂದ ನಿದ್ದೆ ಮಾಡ್ತಿದ್ದೇವೆ ಅಂದ್ರೆ ಅದಕ್ಕೆ ಕಾರಣ ದೇಶ ಕಾಯ್ತಿರೋ ಸೈನಿಕರು. ಅದೇ ಸೈನಿಕನ ಮಗನೊಬ್ಬ ದೇಶದ ನಿದ್ದೆ ಕೆಡಿಸಲು ಹೊರಟ್ರೆ ಹೇಗಿರತ್ತೆ ಹೇಳಿ? ಈಗ ಆಗಿರೋದು ಅದೇ. ತೀರ್ಥಹಳ್ಳಿಯ (Thirthahalli) ಆ ಮಾಜಿ ಸೈನಿಕನ ಮಗ, ಭಯೋತ್ಪಾದಕನಾಗಿ ದೇಶದ ಭದ್ರತೆಗೆ ಧಕ್ಕೆ ತಂದಿದ್ದಾನೆ. ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆ ಮಾಸ್ಟರ್ ಮೈಂಡ್‌ಗಾಗಿ ಖಾಕಿ ತಲಾಷ್ ನಡೆಸ್ತಾ ಇದೆ. ದೇಶ ಕಾದ ಸೈನಿಕ ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿರೋ ಮಗನ ಖತರ್ನಾಕ್ ಕಥೆಯೇ ಇವತ್ತಿನ ಸುವರ್ಣ ಸ್ಪೆಷಲ್

ಇದನ್ನೂ ಓದಿ: ಮಂಗಳೂರು ಬ್ಲಾಸ್ಟ್ ಪ್ರಕರಣ: ಉಗ್ರ ಕೃತ್ಯಕ್ಕೆ 'ಕೇಸರಿ ಬಣ್ಣ' ಬಳಿಯಲು ನಡೆದಿತ್ತಾ ಸಂಚು

Related Video