Asianet Suvarna News Asianet Suvarna News

ಸಿಲಿಕಾನ್‌ ಸಿಟಿಯಲ್ಲಿ ಬೆಚ್ಚಿಬೀಳಿಸುವ ದಂಧೆ: ಬೆಂಗ್ಳೂರಿಂದಲೇ ನಡೆಯುತ್ತಿದೆಯಾ ಐಸಿಸ್ ನೇಮಕಾತಿ?

*  ವಾಟ್ಸಾಪ್‌ ಗ್ರೂಪ್‌ನಲ್ಲಿ ಆರೋಪಿಗಳಿಂದ ಫಂಡ್‌ ಸಂಗ್ರಹ 
*  ಬೆಂಗಳೂರಿನಲ್ಲಿ ವೀಸಾ, ಪಾಸ್‌ಪೋರ್ಟ್‌ ಪ್ರಕ್ರಿಯೆ 
*  ಯುವಕರನ್ನ ಮತಾಂತರ ಮಾಡಿ ಬಳಿಕ ಸಿರಿಯಾಗೆ ರವಾನೆ
 

ಬೆಂಗಳೂರು(ಮೇ.24): ಬೆಂಗಳೂರಿಗರು ಬೆಚ್ಚಿ ಬೀಳಿಸುವಂತ ಸುದ್ದಿ ಇದು. ಹೌದು, ಸಿಲಿಕಾನ್‌ ಸಿಟಿಯಲ್ಲಿ ಒಂದು ದೊಡ್ಡ ದಂಧೆ ನಡೆಯುತ್ತಿದೆ. ಈ ದಂಧೆಯ ಬಗ್ಗೆ ಕೇಳಿದ್ರೆ ನೀವು ಅಚ್ಚರಿ ಆಗೋದು ಪಕ್ಕಾ. ಐಸಿಸ್‌ ಉಗ್ರ ಚಟುವಟಿಕೆಗೆ ಕರ್ನಾಟಕ ಅಡ್ಡೆಯಾಯ್ತಾ?. ಬೆಂಗಳೂರಿನಿಂದಲೇ ನಡೆಯುತ್ತಿದೆ ಅಂತೆ ಐಸಿಸ್‌ ನೇಮಕಾತಿ. ಪ್ರತಿಯೊಂದು ಐಸಿಸ್‌ ಚಟುವಟಿಕೆಗೆ ಈ ಏರಿಯಾನೇ ಅಡ್ಡಯಾಗಿದಂತೆ. ಖುರಾನ್‌ ಸರ್ಕಲ್‌ ಗ್ರೂಪ್‌ಮೂಲಕ ವೇದಿಕೆ ಸಿದ್ಧವಾಗಿತ್ತು. ವಾಟ್ಸಾಪ್‌ ಗ್ರೂಪ್‌ನಲ್ಲಿ ಆರೋಪಿಗಳಿಂದ ಫಂಡ್‌ ಸಂಗ್ರಹ ಮಾಡಲಾಗುತ್ತಿತ್ತಂತೆ. ಸಂಗ್ರಹವಾದ ಹಣ ಬೆಂಗಳೂರಿನಲ್ಲೇ ಡಾಲರ್ಸ್‌ ಆಗಿ ಮಾರ್ಪಾಡುಗುತ್ತದೆ. ಕರ್ಮಷಿಯಲ್‌ ಸ್ಟ್ರೀಟ್‌ನಲ್ಲಿ ಹಣ ಡಾಲರ್ಸ್‌ ಆಗಿ ಕನ್ವರ್ಟ್‌ ಆಗುತ್ತಿತ್ತು. ಬೆಂಗಳೂರಿನಲ್ಲಿ ವೀಸಾ, ಪಾಸ್‌ಪೋರ್ಟ್‌ ಪ್ರಕ್ರಿಯೆ ನಡೆಯುತ್ತಿದೆ. ಯುವಕರನ್ನ ಮತಾಂತರ ಮಾಡಿ ಬಳಿಕ ಸಿರಿಯಾಗೆ ರವಾನೆ ಮಾಡಲಾಗುತ್ತಿತ್ತಂತೆ. 

ಅನೈತಿಕ ಗರ್ಭ ಧರಿಸಿದವರಿಗೆ ಹೆರಿಗೆ, ಹುಟ್ಟಿದ ಮಕ್ಕಳ ಮಾರಾಟ!

Video Top Stories