Asianet Suvarna News Asianet Suvarna News

ಹೆಂಡತಿ ಯಾಕೆ ಕಾಡುತಿ! ಪತ್ನಿ ಮನೆ ಮುಂದೆ ಪ್ರೊಟೆಸ್ಟ್ ಕುಳಿತ IPS ಅಧಿಕಾರಿ

ಇದು ಐಪಿಎಸ್ ಗಂಡ-ಹೆಂಡತಿ ಗಲಾಟೆ/ ಮಗುವನ್ನು ಪತ್ನಿ ನೋಡಲು ಬಿಡುತ್ತಿಲ್ಲ/ ಪತ್ನಿಯ ಮನೆ ಮುಂದೆ ಗಂಡನ ಪ್ರತಿಭಟನೆ/ ಡೈವೋರ್ಸ್ ಪಡೆದುಕೊಂಡ ಹೆಂಡತಿ/ ಹೆಂಡತಿ ಮನೆ ಮುಂದೆ ಪ್ರತಿಭಟನೆ ಕುಳಿತ ಐಪಿಎಸ್ ಅಧಿಕಾರಿ

ಬೆಂಗಳೂರು[ಫೆ. 09]  ಇದು ಐಪಿಎಸ್ ಕುಟುಂಬದ ಗಂಡ-ಹೆಂಡತಿ ಕತೆ.  ಇದೀಗ ಬೀದಿಗೆ ಬಂದಿದೆ. ಮಕ್ಕಳನ್ನು ನೋಡಲು ಬಿಡದ ಐಪಿಎಸ್ ಪತ್ನಿ ವಿರುದ್ಧ ಗಂಡ ಐಪಿಎಸ್ ಅಧಿಕಾರಿ ಪ್ರತಿಭಟನೆ ಕುಳಿತಿದ್ದಾರೆ.

ಹೆಂಡತಿಯ ಮನೆ ಮುಂದೆ ಗಂಡ ಏಕಾಂಗಿಯಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಕಲಬುರಗಿ ಐಎಸ್‍ಡಿಯಲ್ಲಿ ಎಸ್‍ಪಿ ಆಗಿರುವ ಅರುಣ್ ರಂಗರಾಜನ್ ಅವರು ತಮ್ಮ ಪತ್ನಿ ಇಲಕಿಯಾ ಕರುಣಾಕರನ್ ಮನೆ ಮುಂದೆ ಪ್ರತಿಭಟನೆ ಮಾಡಿದ್ದಾರೆ.  ಮಕ್ಕಳನ್ನು ನೋಡಲು ಪತ್ನಿ ಅವಕಾಶ ಕೊಡುತ್ತಿಲ್ಲ ಎಂದು ಅರುಣ್ ರಂಗರಾಜನ್ ಅವರ ಗಂಭೀರ ಆರೋಪ.

ಪೊಲೀಸ್ ಚೌಕಿಗೆ ಐಷಾರಾಮಿ ಕಾರು ಡಿಕ್ಕಿ; ಫನ್ ವರ್ಡ್ ಮಾಲೀಕನ ಪುತ್ರನಿಂದ ಫನ್?

ಹೆಂಡತಿ ಇಲಕಿಯಾ ಕರುಣಾಕರನ್ ವಿವಿಐಪಿ ಭದ್ರತಾ ಡಿಸಿಪಿಯಾಗಿದ್ದಾರೆ. ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇಬ್ಬರ ನಡುವೆ ಸಾಮರಸ್ಯ ಇರಲಿಲ್ಲ. ಹೀಗಾಗಿ ಕೋರ್ಟ್ ಮೆಟ್ಟಿಲೇರಿ ಡೈವೋರ್ಸ್ ಪಡೆದುಕೊಂಡಿದ್ದರು. ಡೈವೋರ್ಸ್ ಆಗಿದ್ದರಿಂದ ಇಬ್ಬರೂ ದೂರವೇ ಉಳಿದಿದ್ದರು. ಈ ನಡುವೆ ಇಬ್ಬರು ಒಂದಾಗಿ ಮಗು ಮಾಡಿಕೊಂಡಿದ್ದರು. ಈಗ ಮಗು ನೀಡಲು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.