'ಇತ್ತೀಚೆಗೆ ಮೃತಪಟ್ಟ ನಟ' 'ರಾತ್ರಿ ಆಕ್ಸಿಡೆಂಟ್' ಇಂದ್ರಜಿತ್ ಲಂಕೇಶ್ ಬೊಟ್ಟು ಯಾರ ಕಡೆ?

ಬೆಂಗಳೂರಿನ ಅನಿಕಾ ಹೆಸರಿನ ಡ್ರಗ್ ಪೆಡ್ಲರ್‌ನ್ನು ದೆಹಲಿಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆಕೆ ನಾಲ್ಕು ಪುಟಗಳ ತಪ್ಪೊಪ್ಪಿಗೆಯನ್ನೂ ನೀಡಿದ್ದಾರೆ. ಮೂಲತಃ ತಮಿಳುನಾಡಿನವಳಾಗಿದ್ದ ಅನಿಕಾ 24ನೇ ವಯಸ್ಸಿನಲ್ಲೇ ಡ್ರಗ್ಸ್ ದಂಧೆ ಆರಂಭಿಸಿದ್ದಳೆಂಬ ಆಘಾತಕಾರಿ ವಿಚಾರವೂ ಬಯಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಆ.29): ಬೆಂಗಳೂರಿನ ಅನಿಕಾ ಹೆಸರಿನ ಡ್ರಗ್ ಪೆಡ್ಲರ್‌ನ್ನು ದೆಹಲಿಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆಕೆ ನಾಲ್ಕು ಪುಟಗಳ ತಪ್ಪೊಪ್ಪಿಗೆಯನ್ನೂ ನೀಡಿದ್ದಾರೆ. ಮೂಲತಃ ತಮಿಳುನಾಡಿನವಳಾಗಿದ್ದ ಅನಿಕಾ 24ನೇ ವಯಸ್ಸಿನಲ್ಲೇ ಡ್ರಗ್ಸ್ ದಂಧೆ ಆರಂಭಿಸಿದ್ದಳೆಂಬ ಆಘಾತಕಾರಿ ವಿಚಾರವೂ ಬಯಲಾಗಿದೆ. 

Add Asianetnews Kannada as a Preferred SourcegooglePreferred

ಡ್ರಗ್ಸ್‌ ನಶೆ, ಕಾರು ಆಕ್ಸಿಡೆಂಟ್ : ಅಪಘಾತಕ್ಕೀಡಾದ ಶರ್ಮಿಳಾ ಮಾಂಡ್ರೆ ಹೇಳೋದಿದು..!

ಇನ್ನು ಈಕೆ ಸ್ಯಾಂಡಲ್‌ವುಡ್‌ ನಟ ನಟಿಯರಿಗೂ ಡ್ರಗ್ಸ್‌ ಸಪ್ಲೈ ಮಾಡುತ್ತಿದ್ದಳು. ಸದ್ಯ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮೊಟ್ಟ ಮೊದಲ ಬಾರು ಬಹಿರಂಗವಾಗಿ ಈ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ವ್ಯವಹಾರ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. 

ಅಲ್ಲದೇ ಹಲವಾರು ಯುವ ನಟ ಹಾಗೂ ನಟಿಯರು ಕೆಲವು ಸಿನಿಮಾಗಳನ್ನು ಮಾಡಿ ರೇವ್ ಪಾರ್ಟಿ, ಡ್ರಗ್ ಪಾರ್ಟಿ ಎಂದು ರೆಸಾರ್ಟ್ ಹಾಗೂ ಮನೆಗಳಲ್ಲಿ ಆಯೋಜಿಸುತ್ತಿದ್ದರು. ಕಾರುಗಳಲ್ಲೂ ಇಂತಹ ಪಾರ್ಟಿಗಳು ನಡೆಯುತ್ತಿದ್ದವು. ರಾತ್ರೋ ರಾತ್ರಿ ಹಣ ಬರಬೇಕು, ಶ್ರೀಮಂತರಾಗಬೇಕು, ಫೇಮಸ್ ಆಗುವ ಹುಚ್ಚಲ್ಲಿ ಇಂತಹ ದಂಧೆ ನಡೆಸುತ್ತಿದ್ದರು. ಖ್ಯಾತ ನಟ, ನಿರ್ದೇಶಕ ಹಾಗೂ ರಾಜಕಾರಣಿಗಳ ಮಕ್ಕಳು ಇಂತಹ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದಿದ್ದಾರೆ.

ಮಾದಕ ಲೋಕದ ಸೀಕ್ರೆಟ್ ರಿವೀಲ್, ರಾಜಕಾರಣಿ ಮಗನಿಗೂ ಡ್ರಗ್ಸ್ ಲಿಂಕ್?

ಇಷ್ಟೇ ಅಲ್ಲದೇ ಇನ್ನೂ ಸ್ಯಾಂಡಲ್‌ವುಡ್‌ನಲ್ಲಿ ನಡೆಯುತ್ತಿರುವ ಈ ಡ್ರಗ್ಸ್‌ ಮಾಫಿಯಾ ಕುರಿತಾಗಿ ಮತ್ತಷ್ಟು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇಲ್ಲಿದೆ ವಿವರ

Related Video