ಶಾಂತಂ ಪಾಪಂ ಧಾರಾವಾಹಿ ನೋಡಿ ಗಂಡನ ಹತ್ಯೆ!
- ಪ್ರಿಯಕರನೊಡಗೂಡಿ ಪತಿಯ ಕೊಲೆಗೈದ ಪತ್ನಿ
- ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಹಿನ್ನೆಲೆ
- ಹತ್ಯೆಗೆ ಶಾಂತಂ ಪಾಪಂ ಧಾರಾವಾಹಿ ಪ್ರೇರಣೆ
ಮಳವಳ್ಳಿ (ಸೆ.21) : ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಹತ್ಯೆಯಾದ ಶಶಿಕುಮಾರ್ ಅವರ ಪತ್ನಿ ನಾಗಮಣಿ (28), ಆಕೆಯ ಪ್ರಿಯಕರ ಹೇಮಂತ್ (25) ಬಂಧಿತ ಆರೋಪಿಗಳಾಗಿದ್ದಾರೆ. ಭಾನುವಾರ ರಾತ್ರಿ ಎನ್‌ಇಎಸ್ ಬಡಾವಣೆಯಲ್ಲಿ ವಾಸವಿದ್ದ ಮನೆಯಲ್ಲಿ ಪತ್ನಿ ನಾಗಮಣಿ ಮತ್ತು ಮಕ್ಕಳನ್ನು ಕೈಕಾಲು ಕಟ್ಟಿಬಾಯಿಗೆ ಬಟ್ಟೆತುರುಕಿ ಶಶಿಕುಮಾರ್ ಅವರನ್ನು ಹತ್ಯೆ ಮಾಡಲಾಗಿತ್ತು. ಮೃತನ ತಾಯಿ ತಾಯಮ್ಮ ತನ್ನ ಸೊಸೆಯೇ ಹತ್ಯೆ ಮಾಡಿದ್ದಾರೆಂದು ಶಂಕಿಸಿ ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪುರ ಠಾಣೆಯ ಪೊಲೀಸರು ನಾಗಮಣಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ನಾಗಮಣಿ ಮತ್ತು ಆಕೆಯ ಪ್ರಿಯಕರ ಹೇಮಂತ್ ಇಬ್ಬರೂ ಸೇರಿ ಶಶಿಕುಮಾರ್‌ನನ್ನು ಕೊಲೆ ಮಾಡಿರುವ ನಿಜಾಂಶ ಬೆಳಕಿಗೆ ಬಂದಿದೆ.
ಪತಿಯನ್ನೇ ಹತ್ಯೆಗೈದ ಪತ್ನಿ ಆಕೆಯ ಪ್ರಿಯಕರಗೆ ಜೀವಾವಧಿ ಶಿಕ್ಷೆ
ಕೊಲೆಗೆ ಧಾರವಾಹಿ ಪ್ರೇರಣೆ: ಕನಕಪುರದ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಉದ್ಯೋಗಕ್ಕೆ ಹೋಗುತ್ತಿದ್ದ ನಾಗಮಣಿಗೆ ಹೇಮಂತ್ ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ನಂತರದಲ್ಲಿ ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದು ನಿರಂತರವಾಗಿ ಮುಂದುವರೆಸಿಕೊಂಡಿದ್ದರು ಎಂದು ಗೊತ್ತಾಗಿದೆ.
ಇತ್ತೀಚೆಗೆ ಪತ್ನಿ ಪೋನ್‌ನಲ್ಲಿ ಹೆಚ್ಚಾಗಿ ಮಾತನಾಡುತ್ತಿರುವುದನ್ನು ಅರಿತ ಶಶಿಕುಮಾರ್ ಆಕೆಯೊಂದಿಗೆ ಜಗಳವಾಡಿದ್ದನಲ್ಲದೆ ಮೊಬೈಲ್ ಕಿತ್ತುಕೊಂಡು ಕೆಲಸ ಬಿಡಿಸಿದ್ದನು ಎನ್ನಲಾಗಿದೆ. ಪ್ರಿಯಕರನೊಂದಿಗೆ ಅನೈತಿಕ ಸಂಬಂಧಕ್ಕೆ ಅಡ್ಡಿ ಬಂದ ಗಂಡನನ್ನು ಮುಗಿಸಬೇಕೆಂದು ಹೊಂಚು ಹಾಕಿದ ನಾಗಮಣಿ, ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಶಾಂತಂ ಪಾಪಂ ಎಂಬ ಧಾರಾವಾಹಿಯಿಂದ ಪ್ರೇರಣೆ ಪಡೆದು ಗಂಡನ ಕೊಲೆಗೆ ಸಂಚು ರೂಪಿಸಿದಳು.
ಪತಿಯ ಕೊಲೆ ಮಾಡಿದ್ದರೂ ಪತ್ನಿ ಪಿಂಚಣಿ ಪಡೆಯಲು ಅರ್ಹಳು: ಹೈಕೋರ್ಟ್
ಭಾನುವಾರ ರಾತ್ರಿ ಪ್ರಿಯಕರ ಹೇಮಂತ್‌ನನ್ನು ಮನೆಗೆ ಕರೆಸಿಕೊಂಡು ಮಗನಿಗೆ ಮೊಬೈಲ್ ಕೊಟ್ಟು ರೂಮಿಗೆ ಕಳುಹಿಸಿದಳು. ಮದ್ಯ ಸೇವನೆ ಮಾಡಿಕೊಂಡು ಮನೆಗೆ ಬಂದ ಪತಿಗೆ ವೇಲ್‌ನಿಂದ ಕುತ್ತಿಗೆ ಬಿಗಿದಿದ್ದಲ್ಲದೆ, ದಿಂಬಿನಿಂದ ಮುಖ ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಆನಂತರ ಅದನ್ನು ಆತ್ಮಹತ್ಯೆ ಎಂದು ಬಿಂಬಿಸುವ ಸಲುವಾಗಿ ತನ್ನ ಮತ್ತು ಮಗುವಿನ ಕೈಕಾಲು ಕಟ್ಟಿಬಾಯಿಗೆ ಬಟ್ಟೆತುರುಕಿ ಯಾರೋ ದುಷ್ಕರ್ಮಿಗಳು ತನ್ನ ಪತಿಯನ್ನು ಕೊಲೆ ಮಾಡಲಾಗಿದೆ ಎಂದು ನಾಗಮಣಿ ನಾಟಕವಾಡಿದ್ದಳು. ನಾಗಮಣಿ ವಿರುದ್ಧವೇ ಮೃತರ ತಾಯಿ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.