Asianet Suvarna News Asianet Suvarna News

ಐಎಂಎ ಬಹುಕೋಟಿ ವಂಚನೆ; ರೋಷನ್‌ ಬೇಗ್‌ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲೇಬೇಕು!

ಮಾಜಿ ಸಚಿವ ರೋಷನ್ ಬೇಗ್ ಗೆ ಮತ್ತೊಂದು ಸಂಕಟ/ ನ್ಯಾಯಾಂಗ ಬಂಧನದಿಂದ ಸಿಬಿಐ ವಶಕ್ಕೆ/ ಹೆಚ್ಚಿನ ವಿಚಾರಣೆ ಅಗತ್ಯವಿದೆ/ ಸಿಬಿಐ ಅಧಿಕಾರಿಗಳಿಂದ ಕಾರಣಗಳ ಪಟ್ಟಿ

ಬೆಂಗಳೂರು (ನ. 25)  ಐಎಂಎ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಆರ್‌. ರೋಷನ್‌ ಬೇಗ್‌ ಅವರನ್ನು ವಿಚಾರಣೆಗಾಗಿ ಸಿಬಿಐ ಅಧಿಕಾರಿಗಳು ನ.28ರವರೆಗೆ ವಶಕ್ಕೆ ಪಡೆದಿದ್ದಾರೆ.

ಯಾರಿಗೂ ಬೇಡವಾದ ಮಾಜಿ ಸಚಿವ 

ನ್ಯಾಯಾಲಯ ರೋಷನ್ ಅವರನ್ನು ಸಿಬಿಐ ವಶಕ್ಕೆ ನೀಡಿದೆ ಭಾನುವಾರ ಬಂಧಿತರಾಗಿದ್ದ ಬೇಗ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಹೆಚ್ಚಿನ ವಿಚಾರಣೆ ಅಗತ್ಯ ಇರುವುದರಿಂದ ಐದು ದಿನಗಳ ವಶಕ್ಕೆ ನೀಡುವಂತೆ ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಇದನ್ನು ಪುರಸ್ಕರಿಸಲಾಗಿದೆ. 

Video Top Stories