Foeticide case: ಸರ್ಕಾರಿ ಆಸ್ಪತ್ರೆ ನರ್ಸ್‌ಗಳಿಂದಲೇ ಅಬಾರ್ಷನ್‌ ದಂಧೆ! ಮದುವೆ ಆಗಲಿ..ಆಗದಿರಲಿ ಗರ್ಭಪಾತ ಪಕ್ಕಾ !

ವಿಜಯಪುರ ಜಿಲ್ಲೆಯಲ್ಲಿ ಅಬಾರ್ಷನ್‌ ದಂಧೆ ನಡೆಯುತ್ತಿದ್ದು, ಸರ್ಕಾರಿ ಆಸ್ಪತ್ರೆ ನರ್ಸ್‌ಗಳೇ ಈ ಕೃತ್ಯವನ್ನು ಎಸಗುತ್ತಿದ್ದರು.
 

First Published Feb 15, 2024, 2:49 PM IST | Last Updated Feb 15, 2024, 2:49 PM IST

ವಿಜಯಪುರ: ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಪ್ರಕರಣ(Foeticide case) ಬಯಲಿಗೆ ಬಂದಿದ್ದು, ಈ ದಂಧೆಯನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಕವರ್ ಸ್ಟೋರಿ ತಂಡ ಬಯಲಿಗೆಳೆದಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಕಾರ್ಯವನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶ್ಲಾಘಿಸಿದೆ. ಭ್ರೂಣ ಹತ್ಯೆ ನಡೆಯುತ್ತಿದ್ದ ಸ್ಥಳಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಭೇಟಿ ನೀಡಿದೆ. ಆಯೋಗದ ಸದಸ್ಯ ಶಶಿಧರ ಕೋಸಂಬೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ. ವಿಜಯಪುರ(Vijayapura) ಮುದ್ದೇಬಿಹಾಳ ತಾಲೂಕಿನ ಹುಲ್ಲುರು ಗ್ರಾಮದಲ್ಲಿರುವ ತೋಟದ ಮನೆಯಲ್ಲಿ ಭ್ರೂಣ ಹತ್ಯೆ ನಡೆಯುತ್ತದೆ. ಮುದ್ದೇಬಿಹಾಳ ಸಿನಿಯರ್ ನರ್ಸ್(Nurses) ಆಫೀಸರ್ ಸುಭದ್ರಾ ಮನೆಯಲ್ಲೇ ಈ ಗರ್ಭಪಾತ ದಂಧೆ(Abortion) ನಡೆಯುತ್ತದೆ. ಪರಿಶೀಲನೆ ವೇಳೆ ಸರ್ಕಾರಿ ಆಸ್ಪತ್ರೆಯ ಮೆಡಿಸಿನ್, ಸಿರೆಂಜ್, ಸಲೈನ್ ಬಾಟಲ್ ಪತ್ತೆಯಾಗಿದೆ. ಜಿಲ್ಲೆಯ ಎಲ್ಲ ತಾಲೂಕಾಧಿಕಾರಿಗಳು, ಪಿಸಿಪಿಎನ್‌ಡಿಟಿ ಅಧಿಕಾಗಳ ತುರ್ತು ಸಭೆ ಕರೆಯುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಆಯೋಗದ ಸದಸ್ಯರು ನಿರ್ದೇಶನ ನೀಡಿದ್ದಾರೆ. ಮಂಡ್ಯ ಆಲೆಮನೆ ಪ್ರಕರಣದಂತೆ ಈ ಪ್ರಕರಣವನ್ನು ಸಿಐಡಿಗೆ ನೀಡಬೇಕು. ಸಿಐಡಿಗೆ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯುವೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಶಶಿಧರ ಕೋಸುಂಬೆ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  Farmers Protest: 'ದೆಹಲಿ ಚಲೋ'ಗೆ ಬೆಸ್ತು ಬಿದ್ದ ಪೊಲೀಸ್‌ ಪಡೆ: ಖಾಕಿ ಡ್ರೋನ್‌ಗೆ ಟಕ್ಕರ್‌ ಕೊಟ್ಟ ರೈತರ ಗಾಳಿಪಟಗಳು !

Video Top Stories