Asianet Suvarna News Asianet Suvarna News

ರಿಹ್ಯಾಬಿಟೇಷನ್‌ ಸೆಂಟರ್‌ಗೆ ಸೇರಿಸಿದ್ದೆ ತಪ್ಪಾ?: ನಡುರಸ್ತೆಯಲ್ಲಿಯೇ ಪತ್ನಿಗೆ ಚಾಕುವಿನಿಂದ ಇರಿದ ಗಂಡ !

ಹೆಂಡತಿಯ ಮೇಲೆ ಅನುಮಾನ ಪಟ್ಟ ಗಂಡನೊಬ್ಬ ನಡುರಸ್ತೆಯಲ್ಲೇ ಆಕೆಗೆ ಚಾಕುವಿನಿಂದ ಇರಿದಿದ್ದಾನೆ. ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

First Published Jun 24, 2023, 12:36 PM IST | Last Updated Jun 24, 2023, 12:36 PM IST

ಬೆಂಗಳೂರು: ಗಂಡನ ಕುಡಿತ ಬಿಡಿಸಲು ಹೋಗಿ ಹೆಂಡತಿ ಚಾಕು ಇರಿತಕ್ಕೆ ಒಳಗಾದ ಅಮಾನವೀಯ ಘಟನೆ ಬೆಂಗಳೂರಿನ ಬಾಣಸವಾಡಿಯಲ್ಲಿ ನಡೆದಿದೆ. ಇಬ್ಬರು ಪ್ರೀತಿಸಿ ಮದುವೆಯಾಗಿದ್ದು, ದಿವಾಕರ್‌ ಕುಡಿತ ಬಿಡಿಸಲು ಆಕೆ ಆತನನ್ನು ರಿಹ್ಯಾಬಿಟೇಷನ್‌ ಸೆಂಟರ್‌ಗೆ ಸೇರಿಸಿದ್ದರು. ಅಲ್ಲಿಂದ ಬಂದ ಬಳಿಕ ಪತಿರಾಯ ನಡುರಸ್ತೆಯಲ್ಲೇ ನಿಖಿತಾಗೆ ಚಾಕುವಿನಿಂದ ಐದು ಬಾರಿ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಆಕೆಯನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದಾರೆ. ದಿವಾಕರ್‌ ಈ ಕೃತ್ಯಕ್ಕೆ ಆತನ ಸ್ನೇಹಿತನ ಸಹಾಯ ಸಹ ಸಿಕ್ಕಿದೆ. ಪತ್ನಿಯ ಮೇಲೆ ಅನುಮಾನ ಪಟ್ಟಿದ್ದ ಗಂಡ ಕೊಲೆ ಮಾಡಲು ನಿರ್ಧರಿಸಿ, ದಾರಿಯಲ್ಲಿ ಅಪಘಾತ ಮಾಡುವ ರೀತಿ ಮಾಡುತ್ತಾರೆ. ಆಕೆ ಬಿದ್ದ ನಂತರ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಸದ್ಯ ಇಬ್ಬರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ವೀಕ್ಷಿಸಿ: Adipurush: ಆದಿಪುರುಷ್ ಟಿಕೆಟ್ ಬೆಲೆಯಲ್ಲಿ ಇಳಿಕೆ: ಆದ್ರೂ ಸಿನಿಮಾ ನೋಡಲು ಬಾರದ ಜನ!

Video Top Stories