ಪ್ರೀತಿಸಿ ಮದ್ವೆಯಾದವನಿಗೆ 17 ವರ್ಷದ ನಂತರ ಬೇಡವಾದ್ಲು, ನಂಬಿದ ಗಂಡನಿಂದಲೇ ಹೆಣವಾದ ಹೆಣ್ಮಗಳ ಕಥೆ

ಹೆಂಡತಿ ಅವನ ಬೆಣ್ಣೆ ಮಾತುಗಳನ್ನ ನಂಬಿ ಒಟ್ಟಿಗೆ ಇರಲು ಒಪ್ಪಿಕೊಂಡುಬಿಟ್ಲು. ಅದೇ ನೋಡಿ ತಪ್ಪಾಗಿದ್ದು. ಗಂಡ ಬದಲಾಗಿದ್ದಾನೆ ಅಂದುಕೊಂಡು ಮನೆಯೊಳಗೆ ಬಿಟ್ಟುಕೊಂಡ ಹೆಂಡತಿ ಇವತ್ತು ಹೆಣವಾಗಿದ್ದಾಳೆ. ಹೀಗೆ ನಂಬಿದ ಗಂಡನಿಂದಲೇ ಕೊಲೆಯಾದ ನತದೃಷ್ಟ ಹೆಣ್ಣುಮಗಳ ಕಥೆಯೇ ಇವತ್ತಿನ ಎಫ್.ಐ.ಆರ್

First Published Jul 22, 2022, 4:09 PM IST | Last Updated Jul 22, 2022, 4:09 PM IST

ಹಾಸನ,(ಜುಲೈ.22): ಅವರಿಬ್ಬರು ಪ್ರೀತಿಸಿ ಮದುವೆಯಾದವರು... ಪ್ಯಾರ ಮೆಡಿಕಲ್ ಸೈನ್ಸ್ ಓದುವಾಗ ಇಬ್ಬರು ಇಷ್ಪಟ್ಟಿದ್ರು. ಜಾತಿ ಬೇರೆಯಾಗಿದ್ರಿಂದ ಹೆತ್ತವರು ವಿರೋಧಿಸಿದ್ರೂ ಮದುವೆಯಾಗಿ ಸಂಸಾರ ಶುರು ಮಾಡಿದ್ರು. ಆದ್ರೆ ಈ ಕುಟುಂಬದ ಮೇಲೆ ಯಾರ ಕಣ್ಣು ಬಿತ್ತೋ ಏನೋ.. ಇಬ್ಬರೂ ಬೇರೆಬೇರೆಯಾಗಿದ್ರು. ಹೆಂಡತಿ ಮಗಳ ಜೊತೆ ಏಕಾಂಗಿಯಾಗಿ ಜೀವನ ನಡೆಸುತ್ತಿದ್ರೆ ಗಂಡ ಮಗನನ್ನ ನೋಡಿಕೊಂಡು ದಿನಗಳನ್ನ ದೂಡ್ತಿದ್ದ.

ಮಾಜಿ ಪ್ರೇಯಸಿ ರುಂಡ ಕಡಿದು ಕೊಂದ ಪಾಗಲ್‌ ಪ್ರೇಮಿ: ಕುಟುಂಬಸ್ಥರಿಂದ ಯುವತಿ ಅಂತ್ಯ ಸಂಸ್ಕಾರ

ಆದ್ರೆ ಅವತ್ತೊಂದು ದಿನ ಗಂಡ ಕಾಂಪ್ರೂ ಆಗೋಕೆ ಬಂದುಬಿಟ್ಟಿದ್ದ. ಹೆಂಡತಿ ಅವನ ಬೆಣ್ಣೆ ಮಾತುಗಳನ್ನ ನಂಬಿ ಒಟ್ಟಿಗೆ ಇರಲು ಒಪ್ಪಿಕೊಂಡುಬಿಟ್ಲು. ಅದೇ ನೋಡಿ ತಪ್ಪಾಗಿದ್ದು. ಗಂಡ ಬದಲಾಗಿದ್ದಾನೆ ಅಂದುಕೊಂಡು ಮನೆಯೊಳಗೆ ಬಿಟ್ಟುಕೊಂಡ ಹೆಂಡತಿ ಇವತ್ತು ಹೆಣವಾಗಿದ್ದಾಳೆ. ಹೀಗೆ ನಂಬಿದ ಗಂಡನಿಂದಲೇ ಕೊಲೆಯಾದ ನತದೃಷ್ಟ ಹೆಣ್ಣುಮಗಳ ಕಥೆಯೇ ಇವತ್ತಿನ ಎಫ್.ಐ.ಆರ್

Video Top Stories