ಹೆಂಡತಿಯ ತಂಗಿಯ ಜೊತೆಗೆ ಬಾವನ ಲವ್ವಿಡವ್ವಿ..! ಹುಬ್ಬಳಿ ತಿರುಗಾಡಿಸಿದವ ಕೊನೆಗೇನಾದ?

ಅನೈತಿಕ ಸಂಭಂದಕ್ಕೆ ಎರಡು ಜೀವಗಳು ಬಲಿಯಾಗಿವೆ.ಇನ್ನೊಂದು ಕಡೆ ಗಂಡನ ಕಳೆದುಕೊಂಡ ಹೆಂಡತಿ,ಹೆಂಡತಿಕಳೆದುಕೊಂಡ ಗಂಡ ದಿಕ್ಕು ತೋಚದಂತಹ ಸ್ಥಿತಿಯಲ್ಲಿದ್ದಾರೆ. ಪಾಪ ಪ್ರಜ್ಞೆ ಯಿಂದ ಆತ್ಮಹತ್ಯೆ ಮಾಡಿಕೊಂಡಿರೋದಂತೂ ಸೆಲ್ಫಿ ವಿಡಿಯೋ ಮೂಲಕ ಬಯಲಾಗಿದೆ 

Share this Video
  • FB
  • Linkdin
  • Whatsapp

ಹುಬ್ಬಳ್ಳಿ(ಡಿ.20) ಆತ ಆಟೋ ಡ್ರೈವರ್. ತನ್ನ ಪಾಡಿಗೆ ತಾನು ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದ. ಆವತ್ತೊಂದು ದಿನ ಗಂಡ ಹೆಂಡತಿ ಇಬ್ಬರು ಆತನ ಆಟೋ ಹತ್ತಿದ್ದಾರೆ . ಆಟೋ ಅಣ್ಣ ಅಂತಲೇ ಕರೆದು ತಮಗೆ ಉಳಿದುಕೊಳ್ಳೋಕೆ ಜಾಗ ಬೇಕು ಫ್ರೆಶ್ ಅಪ್ ಆಗಬೇಕು ಅಂತಾರೆ. ಆತ ಮಾನವೀಯತೆ ದೃಷ್ಟಿಯಿಂದ ತನ್ನ ಮನೆಯಲ್ಲೇ ಜಾಗ ಕೊಡ್ತಾನೆ.. ಫ್ರೆಶ್ಅಪ್ ಆಗಿ ಬರ್ತೀನಿ ಅಂತ ಹೇಳಿ ಹೊರಗೆ ಹೋಗ್ತಾನೆ.. ಆದ್ರೆ ಹೊರಗೆ ಹೋಗಿ ಒಳಗೆ ಬರುವಷ್ಟರಲ್ಲಿ ಗಂಡ ಹೆಂಡತಿ ನೇಣಿಗೆ ಶರಣು. ಏನಪ್ಪ ಇದು ಅಂತ ಪೊಲೀಸರಿಗೆ ಕಾಲ್ ಮಾಡಿ ಕರೆದಾಗಲೇ ನೋಡಿ ಗೊತ್ತಾಗಿದ್ದು ಅಲ್ಲಿ ನೆಣು ಬಿಗಿದುಕೊಂಡಿದ್ದ ಗಂಡ ಹೆಂಡತಿ ಅಲ್ಲ ಬದಲಿಗೆ ಲವ್ವರ್ಸ್ ಅಂತ.. ಹಾಗಾದ್ರೆ ಅಲ್ಲಿ ಸತ್ತ ಲವ್ವರ್ಸ್ ಯಾರು..? ಸಹಾಯ ಮಾಡಿದ ಆಟೋ ಅಣ್ಣನ ಮನೆಯಲ್ಲೇ ಅವರಿಬ್ಬರು ನೇಣು ಬಿಗಿದುಕೊಂಡಿದ್ದೇಕೆ..? 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video