ಶಿವಮೊಗ್ಗ: ವಿಕಲಚೇತನ ಕಲ್ಯಾಣಾಧಿಕಾರಿ ಕಚೇರಿಗೆ ನುಗ್ಗಿ ಪತ್ನಿಗೆ ಥಳಿಸಿದ ಪತಿ!

ಕಚೇರಿಗೆ ತೆರಳಿ ಮಹಿಳಾ ಅಧಿಕಾರಿ ಮೇಲೆ ಪತಿ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ನಡೆದಿದೆ. ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ಶಿಲ್ಪಾ ದೊಡ್ಡಮನಿ ಅವರ ಮೇಲೆ ಅವರ ಪತಿ ಶ್ರೀನಿವಾಸ್ ಮೂರ್ತಿ‌ ಬೋರ್ಗಿ‌ ಅವರು ಹಲ್ಲೆ ನಡೆಸಿದ್ದಾರೆ. 

Share this Video
  • FB
  • Linkdin
  • Whatsapp

ಶಿವಮೊಗ್ಗ (ಆ.05): ಕಚೇರಿಗೆ ತೆರಳಿ ಮಹಿಳಾ ಅಧಿಕಾರಿ ಮೇಲೆ ಪತಿ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ನಡೆದಿದೆ. ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ಶಿಲ್ಪಾ ದೊಡ್ಡಮನಿ ಅವರ ಮೇಲೆ ಅವರ ಪತಿ ಶ್ರೀನಿವಾಸ್ ಮೂರ್ತಿ‌ ಬೋರ್ಗಿ‌ ಅವರು ಹಲ್ಲೆ ನಡೆಸಿದ್ದಾರೆ. ಸದ್ಯ ಘಟನೆ ಸಂಬಂಧ ಮಹಿಳಾ ಠಾಣೆಗೆ ಪತಿ ಶ್ರೀನಿವಾಸಮೂರ್ತಿ‌ ವಿರುದ್ಧ ಶಿಲ್ಪಾ ದೂರು ನೀಡಿದ್ದಾರೆ. ಪತಿ ಶ್ರೀನಿವಾಸಮೂರ್ತಿ‌ ಹಾಗೂ ಶಿಲ್ಪಾ ಅವರ ವಿರುದ್ಧ ಜಗಳ ನಡೆದಿತ್ತು. ಕೌಟುಂಬಿಕ ಕಲಹ ಹಿನ್ನೆಲೆ ಕಚೇರಿಗೆ ಬಂದ ಪತಿ ಸರ್ಕಾರಿ ಕಚೇರಿ ಎಂದೂ ಲೆಕ್ಕಿಸದೆ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಮೊಬೈಲ್ ಹೊಡೆದು ಹಾಕಿ ಗಲಾಟೆ ಮಾಡಿದ್ದು, ಘಟನೆ ಬಳಿಕ ದೂರು ದಾಖಲಾಗಿದೆ.

Related Video