ಕಳ್ಳತನದ ಮಾಂಗಲ್ಯಸರ ವಾಪಸ್; ಕಳ್ಳನನ್ನು ಕ್ಷಮಿಸಿ ಮಾನವೀಯತೆ ಮೆರೆದ ದಂಪತಿ..!

ತಪ್ಪು ಮಾಡಿದ ವ್ಯಕ್ತಿಗೆ ಪಶ್ಚಾತ್ತಾಪ ಹೇಗೆ ಕಾಡುತ್ತದೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ. ಕೊರೊನಾ ಸಂಕಷ್ಟದಿಂದ ಆರ್ಥಿಕ ಸಮಸ್ಯೆ ಉಂಟಾಗಿ, ಬೇರೆ ದಾರಿ ಕಾಣದೇ ಕಳ್ಳತನಕ್ಕೆ ಇಳಿದ ವ್ಯಕ್ತಿ, ಪಶ್ಚಾತ್ತಾಪಪಟ್ಟು ಕೊನೆಗೆ ಕದ್ದಿದ್ದ ಮಾಂಗಲ್ಯ ಸರವನ್ನು ಸುವರ್ಣ ನ್ಯೂಸ್‌ಗೆ ತಲುಪಿಸಿರುವ ಅಪರೂಪದ ಪ್ರಸಂಗ ನಡೆದಿದೆ

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 19): ತಪ್ಪು ಮಾಡಿದ ವ್ಯಕ್ತಿಗೆ ಪಶ್ಚಾತ್ತಾಪ ಹೇಗೆ ಕಾಡುತ್ತದೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ. ಕೊರೊನಾ ಸಂಕಷ್ಟದಿಂದ ಆರ್ಥಿಕ ಸಮಸ್ಯೆ ಉಂಟಾಗಿ, ಬೇರೆ ದಾರಿ ಕಾಣದೇ ಕಳ್ಳತನಕ್ಕೆ ಇಳಿದ ವ್ಯಕ್ತಿ, ಪಶ್ಚಾತ್ತಾಪಪಟ್ಟು ಕೊನೆಗೆ ಕದ್ದಿದ್ದ ಮಾಂಗಲ್ಯ ಸರವನ್ನು ಸುವರ್ಣ ನ್ಯೂಸ್‌ಗೆ ತಲುಪಿಸಿರುವ ಅಪರೂಪದ ಪ್ರಸಂಗ ನಡೆದಿದೆ. ಎನ್ವಲಪ್ ಕವರ್‌ ನಲ್ಲಿ ಮಾಂಗಲ್ಯ ಸರವನ್ನಿಟ್ಟು, ಜೊತೆಗೆ ಲೆಟರನ್ನು ಬರೆದಿದ್ದಾನೆ ಆ ಪುಣ್ಯಾತ್ಮ! 

ಕ್ಷಮೆ ಇರಲಿ ಅಮ್ಮಂದಿರೇ... ಬದಲಾದ ಬೆಂಗಳೂರು ಸರಗಳ್ಳನ ಬದುಕಿನ ಕತೆ!

ಆತನ ಕೋರಿಕೆ ಮೇರೆಗೆ ಸುವರ್ಣ ನ್ಯೂಸ್ ತಂಡ ಪೊಲೀಸರ ನೆರವಿನಿಂದ ವಾರಸುದಾರರಾದ ಇಂದಿರಾನಗರದ ಕಸ್ತೂರಿ, ಬಾಲಸುಬ್ರಹ್ಮಣ್ಯ ದಂಪತಿಗೆ ಹಸ್ತಾಂತರಿಸಲಾಯಿತು. ಆ ದಂಪತಿ ಕದ್ದಿದ್ದ ವ್ಯಕ್ತಿಯನ್ನು ಕ್ಷಮಿಸಿ ಮಾನವೀಯತೆ ಮೆರೆದರು. ಮಾಧ್ಯಮ ಲೋಕದಲ್ಲಿ ಇದೊಂದು ಅಪರೂಪದ ಪ್ರಸಂಗವಾಗಿದ್ದು, ಈ ಆಪರೇಶನ್ ನಡೆದಿದ್ದು ಹೇಗೆ? ನೋಡೋಣ ಬನ್ನಿ..!

Related Video