ನಾನು ಅಪರಾಧಿಯಲ್ಲ, ತಪ್ಪು ಮಾಡಿಲ್ಲ, ಮುಂದಕ್ಕೆ ಮಾಡೋದೂ ಇಲ್ಲ: ಕಣ್ಣೀರಿಟ್ಟ ಅನುಶ್ರೀ

ಡ್ರಗ್ ಕೇಸ್‌ನಲ್ಲಿ ತಗಲ್ಲಾಕ್ಕೊಂಡಿರುವ ನಟಿ, ನಿರೂಪಕಿ ಅನುಶ್ರೀ ವಿಚಾರಣೆ ಮುಕ್ತಾಯವಾಗಿದೆ. ಇಡೀ ಪ್ರಕರಣದ ಬಗ್ಗೆ ನಟಿ ಅನುಶ್ರೀ ಮಾತನಾಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 02): ಡ್ರಗ್ ಕೇಸ್‌ನಲ್ಲಿ ತಗಲ್ಲಾಕ್ಕೊಂಡಿರುವ ನಟಿ, ನಿರೂಪಕಿ ಅನುಶ್ರೀ ವಿಚಾರಣೆ ಮುಕ್ತಾಯವಾಗಿದೆ. ಇಡೀ ಪ್ರಕರಣದ ಬಗ್ಗೆ ನಟಿ ಅನುಶ್ರೀ ಮಾತನಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'12 ವರ್ಷದ ಹಿಂದೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಗೆದ್ದಾಗ, ನನಗೆ ಇದೇ ಮುಳುವಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ನೊಟೀಸ್ ಬಂದಿದ್ದು ನಿಜ. ವಿಚಾರಣೆಗೆ ಹೋಗಿದ್ದು ನಿಜ. ಹಾಗಂದ ಮಾತ್ರಕ್ಕೆ ನಾನು ಅಪರಾಧಿ ಆಗುವುದಿಲ್ಲ. ನನ್ನ ಬಗ್ಗೆ ಬಹಳಷ್ಟು ಕಡೆ ನೆಗೆಟಿವ್ ವಿಚಾರಗಳು ಹರಿದಾಡುತ್ತಿದೆ. ಇದು ನನ್ನ ಹಾಗೂ ನನ್ನ ಕುಟುಂಬಕ್ಕೆ ಬಹಳ ನೋವಾಗಿದೆ' ಎಂದು ಕಣ್ಣೀರು ಹಾಕಿದ್ದಾರೆ. 

ಬಿಗ್‌ಬಾಸ್ ರಿಯಾಲಿಟಿ ಶೋಗೂ ಡ್ರಗ್ ನಂಟು; ಅನುಶ್ರೀ ಜೊತೆ ಇನ್ನಷ್ಟು ರಿಯಾಲಿಟಿ ಸ್ಟಾರ್ಸ್?

ಈ ಹೆಸರು, ಪ್ರೀತಿ ಕೊಟ್ಟಿದ್ದು ಕನ್ನಡಿಗರು. ಇದಕ್ಕೆ ಧಕ್ಕೆ ಬರುವಂತಹ ಕೆಲಸವನ್ನು ನಾನು ಮಾಡಿಲ್ಲ. ಮುಂದಕ್ಕೆ ಮಾಡುವುದೂ ಇಲ್ಲ. ನನ್ನ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ ಧನ್ಯವಾದಗಳು' ಎಂದಿದ್ದಾರೆ. 

Related Video