Asianet Suvarna News Asianet Suvarna News

ಹಾಸನ: ವರದಕ್ಷಿಣೆ ಕಿರುಕುಳ, ಮಕ್ಕಳಾಗದಿದ್ದಕ್ಕೆ ಚಿತ್ರಹಿಂಸೆ: ಗೃಹಿಣಿ ನೇಣಿಗೆ ಶರಣು

ಗಂಡನ ಮನೆಯವರ ಕಿರುಕುಳ ತಾಳಲಾರದೇ ಗೃಹಿಣಿಯೋರ್ವಳು ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಹಾಸನದ ವಿದ್ಯಾನಗರದಲ್ಲಿ ನಡೆದಿದೆ. ಗಂಡನ ಮನೆಯವರೇ ಹತ್ಯೆಮಾಡಿ ನೇಣು ಹಾಕಿರೋದಾಗಿ ಮಹಿಳೆಯ ಸಂಬಂಧಿಕರು ಆರೋಪಿಸಿದ್ದಾರೆ. 

ಹಾಸನ (ಮೇ. 23): ಗಂಡನ ಮನೆಯವರ ಕಿರುಕುಳ ತಾಳಲಾರದೇ ಗೃಹಿಣಿಯೋರ್ವಳು ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಹಾಸನದ ವಿದ್ಯಾನಗರದಲ್ಲಿ ನಡೆದಿದೆ. ಗಂಡನ ಮನೆಯವರೇ ಹತ್ಯೆಮಾಡಿ ನೇಣು ಹಾಕಿರೋದಾಗಿ ಮಹಿಳೆಯ ಸಂಬಂಧಿಕರು ಆರೋಪಿಸಿದ್ದಾರೆ. ಮಗಳ ಸಾವಿನಿಂದ ರೊಚ್ಚಿಗೆದ್ದ ಜನರು, ಗಂಡನ ಮನೆಯವರ ಮೇಲೆ ಹಲ್ಲೆ ನಡೆಸಿದ್ದಾರೆ. 

ಬೆಂಗಳೂರು: ಕಾರು ಟರ್ನ್ ಮಾಡೋಕ್ ಹೋಗಿ ಬೈಕ್ ಸವಾರನ ಮೇಲೆ ಹತ್ತಿಸಿದ ವೈದ್ಯೆ

ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆ ಗ್ರಾಮದ ರಂಜಿತಾ(31) ಳನ್ನ ಹಾಸನದ ಅಕ್ಷಯ್ ಗೆ 10 ವರ್ಷಗಳ ಹಿಂದೆ ಮದುವೆ ಮಾಡಲಾಗಿತ್ತು. ರಂಜಿತಾ- ಅಕ್ಷಯ್ ದಂಪತಿಗೆ ಮಕ್ಕಳಾಗಿರಲಿಲ್ಲ. ಇದಕ್ಕಾಗಿ ರಂಜಿತಾಗೆ ಚಿತ್ರಹಿಂಸೆ ಕೊಡುತ್ತಿದ್ದರಂತೆ ಅಕ್ಷಯ್ ಕುಟುಂಬ. ಅಕ್ಷಯ್ ತಂದೆ ಅಶೋಕ್ ಸಹ ರಂಜಿತಾಗೆ ತೊಂದರೆ ಕೊಡುತ್ತಿದ್ದರಂತೆ. ರಂಜಿತಾ , ಪೊಲೀಸ್ ಠಾಣೆಗೂ ಈ ಹಿಂದೆ ದೂರು ನೀಡಿ ರಾಜೀ ಪಂಚಾಯ್ತಿ ನಡೆದಿತ್ತು. ಆದರೂ ಸಂಸಾರ ಸಂಬಂಧ ಸರಿಹೋಗಿರಲಿಲ್ಲ. ಗಂಡ, ಮಾವ ಸೇರಿ ಕೊಲೆ ಮಾಡಿ ನಂತರ ನೇಣು ಬಿಗಿದ ಸ್ಥಿತಿಯಲ್ಲಿ ಹೆಣ ಇರಿಸಿದ್ದಾರೆಂದು ರಂಜಿತಾ ಪೋಷಕರ ಆರೋಪಿಸಿದ್ದಾರೆ. 

Video Top Stories