ಅಪ್ರಾಪ್ತೆಗೆ ಅನ್ಯಕೋಮಿನ ಯುವಕನಿಂದ ಕಿರುಕುಳ: ಆರೋಪಿ ಬಂಧಿಸಿ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲು

ಅಪ್ರಾಪ್ತೆಗೆ ಅನ್ಯಕೋಮಿನ ಯುವಕನಿಂದ ಕಿರುಕುಳ ನೀಡಲಾಗಿದ್ದು, ಹಿಂದೂ ಕಾರ್ಯಕರ್ತರಿಂದ ಪುತ್ತೂರು ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಲಾಗಿದೆ.
 

Share this Video
  • FB
  • Linkdin
  • Whatsapp

ಪುತ್ತೂರು: ಅಪ್ರಾಪ್ತೆಗೆ ಅನ್ಯಕೋಮಿನ ಯುವಕನೋರ್ವ ಕಿರುಕುಳ(Harassment) ನೀಡಿರುವ ಆರೋಪ ಕೇಳಿಬಂದಿದೆ. ಹೀಗಾಗಿ ಉದ್ರಿಕ್ತರಿಂದ ಪುತ್ತೂರು ನಗರ ಠಾಣೆಗೆ ಮುತ್ತಿಗೆ ಹಾಕಲಾಯಿತು. ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಪುತ್ತೂರು ತಾಲೂಕಿನ ನಗರ ಠಾಣೆ ಎದುರು ಈ ಘಟನೆ ನಡೆದಿದೆ. ಕಡಬ ಮೂಲದ ಶಾಕೀರ್ ಎಂಬಾತನಿಂದ ಬಾಲಕಿಗೆ(Minor girl) ಕಿರುಕುಳ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪುತ್ತೂರು ಕಂಬಳ ವೀಕ್ಷಿಸಲು ತೆರಳುತ್ತಿದ್ದ ವೇಳೆ ಕಿರುಕುಳ ನೀಡಲಾಗಿದೆ ಎನ್ನಲಾಗ್ತಿದೆ. ಆರೋಪಿ ಶಾರೀಕ್ ನನ್ನ ವಶಕ್ಕೆ ಪಡೆದ ಪುತ್ತೂರು ನಗರ ಪೊಲೀಸರು(Police). ಆಕ್ರೋಶಿತ ಹಿಂದೂ ಕಾರ್ಯಕರ್ತರಿಂದ ಪುತ್ತೂರು ನಗರ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆರೋಪಿ ಶಾರೀಕ್ ನನ್ನ ತಮಗೆ ಒಪ್ಪಿಸುವಂತೆ ಠಾಣೆಯ ಎದುರು ಜಮಾವಣೆಗೊಂಡಿದ್ದಾರೆ. ಸ್ಥಳಕ್ಕಾಗಮಿಸಿ ಯುವಕರ ಸಮಾಧಾನ ಪಡಿಸಿದ ಹಿಂದೂ ಮುಖಂಡ ಅರುಣ್ ಪುತ್ತಿಲ. ಸದ್ಯ ಆರೋಪಿ ಶಾರೀಕ್ ಬಂಧಿಸಿ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಗುಂಪು ಚದುರಿಸಿದ್ದಾರೆ. 

ಇದನ್ನೂ ವೀಕ್ಷಿಸಿ:  News Hour: ಆರ್‌ಜೆಡಿ, ಜೆಡಿಯು ಮೈತ್ರಿ ಕಗ್ಗಂಟು.. ಬಿಹಾರ ಕಾಂಗ್ರೆಸ್‌ಗೆ ಕಾಡ್ತಿದ್ಯಾ ಆಪರೇಷನ್ ಕಮಲದ ಭಯ ?

Related Video