ಹಣದ ಆಸೆಗೆ ಕ್ರಿಮಿನಲ್ ಜತೆ ಪೊಲೀಸಪ್ಪ ಸಾಥ್! ಎಸ್ಕೇಪ್ಗೆ ಸಹಕರಿಸಿದ ಕಾನ್ಸ್ಟೇಬಲ್ ಅರೆಸ್ಟ್
ಗೋವಾ ಕ್ರೈಂ ಬ್ರಾಂಚ್ ಕಸ್ಟಡಿಯಿಂದ ಕ್ರಿಮಿನಲ್ ಸುಲೇಮಾನ್ ಸಿದ್ದಿಕಿ ಎಸ್ಕೇಪ್ ಆಗಲು ಸಹಾಯ ಮಾಡಿದ ಕಾನ್ಸ್ಟೇಬಲ್ ಅಮಿತ್ನನ್ನು ಹುಬ್ಬಳ್ಳಿಯಲ್ಲಿ ಬಂಧಿಸಲಾಗಿದೆ. ಸುಲೇಮಾನ್ 10ಕ್ಕೂ ಹೆಚ್ಚು ರಾಜ್ಯಗಳಿಗೆ ಬೇಕಾಗಿದ್ದು, ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ.
ನಟೋರಿಯಸ್ ಕ್ರಿಮಿನಲ್ ಎಸ್ಕೆಪ್ ಮಾಡಿಸಿದ ಗೋವಾ ಕ್ರೈಂ ಬ್ರಾಂಚ್ನ ಕಾನ್ಸ್ಟೇಬಲ್ ಅಮಿತ್ ಎಂಬಾತ ಹುಬ್ಬಳಿಯಲ್ಲಿ ಅರೆಸ್ಟ್ ಆಗಿದ್ದಾನೆ. ಆರೋಪಿ ತಪ್ಪಿಸಿಕೊಳ್ಳಲು ನೆರವಾಗಿದ್ದ ಅಮಿತ್ ಕ್ರಿಮಿನಲ್ ಸುಲೇಮಾನ್ ಸಿದ್ದಿಕಿಯ ಕಾವಲಿಗಿದ್ದ, ಆದರೆ ಗೋವಾ ಪೊಲೀಸರ ವಶದಲ್ಲಿದ್ದ ಸುಲೇಮಾನ್ ಸಿದ್ದಿಕಿ ಎಸ್ಕೇಪ್ ಆಗಲು ಹಣದ ಆಮಿಷವೊಡ್ಡಿದ ಪರಿಣಾಮ ಕಾನ್ಸ್ಟೇಬಲ್ ಅಮಿತ್ ಆತನನ್ನು ಬಂಧನಮುಕ್ತಗೊಳಿಸಿ ಆರೋಪಿ ಸುಲೇಮಾನ್ ಜೊತೆಗೆ ಹುಬ್ಬಳಿಗೆ ಬಂದಿದ್ದ.
ಹುಬ್ಬಳಿಗೆ ಬರುತ್ತಿದ್ದಂತೆ ಸುಲೇಮಾನ್ ತಪ್ಪಿಸಿಕೊಂಡಿದ್ದ ಸುಲೇಮಾನ್ ಎಸ್ಕೇಪ್ ಬೆನ್ನಲ್ಲೆ ಕಾನ್ಸ್ಟೇಬಲ್ ಹುಬ್ಬಳ್ಳಿಯಲ್ಲಿ ಅರೆಸ್ಟ್ ಆಗಿದ್ದಾನೆ. 10ಕ್ಕೂ ಹೆಚ್ಚು ರಾಜ್ಯಗಳಿಗೆ ಬೇಕಾಗಿದ್ದ ಸುಲೇಮಾನ್ ತಪ್ಪಿಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಡಿಸೆಂಬರ್ 13, 2024 ರಂದು ಗೋವಾ ಕ್ರೈಂ ಬ್ರಾಂಚ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲಾಗಿದ್ದು, ನಾಲ್ಕು ವರ್ಷಗಳಿಂದ ಬಂಧನದಲ್ಲಿದ್ದ ಭಾರತೀಯ ರಿಸರ್ವ್ ಬೆಟಾಲಿಯನ್ (IRB) ಯ ಕಾನ್ಸ್ಟೇಬಲ್ ಅಮಿತ್ ನಾಯಕ್ ಅವರು ತಪ್ಪಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದು ಈಗ ದೇಶದಾದ್ಯಂತ ಭದ್ರತೆಯ ಬಗ್ಗೆ ಪ್ರಶ್ನೆ ಎತ್ತುವಂತೆ ಮಾಡಿದೆ.