ಸಿಎಂ ಬದಲಾವಣೆ ಪ್ರಸ್ತುತ, ಅಪ್ರಸ್ತುತ ಅಂತ ಹೇಳಲ್ಲ, ಯಾರೋ 4 ಜನ ಮಾತಾಡಿದ್ರೆ ನಿರ್ಧರಿಸಲು ಆಗಲ್ಲ: ಪರಮೇಶ್ವರ್
ಡಿಕೆಶಿಗೆ ಸಿದ್ದರಾಮಯ್ಯ ಸಿಎಂ ಹುದ್ದೆ ಬಿಟ್ಟುಕೊಡಲಿ ಎಂಬ ಸ್ವಾಮೀಜಿ ಹೇಳಿಕೆಗೆ ಗೃಹ ಸಚಿವ ಪರಮೇಶ್ವರ್ ಆಕ್ಷೇಪ ವ್ಯಕ್ತಪಡಿಸಿದರು.
ಸಿಎಂ ಬದಲಾವಣೆ ಪ್ರಸ್ತುತ, ಅಪ್ರಸ್ತುತ ಅಂತ ಹೇಳಲ್ಲ. ಇಲ್ಲಿ ಯಾರೋ 4 ಜನ ಮಾತಾಡಿದ್ರೆ ನಿರ್ಧರಿಸಲು ಆಗಲ್ಲ ಎಂದು ಬೆಂಗಳೂರಲ್ಲಿ ಗೃಹ ಸಚಿವ ಪರಮೇಶ್ವರ್ (Dr. G Parameshwar) ಹೇಳಿದ್ದಾರೆ. ಹೈಕಮಾಂಡ್‌ನಿಂದ ವೀಕ್ಷಕರು ಬಂದು ಶಾಸಕರನ್ನು ಕೇಳ್ತಾರೆ. ಅದೆಷ್ಟು ಬಾರಿ ಅಧ್ಯಕ್ಷರು, ಸಿಎಂ (Siddaramaiah) ಬದಲಾವಣೆ ಮಾಡಿದ್ದಾರೋ. ಇದೆಲ್ಲ ಹೈಕಮಾಂಡ್‌ಗೆ ಕಾಮನ್ ಎಂದರು. ಡಿಕೆ ಶಿವಕುಮಾರ್‌ಗೆ(DK Shivakumar) ಸಿಎಂ ಹುದ್ದೆ(CM post) ಬಿಟ್ಟುಕೊಡಲಿ ಎಂಬ ಸ್ವಾಮೀಜಿ ಹೇಳಿಕೆಗೆ ಗೃಹ ಸಚಿವ ಪರಮೇಶ್ವರ್ ಆಕ್ಷೇಪ ವ್ಯಕ್ತಪಡಿಸಿದರು. ವೇದಿಕೆ, ಸಂದರ್ಭದ ಬಗ್ಗೆ ತಿಳಿದು ಮಾತಾಡಬೇಕು. ಸ್ವಾಮೀಜಿಗಳಿಗೆ ಕಾಳಜಿ ಇರಬಹುದು, ಇಲ್ಲ ಎನ್ನಲು ಆಗಲ್ಲ. ಧಾರ್ಮಿಕ ಗುರುಗಳು ರಾಜಕೀಯ ಮಾಡ್ತಿದ್ದಾರೆ ಅನ್ಸುತ್ತೆ. ಸಿಎಂ ಬದಲಾವಣೆ ಮಾಡೋದು ಹೈಕಮಾಂಡ್‌ಗೆ ಬಿಟ್ಟಿದ್ದು. ಸ್ವಾಮೀಜಿ ಅಂದ್ರೆ ಅವರಿಗೂ ಜವಾಬ್ದಾರಿ ಇರುತ್ತೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ವರಿಷ್ಠರು ಮನಸ್ಸು ಮಾಡಿದ್ರೆ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಡಿಕೆಶಿ ಪರ ಜಿ.ಟಿ.ದೇವೇಗೌಡ ಬ್ಯಾಟಿಂಗ್