ಇನ್​​ಸ್ಟಾಗ್ರಾಂ ಸ್ನೇಹಿತೆ ಮೇಲೆ ಸಾಮೂಹಿಕ ಬಲಾತ್ಕಾರ​​: ಪಿಯು ವಿದ್ಯಾರ್ಥಿನಿ ಮೇಲೆ ಇಬ್ಬರು ಕಾಮುಕರ ಅಟ್ಟಹಾಸ

ಕೀಚಕರು ಅದೆಷ್ಟು ನೀಚರೆಂದರೆ ವಿದ್ಯಾರ್ಥಿನಿಯರನ್ನ ಅತ್ಯಾಚಾರ ಮಾಡಿದ್ದಲ್ಲದೆ ಅದನ್ನ ವಿಡಿಯೋ ಕೂಡ ಮಾಡಿಕೊಂಡಿದ್ದಾರೆ. ಮುಂದಿನ ವಾರ ಗೋವಾಗೆ ಹೋಗೋಣ. ಬರದಿದ್ರೆ ವಿಡಿಯೋ ವೈರಲ್​ ಮಾಡುವುದಾಗಿ ಬೆದರಿಸಿದ್ದಾರೆ. ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆಯರು 10 ದಿನಗಳ ಬಳಿಕ ಈ ವಿಚಾರ ಪೋಷಕರಿಗೆ ತಿಳಿಸಿದ್ದಾರೆ. 

First Published Jan 16, 2025, 11:17 AM IST | Last Updated Jan 16, 2025, 11:19 AM IST

ಬೆಳಗಾವಿ(ಡಿ.16):  ಇದು ಸೋಷಿಯಲ್​ ಮೀಡಿಯಾ ಯುಗ.. ಅದ್ರಲ್ಲೂ ಯುವ ಜನರಂತು ಸಾಮಾಜಿಕ ಜಾಲತಾಣಗಳಲ್ಲಿ ಗಂಟೆಗಟ್ಟಲೇ ಮುಳುಗಿರುತ್ತಾರೆ. ಆನ್​ಲೈನ್​​ನಲ್ಲೇ ಸ್ನೇಹಿತರನ್ನ ಕೂಡ ಹುಡುಕಿಕೊಳ್ತಾರೆ. ಹೀಗೆ ಇನ್ಸ್​​ಸ್ಟಾಗ್ರಾಮ್​ನಲ್ಲಿ ಪರಿಚಯವಾದವನನ್ನ ನಂಬಿದ ಪಿಯು ವಿದ್ಯಾರ್ಥಿನಿ ಬದುಕು ಬರ್ಬಾದ್​ ಆಗಿದೆ. 

ಇವತ್ತು ಇನ್​ಸ್ಟಾಗ್ರಾಂ ರೀಲ್ಸ್​ ಮಾಡದವರು ಯಾರಿದ್ದಾರೆ ಹೇಳಿ. ಬಹುತೇಕರು ಇನ್ಸ್​​ಸ್ಟಾದಲ್ಲಿ ಬಗೆಬಗೆಯ ರೀಲ್ಸ್​ ಮಾಡಿ ಹೆಚ್ಚೆಚ್ಚು ಲೈಕ್ಸ್​, ಕಮೆಂಟ್​ ಬರಲಿ ಅಂತಾ ಹಂಬಲಿಸುತ್ತಾರೆ. ಅದೇ ರೀತಿ ಬೆಳಗಾವಿಯ 17 ವರ್ಷದ ಪಿಯು ವಿದ್ಯಾರ್ಥಿನಿ ಕೂಡ ಇನ್ಸ್​ಟಾಗ್ರಾಂನಲ್ಲಿ ಆಕ್ಟೀವ್​ ಆಗಿದ್ದಳು. ತರಹೇವಾರಿ ರೀಲ್ಸ್​ ಅಪಲೋಡ್​ ಮಾಡುತ್ತಿದ್ದಳು. ಆಗಲೇ ಈಕೆಯ ಮೇಲೆ ಕೀಚಕನೊಬ್ಬನ ಕಣ್ಣು ಬಿದ್ದಿತ್ತು. ಅವನೇ ಈ ಫೋಟೊದಲ್ಲಿರೋ ಅಭಿಷೇಕ್​​. ವಿದ್ಯಾರ್ಥಿನಿ ಅಪ್​ಲೋಡ್​ ಮಾಡ್ತಿದ್ದ ರೀಲ್ಸ್​ಗಳನ್ನ ಲೈಕ್​ ಮಾಡ್ತಿದ್ದ. ಕಮೆಂಟ್​ ಹಾಕ್ತಿದ್ದ. ಕೊನೆಗೆ ಕೊಕಟನೂರ ಜಾತ್ರೆಯಲ್ಲಿ ಇಬ್ಬರು ಮುಖಾಮುಖಿ ಭೇಟಿಯಾಗಿದ್ದಾರೆ. ಫೋನ್​ ನಂಬರ್ ಕೂಡ ಎಕ್ಸ್​ಚೇಂಜ್​ ಆಗಿದೆ.

ಕಾಂಗ್ರೆಸ್ ಪ್ರಧಾನ ಕಚೇರಿಯ ದ್ವಾರವನ್ನೇ ಬದಲಿಸಿದ ಆರ್‌ಎಸ್‌ಎಸ್ ವಾಸ್ತು

ಜನವರಿ 3ರಂದು ಅಭಿಷೇಕ್​ ಅಪ್ರಾಪ್ತೆಗೆ ಸವದತ್ತಿಗೆ ಹೋಗೋಣ ಬಾ ಅಂತಾ ಕರೆದಿದ್ದಾನೆ. ಅಭಿಷೇಕ್​ನನ್ನ ನಂಬಿ ವಿದ್ಯಾರ್ಥಿನಿ ತನ್ನ ಸ್ನೇಹಿತೆ ಜತೆಗೆ ಬಂದಿದ್ದಾಳೆ. ಇರ್ಟಿಗಾ ಕಾರ್​​ನಲ್ಲಿ ಇಬ್ಬರು ಯುವತಿಯರು, ಅಭಿಷೇಕ್​, ಆತನ ಸ್ನೇಹಿತ ಆದಿಲ್ ಶಾ ಹಾಗೂ ಚಾಲಕ ಕೌತುಕ್ ಸವದತ್ತಿ ಕಡೆ ಪ್ರಯಾಣ ಆರಂಭಿಸಿದ್ದಾರೆ. ಆದ್ರೆ ಸವದತ್ತಿ ಕಡೆ ಹೊರಟಿದ್ದ ಕಾರು ಏಕಾಏಕಿ ರಾಯಭಾಗ ತಾಲೂಕಿನ ಸವಸುದ್ದಿ ಕಡೆಗೆ ತಿರುಗಿದೆ. ಅಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ಇನ್​ಸ್ಟಾಗ್ರಾಂ ಸ್ನೇಹಿತೆ ಮೇಲೆ ಅಭಿಷೇಕ್​ ಹಾಗೂ ಆತನ ಸ್ನೇಹಿತ ಆದಿಲ್​ ಶಾ ಅತ್ಯಾಚಾರ ಎಸಗಿದ್ದಾರೆ. ಇತ್ತ ಕಾರ್​ನಲ್ಲಿ ಪಿಯು ವಿದ್ಯಾರ್ಥಿನಿ ಸ್ನೇಹಿತೆಯನ್ನ ಚಾಲಕ ಕೌತುಕ್ ರೇಪ್​ ಮಾಡಿದ್ದಾನೆ. 

ಈ ಕೀಚಕರು ಅದೆಷ್ಟು ನೀಚರೆಂದರೆ ವಿದ್ಯಾರ್ಥಿನಿಯರನ್ನ ಅತ್ಯಾಚಾರ ಮಾಡಿದ್ದಲ್ಲದೆ ಅದನ್ನ ವಿಡಿಯೋ ಕೂಡ ಮಾಡಿಕೊಂಡಿದ್ದಾರೆ. ಮುಂದಿನ ವಾರ ಗೋವಾಗೆ ಹೋಗೋಣ. ಬರದಿದ್ರೆ ವಿಡಿಯೋ ವೈರಲ್​ ಮಾಡುವುದಾಗಿ ಬೆದರಿಸಿದ್ದಾರೆ.

ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆಯರು 10 ದಿನಗಳ ಬಳಿಕ ಈ ವಿಚಾರ ಪೋಷಕರಿಗೆ ತಿಳಿಸಿದ್ದಾರೆ. ಪೋಷಕರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಮೂವರು ರೇಪಿಸ್ಟ್​ಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಇನ್ನಾದ್ರೂ ಪೂರ್ವಾಪರ ಗೊತ್ತಿಲ್ಲದ ವ್ಯಕ್ತಿಗಳ ಜತೆ ಹೋಗುವ ಮುನ್ನ ಹುಡುಗಿಯರು ಎಚ್ಚರ ವಹಿಸಬೇಕಿದೆ.

Video Top Stories