Asianet Suvarna News Asianet Suvarna News

ಲೂಟಿ ರಾಜ, ಕೋಟಿ ಸ್ವಾಮಿ, ಅರಮನೆಯಂಥಾ ಮನೆ; ಕೋಟಿಗಟ್ಟಲೇ ಆಸ್ತಿ..!

ರಾಜ್ಯದ ಪ್ರಭಾವಿ ರಾಜಕಾರಣಿಗಳನ್ನು ವಂಚಿಸಿ ಸುದ್ದಿಯಲ್ಲಿರುವ ಯುವರಾಜ್ ಅಲಿಯಾಸ್ ಸ್ವಾಮಿ ಅಂತಿಂಥವನಲ್ಲ ಸ್ವಾಮಿ...! ಯಾರು ಈ ಖತರ್ನಾಕ್ ಸ್ವಾಮಿ ಎಂದು ಈತನ ಹಿನ್ನಲೆ ನೋಡ್ತಾ ಹೋದ್ರೆ, ಈತನ ಸಂಪತ್ತು, ಆಸ್ತಿಗಳನ್ನು ನೋಡಿ ಶಾಕ್ ಆಗುತ್ತೆ. 

ಬೆಂಗಳೂರು (ಜ. 10): ರಾಜ್ಯದ ಪ್ರಭಾವಿ ರಾಜಕಾರಣಿಗಳನ್ನು ವಂಚಿಸಿ ಸುದ್ದಿಯಲ್ಲಿರುವ ಯುವರಾಜ್ ಅಲಿಯಾಸ್ ಸ್ವಾಮಿ ಅಂತಿಂಥವನಲ್ಲ ಸ್ವಾಮಿ...! ಯಾರು ಈ ಖತರ್ನಾಕ್ ಸ್ವಾಮಿ ಎಂದು ಈತನ ಹಿನ್ನಲೆ ನೋಡ್ತಾ ಹೋದ್ರೆ, ಈತನ ಸಂಪತ್ತು, ಆಸ್ತಿಗಳನ್ನು ನೋಡಿ ಶಾಕ್ ಆಗುತ್ತೆ. 100 ಎಕರೆ ಕಾಫಿ ತೋಟ, 3 ಅರಮನೆಯಂತಹ ಮನೆ, ಗೋಡೆ ಮೇಲೆಲ್ಲಾ ಕಣ್ಣು ಕೊರೈಸುವ ವಸ್ತುಗಳು, ಮಿನಿ ಸಾಮ್ರಾಜ್ಯವನ್ನು ಕಟ್ಟಿದ್ದಾನೆ.

ವಂಚಕ ಸ್ವಾಮಿಯ ಸ್ನೇಹಜಾಲದಲ್ಲಿ ರಾಜ್ಯದ ಮಂತ್ರಿ ಮಹೋದಯರು..ಏನಿವು ಫೋಟೋಗಳು..? 

ರಾಜ್ಯದ ಪ್ರಭಾವಿ ರಾಜಕಾರಣಿಗಳು, ಗಣ್ಯರಿಗೆ ಅಧಿಕಾರದ ಆಸೆ ತೋರಿಸಿ ಲಕ್ಷ ಲಕ್ಷ ಲಪಟಾಯಿಸುತ್ತಿದ್ದ. ಸದ್ಯ ಈತನ ಮೇಲೆ 9 ಎಫ್‌ಐಆರ್‌ಗಳಿವೆ. ಒಂದೊಂದೇ ಪ್ರಕರಣಗಳು ಹೊರ ಬರುತ್ತಿದೆ. ಈತ ಅಂತಿಂಥ ಐನಾತಿಯಲ್ಲ ನೋಡಿ..!