ಭಕ್ತಿಯನ್ನೇ ಬಂಡವಾಳ ಮಾಡಿ ವಂಚನೆ, ದೇಗುಲದ ಕೋಟಿ ಕೋಟಿ ಹಣ ನುಂಗಿದ 'ಹೈಟೆಕ್' ಅರ್ಚಕರು!
ಭಕ್ತಿಯನ್ನೇ ಬಂಡವಾಳ ಮಾಡಿ, ದೇಗುಲದ ಕೋಟಿ ಕೋಟಿ ಹಣವನ್ನು ಅರ್ಚಕರೇ ನುಂಗಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಹಣ ಗುಳುಂ ಮಾಡಲೆಂದೇ ಅರ್ಚಕರು ಹೈಟೆಕ್ ತಂತ್ರವನ್ನು ಮಾಡಿದ್ದಾರೆ!
ಬೆಂಗಳೂರು (ಜೂನ್ 24): ಭಕ್ತಿಯನ್ನೇ ಬಂಡವಾಳ ಮಾಡಿಕೊಂಡು ವಂಚನೆ ಮಾಡಿದ ಪ್ರಕರಣ ಕಲಬುರಗಿಯಲ್ಲಿ (kalaburagi ) ಬೆಳಕಿಗೆ ಬಂದಿದೆ. ದೇಗುಲದ ಹೆಸರಿನಲ್ಲಿ ಅರ್ಚಕರ (Priest ) ಖಾತೆಗೆ ಹೋಗುತ್ತಿತ್ತು ಭಕ್ತರ ಹಣ. ಗಾಣಾಗಾಪುರ (Ganagapur) ದತ್ತಾತ್ತೇಯ ದೇವಸ್ಥಾನದಲ್ಲಿ (DattatreyaTemple) ಈ ಗೋಲ್ ಮಾಲ್ ನಡೆದಿದೆ.
ದೇವಸ್ಥಾನದ ಪೂಜಾರಿಗಳಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆಯಾಗಿದೆ. ದತ್ತಾತ್ರೇಯ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್ ಸೈಟ್ ಸೃಷ್ಟಿಸಿ ವಂಚನೆ ಎಸಗಲಾಗಿದೆ. ಅಂದಾಜು 50 ಕೋಟಿ ರೂಪಾಯಿಗೂ ಹೆಚ್ಚಿನ ಹಣ ವಂಚನೆಯಾಗಿರುವ ಬಗ್ಗೆ ಶಂಕಿಸಲಾಗಿದೆ. ಅರ್ಚಕರ ಜೊತೆ ಸ್ಥಳೀಯರು ಮತ್ತು ರಾಜಕೀಯ ನಾಯಕರು ಶಾಮೀಲಾಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಕಳೆದ 6-7 ವರ್ಷಗಳಿಂದ ವೆಬ್ ಸೈಟ್ ಮೂಲಕ ಗೋಲ್ ಮಾಲ್ ಮಾಡಲಾಗುತ್ತಿದೆ.
ಡೇಟಿಂಗ್ ಗೆಳತಿಗಾಗಿ 5.81 ಕೋಟಿ ಕೊಟ್ಟ ಇಂಡಿಯನ್ ಬ್ಯಾಂಕ್ ಮ್ಯಾನೇಜರ್..!
ದೇವಸ್ಥಾನದ ಹೆಸರಿನಲ್ಲಿ ಅಧಿಕೃತ ವೆಬ್ ಸೈಟ್ ಈಗಾಗಲೇ ಇದೆ. ಅದಲ್ಲದೆ, ಅರ್ಚಕರ ಹೆಸರಿನಲ್ಲಿ 7-8 ನಕಲಿ ವೆಬ್ ಸೈಟ್ ಅನ್ನು ಸೃಷ್ಟಿ ಮಾಡಲಾಗಿದೆ ಎಂದು ವರದಿಯಾಗಿದೆ. ದೇವಸ್ಥಾನಕ್ಕೆ ಡಿಸಿ ಯಶವಂತ್ ಗುರುಕರ್ ಭೇಟಿ ನೀಡಿದ್ದಾಗ ಈ ವಂಚನೆ ಬಹಿರಂಗವಾಗಿದೆ.