Asianet Suvarna News Asianet Suvarna News

News Hour: ಲೋಕಸಭೆ ಚುನಾವಣೆಗೂ ಮುನ್ನವೇ ಮುರಿದು ಬೀಳಲಿದೆಯೇ ಇಂಡಿಯಾ ಮೈತ್ರಿ?

ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿ ಲೋಕಸಭೆ ಚುನಾವಣೆ ಆಗುವ ಮುನ್ನವೇ ಮುರಿದು ಬೀಳಲಿದೆಯೇ ಎನ್ನುವ ಅನುಮಾನ ಕಾಡಿದೆ. ಅದಕ್ಕೆ ಕಾರಣ ಪಶ್ಚಿಮ ಬಂಗಾಳ ಹಾಗೂ ಪಂಜಾಬ್‌ನಲ್ಲಿ ಆದ ಬೆಳವಣಿಗೆ.
 

ನವದೆಹಲಿ (ಜ.24): ಲೋಕಸಭೆ ಚುನಾವಣೆ ಆರಂಭಕ್ಕೂ ಮುನ್ನವೇ ಇಂಡಿಯಾ ಒಕ್ಕೂಟ ಬ್ರೇಕ್‌ ಆಗುವ ಲಕ್ಷಣಗಳು ಕಾಣುತ್ತಿವೆ. ಮೋದಿ ಮಣಿಸುವ ಉತ್ಸಾಹದಲ್ಲಿದ್ದ ಇಂಡಿಯಾ ಒಕ್ಕೂಟಕ್ಕೆ ದೊಡ್ಡ ಹಿನ್ನಡೆ ಎದುರಾಗಿದೆ. ಕಾಂಗ್ರೆಸ್‌ ತನ್ನ ಸಾಮರ್ಥ್ಯಕ್ಕಿಂತ ಹೆಚ್ಚು ಕ್ಷೇತ್ರ ಕೇಳುತ್ತಿರುವುದಕ್ಕೆ ಟಿಎಂಸಿ ಹಾಗೂ ಆಪ್‌ ಕಿಡಿಕಾರಿದೆ.

ಒಂದೆಡೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕಾಂಗ್ರೆಸ್‌ ಪಕ್ಷ ಪಶ್ಚಿಮ ಬಂಗಾಳದಲ್ಲಿ ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ ಕ್ಷೇತ್ರಗಳನ್ನು ಕೇಳುತ್ತಿರುವ ಕಾರಣ ತಾವು ಮುಂದಿನ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದೆ.

ಇಂಡಿಯಾ ಮೈತ್ರಿ ಮುರಿದು ಏಕಾಂಗಿ ಸ್ಪರ್ಧೆ ಘೋಷಿಸಿದ ಬೆನ್ನಲ್ಲೇ ಮಮತಾ ಕಾರು ಅಪಘಾತ!

ಇನ್ನೊಂದೆಡೆ ಪಂಜಾಬ್‌ನಲ್ಲಿ ಸಿಎಂ ಭಗವಂತ್‌ ಸಿಂಗ್‌ ಮಾನ್‌ ಕೂಡ ಇದೇ ಅರ್ಥದ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ, ಮೋದಿಗೆ ಸಹಾಯ ಮಾಡುವ ದೃಷ್ಟಿಯಲ್ಲಿ ಮಮತಾ ಬ್ಯಾನರ್ಜಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

Video Top Stories