ಫಸ್ಟ್‌ ನೈಟ್‌ನಂದು ಎಡವಟ್ಟು: ನವದಂಪತಿಯ ಜಗಳ, ಪತ್ನಿಗೆ ಹಿಗ್ಗಾಮುಗ್ಗ ಥಳಿತ!

ಫಸ್ಟ್‌ ನೈಟ್‌ಗೆ ಪತಿರಾಯ ಕುಡಿದು ಬಂದಿದ್ದು, ಪತ್ನಿ ಇದರಿಂದ ಕೋಪಗೊಂಡು ಜೊತೆಗಿರಲು ತಯಾರಿಲ್ಲ ಎಂದಿದ್ದಾಳೆ. ಹೀಗಿರುವಾಗ ಪತಿ ಹಾಗೂ ಪತ್ನಿ ನಡುವಿನ ಜಗಳ ತಾರಕಕ್ಕೇರಿದ್ದು, ಮೊದಲ ರಾತ್ರಿಯೇ ಗಂಡ ತನ್ನ ಹೆಂಡತಿಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ. ಮೊದಲ ಮದುವೆಯಾದ ವಿಚಾರ ಮುಚ್ಚಿಟ್ಟು ತನ್ನೊಂದಿಗೆ ಎರಡನೇ ಮದುವೆಯಾಗಿರುವುದಾಗಿ ಹೆಂಡತಿ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. 

First Published Dec 3, 2020, 3:11 PM IST | Last Updated Dec 3, 2020, 3:11 PM IST

ಬೆಂಗಳೂರು(ಡಿ.03): ಫಸ್ಟ್‌ ನೈಟ್‌ಗೆ ಪತಿರಾಯ ಕುಡಿದು ಬಂದಿದ್ದು, ಪತ್ನಿ ಇದರಿಂದ ಕೋಪಗೊಂಡು ಜೊತೆಗಿರಲು ತಯಾರಿಲ್ಲ ಎಂದಿದ್ದಾಳೆ. ಹೀಗಿರುವಾಗ ಪತಿ ಹಾಗೂ ಪತ್ನಿ ನಡುವಿನ ಜಗಳ ತಾರಕಕ್ಕೇರಿದ್ದು, ಮೊದಲ ರಾತ್ರಿಯೇ ಗಂಡ ತನ್ನ ಹೆಂಡತಿಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ. ಮೊದಲ ಮದುವೆಯಾದ ವಿಚಾರ ಮುಚ್ಚಿಟ್ಟು ತನ್ನೊಂದಿಗೆ ಎರಡನೇ ಮದುವೆಯಾಗಿರುವುದಾಗಿ ಹೆಂಡತಿ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. 

ಡೈರಿ ಸಾಲ, 2ನೇ ಪತ್ನಿ ಜತೆ ಮನಸ್ತಾಪ... ಪ್ರಕಾಶ್ ಕಾರಿನಲ್ಲಿ ದುಪ್ಪಟ್ಟಾ!

ಹೌದು ಅಕ್ಟೋಬರ್ 10 ರಂದು ಭರತ್ ಹಾಗೂ ಶ್ರಾವಣಿ ಮದುವೆ ನಡೆದಿದೆ. ಆದರೀಗ ತನ್ನ ಮಗಳಿಗೆ ಆಕೆಯ ಗಂಡ ಚಿತ್ರಹಿಂಸೆ ನೀಡಿರುವುದಾಗಿ ಯುವತಿಯ ತಂದೆ ತಾಯಿ ದೂರು HSR ಪೊಲೀಸ್  ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೇ ಮಾಟಮಂತ್ರ ಮಾಡಿಸಿ ಹಿಂಸೆ ನೀಡಿದ್ದಾಗಿಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.