Yadgir

*  ವಿದ್ಯಾರ್ಥಿನಿಯರಿಗೆ ಹೆಚ್ಚು ಅಂಕ ಕೊಡೋಗಾಗಿ ಆಮಿಷ
*  ಯಾದಗಿರಿ ತಾಲೂಕಿನ ಮುಂಡರಗಿ ಗ್ರಾಮದಲ್ಲಿ ನಡೆದ ಘಟನೆ
*  ಮಹಿಳಾ ಪೊಲೀಸ್‌ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ಕೇಸ್‌ 
 

Share this Video
  • FB
  • Linkdin
  • Whatsapp

ಯಾದಗಿರಿ(ನ.12): ವಿದ್ಯಾರ್ಥಿನಿಯರಿಗೆ ಹೆಚ್ಚು ಅಂಕ ಕೊಡೋಗಾಗಿ ಆಮಿಷವೊಡ್ಡಿ ತೋರಿಸಿ ಪ್ರಾಂಶುಪಾಲರೊಬ್ಬರು ಲೈಂಗಿಕ ದೌರ್ಜನ್ಯವೆಸಗಿರುವಂತ ಘಟನೆ ಯಾದಗಿರಿ ತಾಲೂಕಿನ ಮುಂಡರಗಿ ಗ್ರಾಮದಲ್ಲಿ ನಡೆದಿದೆ. ಪ್ರಾಂಶುಪಾಲ ಹಯ್ಯಾಳಪ್ಪ ಜಾಗೀರದಾರ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಗೆ ಪ್ರಾಂಶುಪಾಲ ಹಯ್ಯಾಳಪ್ಪ ಜಾಗೀರದಾರ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ. ಹೀಗಾಗಿ ಪ್ರಾಂಶುಪಾಲರ ವಿರುದ್ಧ ಯಾದಗಿರಿ ನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ಕೇಸ್‌ ದಾಖಲಾಗಿದೆ. ವಿದ್ಯಾರ್ಥಿನಿಯರು ಸಹಕರಿಸಿದರೆ ಹೆಚ್ಚು ಅಂಕ ನೀಡೋದಾಗಿ ಆಮಿಷವೊಡ್ಡಿದ್ದನಂತೆ ಕಾಮುಕ ಪ್ರಾಂಶುಪಾಲ ಹಯ್ಯಾಳಪ್ಪ ಜಾಗೀರದಾರ. ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. 

BitCoin Scam: ಬಿಜೆಪಿಯ ಕೆಲ ನಾಯಕರ ಬಗ್ಗೆ ಅಮಿತ್‌ ಶಾಗೆ ಸಿಎಂ ದೂರು

Related Video