Prajwal Revanna Case: ಪೆನ್‌ಡ್ರೈವ್ ಕೇಸ್ ಹೆಸರಲ್ಲಿ ರಾಜಕಾರಣ! ಹೇಗೆ ನಡೆಯಲಿದೆ ವಿಚಾರಣೆ? ಎತ್ತ ಸಾಗುತ್ತಿದೆ ಪ್ರಕರಣ?

ಪೆನ್ ಡ್ರೈವ್ ಕೇಸ್ ತನಿಖೆಗೆ ಸಾಲು ಸಾಲು ಸವಾಲುಗಳು!
ಮಾಜಿ ಪ್ರಧಾನಿ ಮೊಮ್ಮಗ ದೇಶಕ್ಕೆ ಬರೋದು ಯಾವಾಗ?
ತಡವಾಗಿ ದಾಖಲಾಯ್ತು ದೂರು.. ಪರಿಣಾಮವೇನು..?

First Published May 2, 2024, 5:11 PM IST | Last Updated May 2, 2024, 5:11 PM IST

ರಾಜ್ಯವನ್ನೇ ಬೆಕ್ಕಸ ಬೆರಗಾಗಿಸಿದ, ಆಘಾತಕ್ಕೆ ಕಾರಣವಾದ ಪೆನ್ ಡ್ರೈವ್ ಕೇಸ್(Pendrive Case) ತನಿಖೆಗೆ ಸಾಲು ಸಾಲು ಸವಾಲುಗಳು ಎದುರಾಗ್ತಾ ಇದಾವೆ. ಮಾಜಿ ಪ್ರಧಾನಿಗಳ ಮೊಮ್ಮಗ, ಮಾಜಿ ಮುಖ್ಯಮಂತ್ರಿಗಳ ಅಣ್ಣನ ಮಗ, ಹಲವು ಬಾರಿ ಶಾಸಕರಾಗಿ, ಮಂತ್ರಿಗಳಾಗಿದ್ದ ರೇವಣ್ಣನವರ ಮಗನ ವಿರುದ್ಧ, ಊಹಿಸೋಕೂ ಸಾಧ್ಯವಾಗದ ಆರೋಪ ಕೇಳಿಬಂದಿದೆ. ಅದೊಂದು ಕೇಸ್ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದೆ. ಮಾಜಿ ಪ್ರಧಾನಿ ದೇವೇಗೌಡರ(Devegowda) ಮೊಮ್ಮಗ, ಮಾಜಿ ಸಚಿವ ಎಚ್.ಡಿ ರೇವಣ್ಣನವರ(HD Revanna) ಮಗ, ಹಾಸನದ(Hassan) ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ(Prajwal Revanna)  ಅವರದ್ದು ಎನ್ನಲಾಗಿರೋ ಅಶ್ಲೀಲ ವಿಡಿಯೋಗಳು(Prajwal Revanna Obscene Video) ರಾಜ್ಯದ ತುಂಬೆಲ್ಲಾ ಓಡಾಡ್ತಿವೆ. ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು, ಅದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿರೋ ಗಂಭೀರ ಆರೋಪ ಪ್ರಜ್ವಲ್ ರೇವಣ್ಣ ಎದುರಿಸ್ತಾ ಇದ್ದಾರೆ. ಲೋಕಸಭಾ ಚುನಾವಣೆಯ(Loksabha Election) ಮೊದಲ ಹಂತದ ಮತದಾನಕ್ಕೆ ಎರಡು ದಿನ ಮೊದಲು ಸ್ಫೋಟಗೊಂಡಿತ್ತು ಆ ವೀಡಿಯೊ ಬಾಂಬ್..ಅದೇ ಈಗ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ಇದನ್ನೂ ವೀಕ್ಷಿಸಿ:  Chikkamagalur Murder News: ಮಿಸ್ಸಿಂಗ್ ಆದವಳು ಹೆಣವಾಗಿ ಸಿಕ್ಕಿದ್ಲು..! ಕೊಟ್ಟ ದುಡ್ಡು ವಾಪಸ್ ಕೇಳಿದ್ದೇ ತಪ್ಪಾಗಿಹೊಯ್ತಾ ?