ಜಮೀನು ವಿಚಾರ.. ಎರಡು ಕುಟುಂಬಗಳ ಮಧ್ಯೆ ಪೊಲೀಸರ ಎದುರೇ ಸಿನಿಮೀಯ ಶೈಲಿಯಲ್ಲಿ ಮಾರಾಮಾರಿ!

ಎರಡು ಕುಟುಂಬಗಳ ಮಧ್ಯೆ ಜಮೀನಿಗಾಗಿ ಫೈಟ್‌
ಪೊಲೀಸರ ಮುಂದೆಯೇ ಕುಟುಂಬಸ್ಥರ  ಬಡಿದಾಟ 
ಚಿಕ್ಕಬಳ್ಳಾಪುರದ ಮೋಟ್ಲೂರು ಗ್ರಾಮದಲ್ಲಿ ಘಟನೆ 

First Published Jul 22, 2024, 6:04 PM IST | Last Updated Jul 22, 2024, 6:05 PM IST

ಜಮೀನು ವಿಚಾರಕ್ಕಾಗಿ 2 ಕುಟುಂಬಗಳ (Fight between families) ಮಧ್ಯೆ ಪೊಲೀಸರ(Police) ಎದುರೇ ಮಾರಾಮಾರಿ ನಡೆದಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಮೋಟ್ಲುರು ಗ್ರಾಮದಲ್ಲಿ ನಡೆದಿದೆ. ಪೊಲೀಸರ ಎದುರೇ ಎರಡು ಕುಟುಂಬದವರು ಸಿನಿಮೀಯ ರೀತಿ ಹೊಡೆದಾಡಿಕೊಂಡಿವೆ. ಜಮೀನು(Land) ನೀಡದೇ ಚೌಡಮ್ಮ ಎಂಬುವವರು ಸತಾಯಿಸಿದ್ದರು. ಚೌಡಮ್ಮ ವಿರುದ್ಧ ಸಹೋದರಿಯರು ತಿರುಗಿ ಬಿದ್ದಿದ್ದಾರೆ. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿ ಬಡಿದಾಟ ಮಾಡಿಕೊಂಡಿದ್ದಾರೆ. ನಾಗಮ್ಮ , ಮುನಿ ಅಕ್ಕಯಮ್ಮ ಕೆಂಡಾಮಂಡಲವಾಗಿದ್ದಾರೆ. ಕೈಗೆ ಸಿಕ್ಕ ಕಲ್ಲುಗಳಿಂದ ಬಡೆದಾಡಿಕೊಂಡಿದ್ದು, ಗ್ರಾಮದ ಚೌಡಮ್ಮ ಹೆಸರಲ್ಲಿದ್ದ 2.17 ಗುಂಟೆ ಜಮೀನು, ನಾಗಪ್ಪ ,ಮುನಿ ಅಕ್ಕಯಮ್ಮನಿಗೂ ಸೇರಬೇಕಾಗಿದೆ. ಜಮೀನು ವಿಚಾರವಾಗಿ ಕುಟುಂಬಸ್ಥರ ನಡುವೆ ಮಾರಾಮಾರಿ ನಡೆದಿದೆ. ಗಲಾಟೆಯಲ್ಲಿ ಮೂವರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ವೀಕ್ಷಿಸಿ:  ಮಳೆ ಹೆಸರಲ್ಲೇ ನಡೀತಿದೆ ರಣರಣ ರಾಜಕಾರಣ.. ಹೇಗಿದೆ ಗೊತ್ತಾ ಘಟಾನುಘಟಿಗಳ ರಣಾರ್ಭಟ..?

Video Top Stories