ಮಳೆ ಹೆಸರಲ್ಲೇ ನಡೀತಿದೆ ರಣರಣ ರಾಜಕಾರಣ.. ಹೇಗಿದೆ ಗೊತ್ತಾ ಘಟಾನುಘಟಿಗಳ ರಣಾರ್ಭಟ..?
ಬಿಟ್ಟೂಬಿಡದ ಮಳೆಯಲ್ಲಿ ನಾಯಕರ ರಾಜಕೀಯ ಜ್ವಾಲಾಗ್ನಿ!
ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರಭಾವಿ ನಾಯಕರ ಭೇಟಿ..!
ರಾಜಕೀಯ ರಣೋತ್ಸಾಹ ಹೆಚ್ಚಿಸಿದ ಮಳೆಯಲ್ಲಿ ವಾಕ್ಸಮರ!
ರಾಜ್ಯದ ಜನ ಯಾವ ಮಳೆಗಾಗಿ ಕಾಯ್ತಾ ಇದ್ರೋ ಅಂಥಾ ಮಳೆ(Rain), ಅತಿ ಭೀಕರ ವಾತಾವರಣವನ್ನೇ ಸೃಷ್ಟಿಸಿದೆ. ಅದರಲ್ಲೂ ಕರಾವಳಿ ಭಾಗದಲ್ಲಂತೂ ಮಳೆ ಅಟ್ಟಹಾಸ ಮಿತಿ ಮೀರಿದೆ. ಈ ರಣಮಳೆಗೆ ಅದೆಷ್ಟು ಮನೆಗಳು ನೆಲ ಕಚ್ಚಿವೆಯೋ.. ಅದೆಷ್ಟು ಜನರ ಬದುಕು ಅಕ್ಷರಶಃ ಅತಂತ್ರವಾಗಿದೆಯೋ ಲೆಕ್ಕವೇ ಇಲ್ಲ. ಇಷ್ಟೂ ಕಾಲ ಸದನದಲ್ಲಿ(Assembly session) ಕದನವನ್ನೇ ನಾವೆಲ್ಲರು ನೋಡಿದ್ವಿ. ಬಿಜೆಪಿ(BJP) ಹಾಗೂ ಜೆಡಿಎಸ್(JDS) ನಾಯಕರು ಒಟ್ಟಾಗಿ ಕಾಂಗ್ರೆಸ್ (Congress)ಮೇಲೆ ಎರಗಿದ್ದರು. ಪ್ರತಿದಿನವೂ ರಾಜ್ಯವನ್ನೇ ಕಂಗೆಡಿಸಿದ ಹಗರಣಗಳ ಬಗ್ಗೆ ದೊಡ್ಡ ಮಟ್ಟದಲ್ಲೇ ಚರ್ಚೆಯಾಯ್ತು. ಆ ವೇಳೆ ರಣಾಂಗಣವಾಗಿತ್ತು ವಿಧಾನಸಭಾ ಸದನ. ಆದ್ರೆ ಈಗ, ಆಡಳಿತಾರೂಢ ಪಕ್ಷ ಹಾಗೂ ವಿರೋಧ ಪಕ್ಷಗಳ ಕಾದಾಟಕ್ಕೆ ವೇದಿಕೆ ಶಿಫ್ಟ್ ಆಗಿದೆ. ರಣಮಳೆಯ ರಣಾಂಗಣದಲ್ಲಿ ವಾಗ್ಯುದ್ಧ ಶುರುವಾಗಿದೆ.ಪ್ರವಾಹದಂಥಾ ಪರಿಸ್ಥಿತಿ ಬಂದಾಗ, ಆಪತ್ತಿನಲ್ಲಿರೋ ಜನಕ್ಕೆ ಸಹಾಯ ಮಾಡೋದು.. ಅಲ್ಲಿನ ಸ್ಥಿತಿಗತಿ ಹೇಗಿದೆ ಅಂತ ವಿಚಾರಿಸಿಕೊಳ್ಳೋದು.. ಸಮಸ್ಯೆಗಳಿಗೆಲ್ಲಾ ಸೂಕ್ತ ಪರಿಹಾರ ಕಂಡುಕೊಳ್ಳೋದು ರಾಜಕೀಯ ನಾಯಕರ ಅತಿ ಮುಖ್ಯ ಕರ್ತವ್ಯ.. ಅದು ಸಹಜವೂ ಹೌದು.. ಆದ್ರೆ, ಈ ಬಾರಿ ಮಾತ್ರ, ಈ ಪ್ರವಾಹ ಪ್ರದೇಶಗಳ ಭೇಟಿ ವಿಚಾರದಲ್ಲೂ ಕೂಡ ರಾಜಕಾರಣ ಜೋರಾಗೇ ನಡೀತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ+ಜೆಡಿಎಸ್ ನಡುವೆ ಯುದ್ಧವೇ ಆರಂಭವಾಗಿದೆ.
ಇದನ್ನೂ ವೀಕ್ಷಿಸಿ: ಮಕ್ಕಳು ಸೆರೆವಾಸಕ್ಕೆ.. ಹೆತ್ತವರು ಮಸಣಕ್ಕೆ.. ಹೆತ್ತವರನ್ನೇ ಕೊಂದ ಅಂಧಾಭಿಮಾನ..!