Asianet Suvarna News Asianet Suvarna News

ಭೀಮಾತೀರದಲ್ಲಿ ಮತ್ತೊಂದು ಗ್ಯಾಂಗ್‌ ವಾರ್‌ನ ಭೀತಿ..!: ಮಡುಸ್ವಾಮಿಗೆ ಶರತ್ತು ವಿಧಿಸಿ ಜಾಮೀನು ನೀಡಿದ ಹೈಕೋರ್ಟ್

ಜೈಲಿಂದ ಹೊರಬಂದ ಭೀಮಾತೀರದ ಧರ್ಮನ ಬಂಟ..!
ಸಾಹುಕಾರನ ಮೇಲೆ ಗುಂಡು ಹಾರಿಸಿದವನು ಇವನೇ..!
ರೌಡಿ ಮಡುಸ್ವಾಮಿ ಹೊರ ಬರ್ತಿದ್ದಂತೆ ಬೆಂಬಲಿಗರ ಸಂಭ್ರಮ

First Published Jun 23, 2023, 12:50 PM IST | Last Updated Jun 23, 2023, 12:50 PM IST

ಭೀಮಾತೀರದ ರಕ್ತಚರಿತ್ರೆಯ ಬಗ್ಗೆ ಅದೇಷ್ಟು ಹೇಳಿದ್ರು ಮುಗಿಯೋದಿಲ್ಲ. ಒಂದಿಲ್ಲ ಒಂದು ಸುದ್ದಿಯಿಂದ ಭೀಮಾತೀರ ಸದ್ದು ಮಾಡುತ್ತಲೇ ಇರುತ್ತದೆ. ತಣ್ಣಗಿದ್ದ ಭೀಮಾತೀರದಲ್ಲಿ ಈಗ ಮತ್ತೆ ಹಲ್‌ಚಲ್‌ ಶುರುವಾಗಿದೆ. ಭೀಮಾತೀರದ ಸಾಹುಕಾರನ ಮೇಲೆ ಕಂಡುಕೇಳರಿಯದ ರೀತಿಯಲ್ಲಿ ನಡೆದಿದ್ದ ಮಾರಾಮೋಸದ ದಾಳಿಯ ಮಾಸ್ಟರ್‌ ಮೈಂಡ್‌ ಈಗ ಜೈಲಿಂದ ಬಿಡುಗಡೆಯಾಗಿದ್ದಾನೆ. ಆತ ದರ್ಗಾ ಜೈಲಿನಿಂದ ಹೋರಬೀಳ್ತಿದ್ದಂತೆ ಸಾಹುಕಾರ ಎದೆಯಲ್ಲಿ ಢವಢವ ಶುರುವಾಗಿದೆ. ಇತ್ತ ಖಾಕಿ ಹೈ ಅಲರ್ಟ್‌ ಆಗಿದೆ. ಮಡುಸ್ವಾಮಿ ರಿಲೀಜ್‌ ಆದ ಮೊದಲ ದಿನ ಭೀಮಾತೀರದಲ್ಲಿ ಸಖತ್‌ ಹವಾ ಕ್ರಿಯೆಟ್‌ ಆಗಿದೆ. ವಿಜಯಪುರ ಎಸ್ಪಿ ಗರಂ ಆಗಿದ್ದು, ಇತ್ತ ಚಡಚಣ ಗ್ಯಾಂಗಿನ ಬದ್ದ ವೈರಿ ಮಹಾದೇವ ಸಾಹುಕಾರನ ಎದೆಯಲ್ಲಿ ಢವಢವ ಶುರುವಾಗಿದೆ. 

ಇದನ್ನೂ ವೀಕ್ಷಿಸಿ: ದೇಶದ ಸೇನಾ ಶಕ್ತಿ ಹೆಚ್ಚಿಸುವುದೇ ಈ ಒಪ್ಪಂದ ?: ಅದೆಷ್ಟು ಶಕ್ತಿಶಾಲಿ GE-F414 ಫೈಟರ್ ಜೆಟ್.. MQ-9B ಡ್ರೋನ್‌..?

Video Top Stories