ಎರಡನೇ ಹೆಂಡತಿ ಜೊತೆ ಸೇರಿ ಮೊದಲ ಹೆಂಡತಿ ಮಗಳನ್ನೇ ಕೊಂದ ಪಾಪಿ ತಂದೆ

ಇಬ್ಬರು ಹೆಂಡತಿಯರ ಭಂಡ ಗಂಡ ಮಾಡಿದ ಪೈಶಾಚಿಕ ಕೃತ್ಯವಿದು. ಎರಡನೇ ಹೆಂಡತಿಗೆ ಮಕ್ಕಳಾಗಲಿಲ್ಲ ಎಂದು ಆಕೆಯ ಜೊತೆ ಸೇರಿ ಮೊದಲ ಹೆಂಡತಿಯ 5 ವರ್ಷದ ಮಗಳನ್ನು ಕೊಂದಿದ್ದಾನೆ. ಶವವನ್ನು ಮೂಟೆಕಟ್ಟಿ ದೇವರ ಕೋಣೆಯಲ್ಲಿಟ್ಟಿದ್ದ. ಪೊಲೀಸರ ತನಿಖೆ ವೇಳೆ ಪಾಪಿ ತಂದೆ ಮಹೇಶ್ ಸಿಕ್ಕಿ ಬಿದ್ದಿದ್ದಾನೆ. ಚಾಮರಾಜನಗರದ ಸೋಮಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 26): ಇಬ್ಬರು ಹೆಂಡತಿಯರ ಭಂಡ ಗಂಡ ಮಾಡಿದ ಪೈಶಾಚಿಕ ಕೃತ್ಯವಿದು. ಎರಡನೇ ಹೆಂಡತಿಗೆ ಮಕ್ಕಳಾಗಲಿಲ್ಲ ಎಂದು ಆಕೆಯ ಜೊತೆ ಸೇರಿ ಮೊದಲ ಹೆಂಡತಿಯ 5 ವರ್ಷದ ಮಗಳನ್ನು ಕೊಂದಿದ್ದಾನೆ. ಶವವನ್ನು ಮೂಟೆಕಟ್ಟಿ ದೇವರ ಕೋಣೆಯಲ್ಲಿಟ್ಟಿದ್ದ. ಪೊಲೀಸರ ತನಿಖೆ ವೇಳೆ ಪಾಪಿ ತಂದೆ ಮಹೇಶ್ ಸಿಕ್ಕಿ ಬಿದ್ದಿದ್ದಾನೆ. ಚಾಮರಾಜನಗರದ ಸೋಮಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲನೇ ಪತ್ನಿ ಗಂಡನನ್ನು ಬಿಟ್ಟು ಬೇರೆ ಮದುವೆಯಾಗಿದ್ದಳು. ಈತನೂ ಕೂಡಾ ಎರಡನೇ ಮದುವೆಯಾಗಿದ್ದ. ಮೊದಲ ಪತ್ನಿಗೆ ಮತ್ತೆ ಇಬ್ಬರು ಮಕ್ಕಳು ಜನಿಸಿದ್ದರು. ಇದನ್ನು ಸಹಿಸದ ಪತಿ ಮಹೇಶ್ ಸೇಡಿಗಾಗಿ ಹೊಂಚು ಹಾಕುತ್ತಿದ್ದ. ಯಾರೂ ಇಲ್ಲದ್ದನ್ನು ನೋಡಿ 5 ವರ್ಷದ ಮಗಳನ್ನು ಅಪಹರಿಸಿ ಹತ್ಯೆ ಮಾಡಿದ್ದಾನೆ. ಹತ್ಯೆ ಬಳಿಕ ಶವವನ್ನು ದೇವರ ಮನೆಯಲ್ಲಿಟ್ಟಿದ್ದ. ಪೊಲೀಸ್ ತನಿಖೆ ವೇಳೆ ಇದು ಬಯಲಾಗಿದೆ. 

ಲಾಕ್‌ಡೌನ್ ಸಂಕಷ್ಟ: ಮನೆ ಮಾಲಿಕಳನ್ನೇ ಹತ್ಯೆಗೈದ ದಂಪತಿ!

Related Video