Bomb Blast: ಬಾಂಬ್ ಸ್ಫೋಟದ ಹಿಂದೆ ಯಾವ ಸಂಘಟನೆ ಇದೆ ಅಂತಾ ಈಗಲೇ ಹೇಳಲ್ಲ: ಡಾ.ಜಿ. ಪರಮೇಶ್ವರ್

ಬಾಂಬ್‌ ಸ್ಫೋಟದ ಆರೋಪಿ ಕುರುಹು ಸಿಕ್ಕಿದೆ. ಆತ ಬಸ್‌ನಲ್ಲಿ ಬಂದಿದ್ದ ಎಂಬ ಮಾಹಿತಿ ಸಿಕ್ಕಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
 

Share this Video
  • FB
  • Linkdin
  • Whatsapp

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ(Bengaluru rameshwaram cafe) ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ್(Dr.G.Parameshwar )ಮಾತನಾಡಿದ್ದಾರೆ. ಕೇಸನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಘಟನೆ ಬಗ್ಗೆ ಸಾಕಷ್ಟು‌ ಕುರುಹುಗಳು ಸಿಕ್ಕಿವೆ. ಸಿಸಿಟಿವಿಯಲ್ಲಿ ಕೆಲವು ಸಾಕ್ಷ್ಯಗಳು ಸಿಕ್ಕಿವೆ. ಆರೋಪಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲ ಆಯಾಮದಲ್ಲೂ ತನಿಖೆ‌ ನಡೀತಿದೆ ಎಂದು ಅವರು ಸ್ಪಷ್ಟಪಡಿಸಿದರು. ಸುಮಾರು ‌28 ಬಸ್‌ಗಳು ಓಡಾಡಿವೆ. ಆತ ಬಸ್‌ನಲ್ಲಿ(BUS) ‌ಬಂದಿರುವ ಸಾಧ್ಯತೆ‌ ಇದೆ. ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಇದೆ. ಯಾವ ಕಾರಣಕ್ಕೂ‌ ಬಿಡೋದಿಲ್ಲ. ಎಷ್ಟೇ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದರೂ ಬಿಡೋದಿಲ್ಲ. ಈ ಘಟನೆ ಒಬ್ಬನಿಂದ ಆಗಿದೆಯೋ ಏನು ಅಂತಲೂ ತನಿಖೆ ನಡೀತಿದೆ. ಹೋಟೆಲ್ ಅವ್ರು‌ ಮೂರ್ನಾಲ್ಕು ಕಡೆ ಸಕ್ಸಸ್ ಆಗಿರೋದ್ರಿಂದ ಮಾಡಿರಬಹುದೇನೋ..? ಎಲ್ಲಾ ಆಯಾಮದಲ್ಲೂ ತನಿಖೆ‌ ನಡೀತಿದೆ ಎಂದು ಗೃಹ ಸಚಿವರು ಹೇಳಿದರು.

ಇದನ್ನೂ ವೀಕ್ಷಿಸಿ:  ಪಾಕ್‌ನ ಭಯೋತ್ಪಾದಕರಿಗೆ ಭಾರತಕ್ಕೆ ಬಂದು ಏನು ಮಾಡೋಕಾಗಲ್ಲ, ಅದಕ್ಕೆ ಇಲ್ಲಿಯೇ ಸೃಷ್ಟಿ ಮಾಡಿದ್ದಾರೆ: ಸೂಲಿಬೆಲೆ

Related Video