ಮದುವೆ ಸಂದರ್ಭದಲ್ಲಿ ಆದರ್ಶ ಮೆರೆದಿದ್ದ ಪೊಲೀಸಪ್ಪ: ಬಳಿಕ ಶುರುವಾಯ್ತು ವರದಕ್ಷಿಣೆ ಕಾಟ !

ಆತ ಸಾರ್ವಜನಿಕ ರಕ್ಷಣೆಯ ಜವಬ್ದಾರಿ ಹೊತ್ತ ಪೊಲೀಸ್‌ ಇಲಾಖೆಯ ನೌಕರ. ಬ್ರೈನ್‌ ಟ್ಯೂಮರ್‌ ಕಾಯಿಲೆಗೆ ತುತ್ತಾದ ಯುವತಿಗೆ ಮದುವೆಯಾಗುವ ಮೂಲಕ ಜೀವನಕೊಟ್ಟು ಎಲ್ಲರ ಕಣ್ಣಲ್ಲಿ ಹೀರೋ ಆಗಿದ್ದ. ಆದರೆ ದಿನ ಕಳೆದಂತೆ ತನ್ನ ವರಸೆ ಬದಲಿಸಿ ವಿಲನ್ ಆಗಿದ್ದಾನೆ. ವರದಕ್ಷಿಣೆ ತರುವಂತೆ ಅನಾರೋಗ್ಯ ಪೀಡಿತ ಹೆಂಡತಿಗೆ ಕಿರುಕುಳು ನೀಡುತ್ತಿದ್ದು, ಟಾರ್ಚರ್ ತಾಳಲಾರದೇ ಆಕೆ ಎಸ್ಪಿ ಕಚೇರಿ ಮೆಟ್ಟಿಲೇರಿದ್ದಾಳೆ.

Share this Video
  • FB
  • Linkdin
  • Whatsapp

ನ್ಯಾಯಕ್ಕಾಗಿ ತುಮಕೂರು ಎಸ್ಪಿ ಕಚೇರಿ ಬಳಿ ನಿಂತಿರುವ ಈಕೆಯ ಹೆಸರು ಸಹನಾ. ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದ ನಿವಾಸಿಗಳಾದ ಜಯಕುಮಾರ್‌-ರುಕ್ಮಿಣಿ ದಂಪತಿಯ ಪುತ್ರಿ. ಡಿಪ್ಲೋಮ ಓದಿರುವ ಈಕೆಗೆ ಒಂದು ವರ್ಷದ ಹಿಂದೆ ಕುಟುಂಬದ ಸಂಬಂಧಿ ತುಮಕೂರು(Tumakur)ನಗರ ಠಾಣೆಯ ಕಾನ್ಸ್‌ಸ್ಟೇಬಲ್ ಸುನಿಲ್‌ ಕುಮಾರ್‌ ಎಂಬಾತನೊಂದಿಗೆ ವಿವಾಹವಾಗಿದೆ. ಮದುವೆ ಇನ್ನೆರಡು ದಿನ ಇದೆ ಅನ್ನೋ ಸಂದರ್ಭದಲ್ಲಿ ಸಹನಾಳಿಗೆ ತಲೆನೋವು ಕಾಣಿಸಿಕೊಂಡಿತ್ತು. ಮನೆಯವರು ಈಕೆಗೆ ಎಂಆರ್‌ಐ ಸ್ಕ್ಯಾನ್‌ ಮಾಡಿಸಿದಾಗ ಬ್ರೈನ್‌ ಟ್ಯೂಮರ್‌(Brain tumor) ಇರೋದು ಗೊತ್ತಾಗಿದೆ. ಸಹನ ಬದುಕುವುದು ಒಂದು ತಿಂಗಳು ಮಾತ್ರ ಅಂತ ವೈದ್ಯರು ತಿಳಿಸಿದ್ದಾರೆ. ಆಗ ಸಹನಾ ಪೋಷಕರು ಮಗಳಿಗೆ ಮದುವೆ ಮಾಡೋದೇ ಬೇಡ ಅನ್ನೋ ನಿರ್ಧಾರಕ್ಕೆ ಬಂದಿದ್ರು. ಆದ್ರೆ ಹಠ ಬಿಡದ ಸುನೀಲ್‌ ನಾನು ಈಕೆಯನ್ನೇ ಮದುವೆಯಾಗುತ್ತೇನೆಂದು ಹೇಳಿ ಆದರ್ಶ ಮರೆದಿದ್ದ. ಪ್ರಾರಂಭದಲ್ಲಿ ಹೆಂಡತಿಯನ್ನು ಚೆನ್ನಾಗಿಯೇ ನೋಡಿಕೊಂಡಿದ್ದ. ಆದ್ರೆ, ಮದುವೆ ನಡೆದು ಒಂದು ವರ್ಷವಾದ ಬಳಿಕ ಅಸಲಿ ಆಟ ಶುರುಮಾಡಿದ್ದಾನಂತೆ. ವರದಕ್ಷಿಣೆ (Dowry harassment) ತರುವಂತೆ ಲಾಠಿ ಹಾಗೂ ಬೂಟಿನಿಂದ ಸಹನಾಗೆ ಮನ ಬಂದಂತೆ ಥಳಿಸಿ ಹಿಂಸೆ ನೀಡುತ್ತಿದ್ದಾನಂತೆ. 

ಇದನ್ನೂ ವೀಕ್ಷಿಸಿ: KBJNL ಶಿಫ್ಟ್‌ಗೆ ಆದೇಶವಿದ್ರೂ ಎಂಡಿ ಕಳ್ಳಾಟ: ಬೆಂಗಳೂರಿನ ಕಚೇರಿಗೆ ವಿಜಯಪುರ ರೈತರ ಅಲೆದಾಟ

Related Video