ಮಲಗಿದ್ದಲ್ಲೇ ಹೆಣವಾದ ಅಣ್ಣ-ತಂಗಿ: ಸೂಸೈಡ್ ಅಂದ ಗಂಡ.. ಕೊಲೆ ಎಂದ ಮಗ..!

ಆಸ್ತಿ ವಿಚಾರಕ್ಕೆ ಎರಡು ಹೆಣ ಹಾಕಿಬಿಟ್ಟರು..!
2 ಹೆಣ ಹಾಕಿ ಆತ್ಮಹತ್ಯೆಯ ನಾಟಕವಾಡಿದ್ರು..!
ಪೊಲೀಸರಿಗೂ ದಿಕ್ಕು ತಪ್ಪಿಸಿದ್ರು ಹಂತಕರು..!

Share this Video
  • FB
  • Linkdin
  • Whatsapp

ಅದು ಸುಂದರ ಕುಟುಂಬ. ಗಂಡ ಹೆಂಡತಿ ಮತ್ತು ಮಗ. ಮನೆಯಲ್ಲಿ ಬಡತನವಿದ್ರೂ ಸಖುಖವಾಗಿದ್ರು. ಆದ್ರೆ ಆವತ್ತೊಂದು ದಿನ ಹೆಂಡತಿ ಮಲಗಿದಲ್ಲೇ ಹೆಣವಾಗಿದ್ಲು. ಅವಳ ಪಕ್ಕದಲ್ಲೇ ಅವಳ ಅಣ್ಣ ಕೂಡ ಸತ್ತು ಬಿದ್ದಿದ್ದ. ಹೆಂಡತಿ ಸತ್ತು ಮಲಗಿದ್ದನ್ನ ನೋಡಿ ಗಂಡ ಸೂಸೈಡ್ ಅಂತ ಪೊಲೀಸರಿಗೆ(police) ದೂರು ನೀಡಿದ. ಆದ್ರೆ ಪೊಲೀಸರಿಗೆ ಅದು ಆತ್ಮಹತ್ಯೆಯಲ್ಲ ಅನ್ನೋ ಡೌಟ್ ಬಂದಿತ್ತು. ಇದೇ ಕಾರಣಕ್ಕೆ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ರು. ಆದ್ರೆ ಈ ಕೇಸ್ಗೆ ಟ್ವಿಸ್ಟ್ ಸಿಕ್ಕಿದ್ದು ಸತ್ತವಳ ಮಗ ಕೊಟ್ಟ ಒಂದು ಹೇಳಿಕೆ. ಕೊಲೆ(Murder) ಮಾಡೋದಕ್ಕೆ ಒಂದು ರೀಸನ್ ಬೇಕಿತ್ತು.. ಅದಕ್ಕೇ ಅನೈತಿಕ ಸಂಬಂಧದ ಕಥೆಯನ್ನ ಕಟ್ಟುತ್ತಿದ್ದಾರೆ ಅಂತ ಕಾವ್ಯ ಮತ್ತು ಕೊಟ್ರೇಶ್ ಆಪ್ತರು ಆರೋಪಿಸುತ್ತಿದ್ದಾರೆ. ಇವರ ಮಾತು ಕೂಡ ನಿಜ ಅನಿಸುತ್ತೆ. ಆದ್ರೆ ಪೊಲೀಸರು ಮೊದಲಿಗೆ ನಂದೀಶ ಹೇಳಿದ ಮಾತುಗಳನ್ನ ನಂಬಿ ಅದೇ ರೀಸನ್ ಅಂತ ಅಂದುಕೊಂಡಿದ್ರು.. ಆದ್ರೆ ಮತ್ತೆ ವಿಚಾರಣೆ ಮುಂದುವರೆಸಿದಾಗ ಡಬಲ್ ಮರ್ಡರ್(Double murder) ಹಿಂದಿನ ಅಸಲಿ ರೀಸನ್ ಬಯಲಾಗಿದೆ. ಅನೈತಿಕ ಸಂಬಂಧಕ್ಕೆ ಆದ ಕೊಲೆಗಳು ಅವು ಅಂತ ಕೇವಲ ಊರಿನವರಷ್ಟೇ ಅಲ್ಲ. ಪೊಲೀಸರೂ ಕೂಡ ಹಾಗೇ ತಿಳಿದಿದ್ರು. ಆದ್ರೆ ನಿಜ ಕಾರಣ ಬೇರೆನೇ ಇತ್ತು. ನಂದೀಶನ ತಂದೆಯ ಹೆಸರಲ್ಲಿ 38 ಎಕರೆ ಜಮೀನಿತ್ತು. ಆ ಜಮೀನಿನ ಮೇಲೆ ನಂದೀಶನ ಹೆಂಡತಿಯ ಕಣ್ಣು ಬಿದ್ದಿತ್ತು. ಹೇಗಾದ್ರೂ ಮಾಡಿ ಆ ಆಸ್ತಿಯನ್ನ ತನ್ನ ಹೆಸರಿಗೆ ಮಾಡಿಸಿಕೊಳ್ಳಬೇಕು ಎಂಬ ದುರಾಸೆ ಇತ್ತು. ಇದೇ ದುರಾಶೆಯಲ್ಲಿ ಲಾಯರ್ ಒಬ್ಬರನ್ನ ಆಕೆ ಸಂಪರ್ಕಿಸಿದ್ಲು. ಇದು ಅದೇಗೋ ಮಾವ ಜಾತಪ್ಪನಿಗೆ ಗೊತ್ತಾಗಿಬಿಡ್ತು. ಅಷ್ಟೇ ಅವಳ ಹೆಣ ಹಾಕಲು ಜಾತಪ್ಪ ನಿರ್ಧರಿಸಿಬಿಟ್ಟ. ಅಷ್ಟೇ ಅಲ್ಲ ಅವಳನ್ನ ಮುಗಿಸಿ ಮಗನಿಗೆ ಬೇರೆ ಮದುವೆ ಮಾಡುವ ಕನಸು ಕಂಡಿದ್ದ. ಆದ್ರೆ ಕೊಲೆ ಮಾಡಿ ನಟಕ ಮಾಡಿದವನಿಗೆ ಆತನ ಮೊಮ್ಮಗನೇ ಜೈಲಿಗೆ ಕಳಿಸಿದ್ದಾನೆ.ಪುಟ್ಟ ಬಾಲಕ ಡಬಲ್ ಮರ್ಡರ್ ಕಾರಣವನ್ನ ಬಿಚ್ಚಿಟ್ಟಿದ್ದ.

ಇದನ್ನೂ ವೀಕ್ಷಿಸಿ: ಅನ್ಯ ಜಾತಿ ಯುವಕನನ್ನ ಪ್ರೀತಿಸಿದ್ದಕ್ಕೆ ಮಗಳ ಕೊಂದ ತಂದೆ..!

Related Video