Asianet Suvarna News Asianet Suvarna News

ಅನ್ಯ ಜಾತಿ ಯುವಕನನ್ನ ಪ್ರೀತಿಸಿದ್ದಕ್ಕೆ ಮಗಳ ಕೊಂದ ತಂದೆ..!

ಪರಿಶಿಷ್ಟ ಜಾತಿ ಯುವಕನನ್ನು ಮಗಳು ಪ್ರೀತಿಸಿದಳು ಎಂಬ ಕಾರಣಕ್ಕೆ ತಂದೆ ಆಕೆಯನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮರ್ಯಾದಾಗೇಡು ಹತ್ಯೆ(Honor killing) ಆಗಿರುವ ಶಂಕೆ ಉಂಟಾಗಿದೆ. ಪರಿಶಿಷ್ಟ ಜಾತಿ(Scheduled Caste) ಯುವಕನನ್ನು ಪ್ರೀತಿಸಿದ್ದಕ್ಕೆ (Love) ತಂದೆಯೇ ಮಗಳ ಹತ್ಯೆ ಮಾಡಿದ್ದಾನೆ ಎನ್ನಲಾಗ್ತಿದೆ. ಆರೋಪಿಗೆ ಮೂವರು ಹೆಣ್ಣು ಮಕ್ಕಳು ಇದ್ದು, ಎರಡನೇ ಮಗಳು ಪ್ರೀತಿಸಿ ಈಗಾಗಲೇ ಮದುವೆ ಆಗಿದ್ದಾಳೆ. ಕವನ ದೊಡ್ಡ ಮಗಳಾಗಿದ್ದು, ಈಕೆ ಮತ್ತೊಬ್ಬ ತಂಗಿಯ ಪ್ರೀತಿಗೂ ಕಾರಣವೆಂದು ಕೊಲೆ ಮಾಡಲಾಗಿದೆಂದು ತಿಳಿದುಬಂದಿದೆ. ಈ ವಿಚಾರವಾಗಿ ಮಂಗಳವಾರ ಪೊಲೀಸ್‌ ಠಾಣೆಯಲ್ಲಿ ರಾಜಿ ಸಂಧಾನ ಸಹ ಆಗಿರುತ್ತದೆ. ಆ ಬಾಲಕಿಗೆ 18 ವರ್ಷ ಆಗದ ಕಾರಣ ಮಹಿಳಾ ಸಾಂತ್ವನ ಕೇಂದ್ರಕ್ಕೆ ಅಧಿಕಾರಿಗಳು ಕರೆದೊಯ್ದಿದ್ದರು. ಈ ವಿಷಯವಾಗಿ ಬುಧವಾರ ಮನೆಯಲ್ಲಿ ಗಲಾಟೆಯಾಗಿದೆ. ಇದಕ್ಕೆಲ್ಲಾ ಕವನ ಕಾರಣವೆಂದು ತಂದೆಯೇ ಕೊಲೆ ಮಾಡಿದ್ದಾನೆ. 

ಇದನ್ನೂ ವೀಕ್ಷಿಸಿ:  ಯಾದಗಿರಿ ರೈತರಿಗೆ 2.5 ಕೋಟಿ ಪಂಗನಾಮ: ಹತ್ತಿ ಖರೀದಿಸಿ..150 ಅನ್ನದಾತರಿಗೆ ಮೋಸ