Double Murder: 25 ವರ್ಷದ ಯುವತಿ..46 ವರ್ಷದ ಅಂಕಲ್..!ಲವ್ವರ್ಸ್ ಡೆಡ್..ಅಮ್ಮ ಇನ್ ಜೈಲ್..!

ಲವ್ವರ್ ಕೊಂದ ಕೆಲವೇ ಕ್ಷಣಗಳಲ್ಲಿ ಅವನೂ ಕೊಲೆಯಾದ..!
ಮಗಳು ಸಾಯೋದಕ್ಕೂ ಮೊದಲೇ ಅವನ್ನ ಕೊಂದುಬಿಟ್ಟಳು..!
ಆಕೆ ಪ್ರಿಯಕರನ ಬಳಿ ಹೋಗುವ ಮೊದಲು ಅಮ್ಮನಿಗೆ ಹೇಳಿದ್ಲು!

Share this Video

ಇತ್ತಿಚೆಗೆ ಕರ್ನಾಟಕದಲ್ಲಿ ಕ್ರೈಂ ರೇಟ್ ಜಾಸ್ತಿ ಆಗ್ತಿದೆ. ಮೊನ್ನೆ ಒಂದೇ ದಿನ 8 ಹೆಣಗಳು ಬಿದ್ದಿವೆ. ಅದರಲ್ಲೊಂದು ಬೆಂಗಳೂರಿನಲ್ಲಿ(Bengaluru) ನಡೆದ ಡಬಲ್ ಮರ್ಡರ್(Double murder). ಪಾರ್ಕ್‌ನಲ್ಲಿ ಕೂತು ಮಾತಾಡ್ತಿದ್ದ ಇಬ್ಬರು ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾರೆ. ಆದರೆ ಆ ಕೊಲೆಯ ಹಿಂದೆ ಇದ್ದಿದ್ದು ಮಾತ್ರ ಒಂದು ಅನೈತಿಕ ಸಂಬಂಧ(Illegal Relationship). ಆ ಅಂಬಂಧಕ್ಕೆ ಯುವತಿಯೊಬ್ಬಳು ತನ್ನ ಪ್ರೀಯಕರನಿಂದಲೇ ಕೊಲೆಯಾದ್ರೆ ಆ ಪ್ರೀಯಕರನನ್ನ ಯುವತಿಯ ತಾಯಿ ಕೊಂದು ಇನ್ಸ್ಟ್ಯಾಂಟ್ ಆಗೆ ಸೇಡು ತೀರಿಸಿಕೊಂಡಿದ್ದಳು. ಮಗಳನ್ನ ಕೊಂದ ಅಂತ ಗೀತಾ, ಸುರೇಶನನ್ನ ಅಲ್ಲೇ ಕೊಂದು ಮುಗಿಸಿದ್ಲು. 25 ವರ್ಷದ ಅನುಷಾ.. 45 ವರ್ಷದ ಸುರೇನ ಜೊತೆ ಲವ್‌ನಲ್ಲಿ(Love) ಬಿದ್ದಿದ್ಲು. ಆದ್ರೆ ಪಾಪ ಅವಳಿಗೆ ಆತನಿಗೆ ಈಗಾಗಲೇ ಒಂದು ಮದುವೆಯಾಗಿ ಒಂದು ಮಗು ಕೂಡ ಇದೆ ಅನ್ನೋದು ಗೊತ್ತಿರಲಿಲ್ಲ. ಆದ್ರೆ ಯಾವಾಗ ಸತ್ಯ ಗೊತ್ತಾಯ್ತೋ ಆಕೆ ಅವನನ್ನ ಬಿಟ್ಟುಬಿಟ್ಟಿದ್ಲು. ಆದ್ರೆ ಆಗ್ಗಾಗೆ ಮೀಟ್ ಮಾಡೋದು ಇದ್ದೇ ಇತ್ತು. ಈ ವಿಚಾರವಾಗಿ ಸುರೇಶನ ಹೆಂಡತಿ ಕೂಡ ಪೊಲೀಸ್ ಠಾಣೆ ಮೆಟ್ಟಿಲ್ಲೇರಿದ್ಲು. ಆದ್ರೆ ಯಾವಾಗ ಅನುಷಾ ಇನ್ನೂ ತನಗೆ ಸುರೇಶ ಬೇಡವೇ ಬೇಡ ಅಂತ ಡಿಸೈಡ್ ಮಾಡಿದ್ಲೋ ಲಾಸ್ಟ್ ಮೀಟ್ ಅಂತ ಸುರೇಶ ಪಾರ್ಕ್‌ಗೆ ಕರೆಸಿಕೊಂಡ. ಜೊತೆಗೆ ಒಂದು ಚಾಕುವನ್ನೂ ತೆಗೆದುಕೊಂಡು ಬಂದಿದ್ದ. ಇನ್ನೂ ಲಾಸ್ಟ್ ಮೀಟ್ಗೆ ಹೋದ ಅನುಷಾ ತನ್ನ ತಾಯಿಗೆ ವಿಷಯವನ್ನ ಹೇಳಿದ್ಲು. ಆಗ ಆಕೆ ಕೂಡ ಪಾರ್ಕ್‌ಗೆ ಬಂದಿದ್ಲು.. ಆದ್ರೆ ಅಮ್ಮ ಪಾರ್ಕ್‌ಗೆ ಬರುವ ಹೊತ್ತಿಗೆ ಸುರೇಶ, ಅನುಷಾಗೆ ಚಾಕು ಹಾಕೇಬಿಟ್ಟ.ಇದನ್ನ ನೋಡಿದ ಗೀತಾ ಅವನ ತಲೆಯ ಮೇಲೆ ಕಲ್ಲು ಹಾಕಿಬಿಟ್ಟಳು. 

ಇದನ್ನೂ ವೀಕ್ಷಿಸಿ:  Munirathna: ಮತಾಂತರದ ಬಗ್ಗೆ ಮುನಿರತ್ನ ಶಾಕಿಂಗ್‌ ಹೇಳಿಕೆ: ದಲಿತ ಯುವತಿಯರೇ ಟಾರ್ಗೆಟ್‌ ಅಂತೆ!

Related Video