ತಮಿಳುನಾಡು ರೌಡಿ ಶೀಟರ್ ಮೇಲೆ ಅಟ್ಯಾಕ್: ಊರು ಬಿಟ್ಟರೂ ಎದುರಾಳಿಗಳು ಬಿಡಲಿಲ್ಲ..!

ಜೀವ ಭಯದ ಹಿನ್ನೆಲೆಯಲ್ಲಿ ಊರು ಬಿಟ್ಟು ಬಂದ ರೌಡಿ ಶೀಟರ್ ಮೇಲೆ ಬೆಂಗಳೂರಿನ ಹೊಟೇಲೊಂದರಲ್ಲಿ ಮೊನ್ನೆ ದಾಳಿ ನಡೆದಿರುವುದು ಗೊತ್ತಿರುವ ವಿಚಾರ. ಹೀಗೆ ದಾಳಿಗೊಳಗಾದ ಗುರುಸ್ವಾಮಿ ಸಾಮಾನ್ಯದವನೇನಲ್ಲ, ಆತನ ಬಗ್ಗೆ ಇಲ್ಲಿದೆ ಡಿಟೇಲ್ಸ್

First Published Sep 6, 2023, 2:44 PM IST | Last Updated Sep 6, 2023, 2:44 PM IST

ಬೆಂಗಳೂರು: ಜೀವ ಭಯದ ಹಿನ್ನೆಲೆಯಲ್ಲಿ ಊರು ಬಿಟ್ಟು ಬಂದ ರೌಡಿ ಶೀಟರ್ ಮೇಲೆ ಬೆಂಗಳೂರಿನ ಹೊಟೇಲೊಂದರಲ್ಲಿ ಮೊನ್ನೆ ದಾಳಿ ನಡೆದಿರುವುದು ಗೊತ್ತಿರುವ ವಿಚಾರ. ಆದರೆ ಈ ದಾಳಿಗೊಳಗಾದ ರೌಡಿಯ ಹಿನ್ನೆಲೆ ಮಾತ್ರ ಭಯಾನಕವಾಗಿದೆ. 75 ವರ್ಷದ ಗುರುಸ್ವಾಮಿ ದಾಳಿಗೊಳಗಾದವನಾಗಿದ್ದು, ಈತನೇನು ಸಾಮಾನ್ಯ ವ್ಯಕ್ತಿಯಲ್ಲ, ತಮಿಳುನಾಡು ಸಿಎಂ ಸ್ಟಾಲಿನ್ ಅವರ ಸಹೋದರ ಎಂ.ಕೆ ಅಳಗಿರಿಯ ಬಲಗೈ ಬಂಟ ಮಧುರೈ ಮೂಲದವನಾದ ಈತ ಕಳೆದ 35 ವರ್ಷಗಳಿಂದ ಹಲವು ಪಾತಕ ಕೃತ್ಯಗಳಲ್ಲಿ ಭಾಗಿಯಾಗಿದ್ದ, ಈತನಿಗೂ ಈತನ ವಿರೋಧಿ ಗುಂಪಿಗೂ 35 ವರ್ಷಗಳಿಂದಲೂ ವೈಷಮ್ಯವಿದ್ದು, ಈತನ ಹತ್ಯೆಗೆ ಸಂಚು ರೂಪಿಸಿದ್ದರು. ಇದು ತಿಳಿದೇ ಈತ ಊರು ಬಿಟ್ಟು ಬೆಂಗಳೂರಿನಲ್ಲಿ ವಾಸ ಮಾಡಲು ಬಾಡಿಗೆ ಮನೆ ಹುಡುಕುತ್ತಿದ್ದ. ಆದರೆ ಈತ ಊರು ಬಿಟ್ಟಿದ್ದು ಈತನ ವಿರೋಧಿ ಬಣಕ್ಕೂ ತಿಳಿದಿತ್ತು. ಹೀಗಾಗಿ ಹಿಂಬಾಲಿಸಿ ಬಂದ ಗುಂಪು ಬಾಣಸವಾಡಿಯ ಸುಖ ಸಾಗರ್ ಹೊಟೇಲ್‌ಗೆ ಚಾ ಕುಡಿಯಲು ಬಂದಿದ್ದ ವೇಳೆ ಈತನ ಮೇಲೆ ಮಚ್ಚು ಬೀಸಿದ್ದಾರೆ. ಈ ಬಗ್ಗೆ ಇನ್ನಷ್ಟು ಡಿಟೇಲ್ ಈ ವೀಡಿಯೋದಲ್ಲಿದೆ ನೋಡಿ

Video Top Stories