Asianet Suvarna News Asianet Suvarna News

ಮಗನ ಹೆಂಡತಿಗೆ ಮಾವನಿಂದ ಅಶ್ಲೀಲ ಮೆಸೇಜ್, ಕಿರುಕುಳಕ್ಕೆ ಪ್ರಾಣಬಿಟ್ಟ ಸೊಸೆ!

ಅತ್ತೆ ಸೊಸೆ ರಿಲೇಷನ್ಶಿಪ್ ಅಷ್ಟು ಸೆನ್ಸಿಟೀವ್ ರಿಲೇಷನ್ಶಿಪ್ ಬೇರೊಂದಿಲ್ಲ. ಇವತ್ತಿನ ಕಾಲದಲ್ಲಿ ಜಾಯಿಂಟ್ ಫ್ಯಾಮಿಲಿ ಅನ್ನೋ ಕಾನ್ಸೆಪ್ಟ್ ಮಾಯವಾಗಿದೆ ಅಂದ್ರೆ ಅದಕ್ಕೆ ಕಾರಣ ಅತ್ತೆ ಸೊಸೆಯೇ ಆಗಿರ್ತಾರೆ. ಅತ್ತೆ ಸೊಸೆಗೆ ಕಾಟ ಕೊಡೋದು, ಸೊಸೆ ಅತ್ತೆಗೆ ಟಾಂಗ್ ಕೊಡೋ ಸ್ಟೋರಿಗಳನ್ನ ನಾವು ನೋಡುತ್ತಲೇ ಇರ್ತೀವಿ. ಆದ್ರೆ ಅದೇ ಅತ್ತೆ ಸೊಸೆ ಜಗಳದ ಬಗ್ಗೆ ಹೇಳೋದಿಲ್ಲ. ಬದಲಿಗೆ ಮಾವ ಮತ್ತು ಸೊಸೆಯ ಬಗ್ಗೆ ಹೇಳ್ತಿದ್ದೀವಿ. ಇಲ್ಲೊಬ್ಬ ಕಿರಾತಕ ಮಾವ ತನ್ನ ಸೊಸೆಗೆ ಹೇಗೆ ಕಾಟ ಕೊಟ್ಟಿದ್ದಾನೆ ಅಂದ್ರೆ ಇವತ್ತು ಆಕೆ ಪ್ರಾಣವನ್ನೇ ಬಿಟ್ಟಿದ್ದಾಳೆ. ಒಂದು ಹೆಣ್ಣು ಮಗಳನ್ನ ಇನ್ನಿಲ್ಲದಂತೆ ಕಾಡಿದ ವಿಕೃತ ಮನಸ್ಸಿನ ಮಾವನ ಕಥೆ

ಬೆಂಗಳೂರು(ಮೇ.25): ಅಪಾರ ಆಸ್ತಿ ಪಾಸ್ತಿ ಇದೆ ಅಂತ ಇದ್ದ ಮಗಳನ್ನ ಇವರ ಮನೆಗೆ ಸೊಸೆಯಾಗಿ ಕಳುಹಿಸಿಕೊಟ್ರು. ರಂಜಿತಾ ಕೂಡ ಖುಷಿಖುಷಿಯಾಗೇ ತನ್ನ ಗಂಡನ ಮನೆ ಸೇರಿದ್ಲು. ಆದ್ರೆ ಆ ಖುಷಿ ಇದ್ದಿದ್ದು ಕೇವಲ 15 ದಿನಗಳು ಮಾತ್ರ. ತನ್ನ ಮಾವನ ಅಸಲಿ ಬಣ್ಣ ನೋಡಿ ರಂಜಿತಾಳೇ ಥಂಡಾ ಹೊಡೆದಿದ್ಲು. ಆದ್ರೆ ಮಾವ ಕಾಟ ಕೊಡ್ತಿದ್ರೂ ಗಂಡ ಸುಮ್ಮನಿದ್ದನಾ..? 

ಮದುವೆಯಾಗಿ 10 ವರ್ಷದ ನಂತರ ವರದಕ್ಷಿಣೆ ಕಿರುಕುಳ ಅಂದ್ರೆ ಏನ್ ಅರ್ಥ. ಆದ್ರೆ ಈ 10 ವರ್ಷ ಆಕೆ ಕಳೆದಿದ್ದಾಳಲ್ಲ ಅದು ನಿಜಕ್ಕೂ ಗ್ರೇಟ್. ಇನ್ನೂ ಈಕೆಯ ಗಂಡನ ಕಥೆಯನ್ನ ನೀವು ಕೇಳಲೇಬೇಕು. ಈತ ತನ್ನ ಜವಾಬ್ದಾರಿಯನ್ನ ಕರೆಕ್ಟಾಗಿ ನಿರ್ವಹಿಸಿದ್ದಿದ್ರೆ ಇವತ್ತು ರಂಜಿತಾ ಬದುಕಿ ಬಿಡ್ತಿದ್ಲು. ಆದ್ರೆ ಆತ ಅತ್ತ ಒಳ್ಳೆಯ ಮಗನೂ ಆಗದೇ ಒಳ್ಳೆಯ ಗಂಡನೂ ಆಗದೇ ಇವತ್ತು ಆಕೆಯ ಸಾವಿಗೆ ಪ್ರಮುಖ ಪಾತ್ರವಹಿಸಿದ್ದಾನೆ.

ಗಂಡನನ್ನ ಕರೆದುಕೊಂಡು ಮತ್ತೊಂದು ಮನೆ ಮಾಡಿದ ರಂಜಿತಾ ಕೆಲಸಕ್ಕೂ ಸೇರಿಕೊಂಡು ಸಂಸಾರ ದೂಡ್ತಿದ್ಲು. ಆದ್ರೆ ಈ ಪಾಪಿಗಳು ಅವಳನ್ನೂ ಅಲ್ಲಿ ಹೆಚ್ಚು ದಿನ ನೆಮ್ಮದಿಯಾಗಿ ಬದುಕೋಕೆ ಬಿಡಲಿಲ್ಲ. ಮಗನನ್ನ ಛೂ ಬಿಟ್ಟು ಮತ್ತೆ ತಮ್ಮ ಎದುರಿಗೇ ಬರುವಂತೆ ಮಾಡಿಬಿಟ್ಟಿದ್ರು. ಆಕೆಯೂ ಇವರ ಬೆಣ್ಣೆ ಮಾತುಗಳನ್ನ ನಂಬಿ ಆಕೆ ಇದ್ದ ಮನೆಯನ್ನ ಬಿಡಲು ನಿರ್ಧರಿಸಿದ್ಲು. ಆದ್ರೆ ಮತ್ತೆ ನರಕದ ಕೂಪಕ್ಕೆ ಬಿದ್ದ ರಂಜಿತಾ ತನ್ನ ಪ್ರಾಣವನ್ನೇ ಬಿಡುವಂತಾಯ್ತು.

Video Top Stories