Asianet Suvarna News Asianet Suvarna News

13 ವರ್ಷಗಳ ಬಳಿಕ ಪರಪ್ಪನ ಅಗ್ರಹಾರಕ್ಕೆ ನಟ ದರ್ಶನ್? 139ಕ್ಕೂ ಹೆಚ್ಚು ಸಾಕ್ಷ್ಯ ಕಲೆಹಾಕಿದ ತನಿಖಾಧಿಕಾರಿಗಳು!


ಕೊಲೆ ಕೇಸ್‌ ದರ್ಶನ್ ಗ್ಯಾಂಗ್‌ ಸಂಜೆ ನ್ಯಾಯಾಲಯಕ್ಕೆ ಹಾಜರು
ಮಲ್ಲತ್ತಹಳ್ಳಿಯ ಸರ್ಕಾರಿ ಆಸ್ಪತ್ರೆ ವೈದ್ಯರಿಂದ ಮೆಡಿಕಲ್‌ ಟೆಸ್ಟ್
ಪವಿತ್ರಾಗೌಡ ಸೇರಿ 13 ಮಂದಿ ಆರೋಪಿಗಳು ಜೈಲು ಪಾಲು

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ(Renukaswamy murder case) ಸಂಬಂಧಿಸಿದಂತೆ ದರ್ಶನ್ ಗ್ಯಾಂಗ್‌ನನ್ನು ಸಂಜೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು. ಪೊಲೀಸ್ ಕಸ್ಟಡಿಗೆ (Police custody) ಕೇಳದಿರಲು ಖಾಕಿ ನಿರ್ಧರಿಸಿರುವ ಸಾಧ್ಯತೆ ಇದೆ. 139ಕ್ಕೂ ಹೆಚ್ಚು ಸಾಕ್ಷ್ಯವನ್ನು ತನಿಖಾಧಿಕಾರಿಗಳು ಕಲೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಪವಿತ್ರಾ ಗೌಡ ಸೇರಿ 13 ಮಂದಿ ಆರೋಪಿಗಳು ಜೈಲು ಪಾಲಾಗಿದ್ದು, 2 ದಿನ ದರ್ಶನ್‌ ಬಳಿ ಸಾಕ್ಷ್ಯ ಕಲೆಹಾಕಿದ ಪೊಲೀಸರು(Police). ಸಂಜೆ ಕೋರ್ಟ್‌ನಲ್ಲಿ ದರ್ಶನ್ ಜೈಲು ಭವಿಷ್ಯ ನಿರ್ಧಾರವಾಗಲಿದೆ. ಇಂದು ದರ್ಶನ್ ಗ್ಯಾಂಗ್ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ. ಆರೋಪಿಗಳಿಗೆ ಠಾಣೆಯಲ್ಲಿಯೇ ಮೆಡಿಕಲ್‌ ಟೆಸ್ಟ್ ನಡೆಸಲಾಗುವುದು. ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿಯೇ ಮೆಡಿಕಲ್ ಟೆಸ್ಟ್ ನಡೆಸುವ ಸಾಧ್ಯತೆ ಇದೆ. ಆರೋಪಿ ನಟ ದರ್ಶನ್, ಪ್ರದೂಶ್, ವಿನಯ್, ಧನರಾಜ್ ಗೆ ಮೆಡಿಕಲ್ ಟೆಸ್ಟ್ ನಡೆಸಲಾಗುವುದು. ಮಧ್ಯಾಹ್ನ 3 ಗಂಟೆ ಬಳಿಕ ಕೋರ್ಟ್‌ಗೆ ದರ್ಶನ್ ಗ್ಯಾಂಗ್‌ನನ್ನು ಹಾಜರು ಪಡಿಸಲಾಗುವುದು.

ಇದನ್ನೂ ವೀಕ್ಷಿಸಿ:  ಕಾರ ಹುಣ್ಣಿಮೆ ನೆಪದಲ್ಲಿ ಜಾನುವಾರಗಳಿಗೆ ಚಿತ್ರಹಿಂಸೆ..! ಎತ್ತು ,ಕುದುರೆಗಳಿಗೆ ಕರೆಂಟ್ ಶಾಕ್ ನೀಡಿ ವಿಕೃತಿ..!

Video Top Stories