ಕಾರ ಹುಣ್ಣಿಮೆ ನೆಪದಲ್ಲಿ ಜಾನುವಾರಗಳಿಗೆ ಚಿತ್ರಹಿಂಸೆ..! ಎತ್ತು ,ಕುದುರೆಗಳಿಗೆ ಕರೆಂಟ್ ಶಾಕ್ ನೀಡಿ ವಿಕೃತಿ..!
ಕರೆಂಟ್ ಶಾಕ್ ಕೊಟ್ಟು ಜಾನುವಾರುಗಳಿಗೆ ಚಿತ್ರಹಿಂಸೆ..!
ಕರೆಂಟ್ ಶಾಕ್,ನೋವಿನಿಂದ ಬೆದರುವ ಜಾನುವಾರುಗಳು
ಎತ್ತುಗಳ ಓಡಿಸಲು ಮೊದಲೇ ಬೇಡ ಎಂದಿದ್ದ ಪೊಲೀಸರು
ವಿಜಯಪುರದಲ್ಲಿ(Vijayapura) ರಾಸುಗಳ ಓಟದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಕಾರ ಹುಣ್ಣಿಮೆ(Kara Hunnime) ನೆಪದಲ್ಲಿ ಜಾನುವಾರಗಳಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ. ಎತ್ತು ,ಕುದುರೆಗಳಿಗೆ ಕರೆಂಟ್ ಶಾಕ್(Current Shock) ನೀಡಿ ವಿಕೃತಿ ಮೆರೆಯಲಾಗುತ್ತಿದೆ. ಎಲೆಕ್ಟ್ರಿಕ್ ಶಾಕ್ ನೋವಿನಿಂದ ಜಾನುವಾರುಗಳು( Bull Race) ಬೆದರಿ ಓಡುತ್ತಿವೆ. ಜಿಲ್ಲಾ ಪಂಚಾಯತ್ ಮೈದಾನದಲ್ಲಿ ಎತ್ತು, ಕುದುರೆ ಓಟ ನಡೆದಿದೆ. ಜಾನುವಾರುಗಳು ಬೆದರಿ ಸ್ಪೀಡಾಗಿ ಓಡಿಸಲು ಶಾಕ್ ಟ್ರಿಟ್ಮೆಂಟ್ ನೀಡಲಾಗುತ್ತಿದೆ. ಎತ್ತು ಕುದುರೆಗಳ ಗುಪ್ತಾಂಗ ಭಾಗಕ್ಕೆ ಕರೆಂಟ್ ಶಾಕ್ ನೀಡಿ ಹಿಂಸೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಬ್ಯಾಟರಿ ಚಾಲಿತ ಟಾರ್ಚ್ ಗಳಿಂದ ಶಾಕ್ ನೀಡಿ ಚಿತ್ರಹಿಂಸೆ, ರೈತರಲ್ಲೂ ಈ ಕೃತ್ಯ ಅಸಮಧಾನಕ್ಕೆ ಕಾರಣವಾಗಿದೆ. ಕುದುರೆ , ಎತ್ತುಗಳಿಗೆ ಬಾರಕೋಲು, ಬಡಿಗೆಗಳಿಂದಲೂ ಹೊಡೆದು ಚಿತ್ರಹಿಂಸೆ ನೀಡಲಾಗುತ್ತಿದೆ. ಎತ್ತುಗಳನ್ನ ಓಡಿಸಲು ಮೊದಲೇ ಬೇಡ ಎಂದು ಪೊಲೀಸರು ತಿಳಿಸಿದ್ದು, ಆದ್ರೂ ಪೊಲೀಸರ ವಿರೋಧದ ನಡುವೆಯೂ ಎತ್ತುಗಳ ಓಟದ ಸ್ಪರ್ಧೆ ನಡೆಸಲಾಗಿದೆ.
ಇದನ್ನೂ ವೀಕ್ಷಿಸಿ: ಶಹಾಪೂರ ಅರಣ್ಯಾಧಿಕಾರಿ ಬರ್ಬರ ಹತ್ಯೆ! ಕ್ಷುಲ್ಲಕ ವಿಚಾರಕ್ಕೆ ಐವರು ದುಷ್ಕರ್ಮಿಗಳಿಂದ ಕೊಲೆ!