ದರ್ಶನ್‌ಗೆ ಶುರುವಾಗುತ್ತಾ ಮತ್ತೊಂದು ಸಂಕಷ್ಟ? ಐಟಿ ಕೇಸ್‌ನಲ್ಲಿ ಸಿಲುಕುತ್ತಾರಾ ನಟ ?

ಟ್ಯಾಕ್ಸ್ ಕಟ್ಟಿಲ್ಲ ಅಂದ್ರೆ ದರ್ಶನ್ ಜತೆ ಹಣ ಕೊಟ್ಟವರಿಗೂ ಸಂಕಷ್ಟ
ಮೋಹನ್ ರಾಜ್ ಎಂಬ ವ್ಯಕ್ತಿ ನಟನಿಗೆ ಹಣ ನೀಡಿರೋ ಮಾಹಿತಿ 
ಮೋಹನ್ ರಾಜ್‌ಗೂ ನೋಟಿಸ್ ನೀಡಿ ವಿಚಾರಣೆ ನಡೆಸಲು ಸಿದ್ಧತೆ

First Published Jun 21, 2024, 3:34 PM IST | Last Updated Jun 21, 2024, 3:34 PM IST

ದರ್ಶನ್(Darshan) ಮನೆಯಲ್ಲಿ 37,40,000 ಲಕ್ಷ ನಗದನ್ನು ಜಪ್ತಿ ಮಾಡಲಾಗಿದ್ದು, ಪತ್ನಿ ವಿಜಯಲಕ್ಷ್ಮಿ(Vijayalakshmi) ನಿವಾಸದಲ್ಲಿ 3 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನ(Renukaswamy murder case) ಆರೋಪಿಗಳಿಗೆ 30 ಲಕ್ಷ ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಒಟ್ಟು ರೇಣುಕಾಸ್ವಾಮಿ ಕೇಸ್‌ನಲ್ಲಿ 30 ಲಕ್ಷ ನಗದು ಪತ್ತೆಯಾಗಿದ್ದು, ಈ ಹಣದ ಬಗ್ಗೆ ಐಟಿಗೆ ಪೊಲೀಸರು ಪತ್ರ ಬರೆಯಲಿದ್ದಾರೆ. 10 ಲಕ್ಷಕ್ಕಿಂತ ಹೆಚ್ಚು ನಗದು ಪತ್ತೆಯಾದರೆ ಐಟಿಗೆ ಮಾಹಿತಿ ನೀಡಬೇಕಾಗಿದೆ. ಹಾಗಾಗಿ ದರ್ಶನ್  ಕೇಸ್‌ನಲ್ಲಿಯೂ ಐಟಿಗೆ ಖಾಕಿ ಮಾಹಿತಿ ನೀಡಲಿದೆ. ಕೊಲೆ ಕೇಸ್ ಜತೆ ದರ್ಶನ್‌ಗೆ ಐಟಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ದರ್ಶನ್ ಸಿನಿಮಾ ಅಡ್ವಾನ್ಸ್ , ಸಿನಿಮಾ ಹಣ ಅಂತ ಹೇಳಿದ್ರು ಸಂಕಷ್ಟ ಎದುರಾಗಲಿದೆ. ಇಷ್ಟು ಕ್ಯಾಶ್ ಏಕೆ ಇಟ್ಟುಕೊಂಡಿದ್ದರು ಎಂದು ಪ್ರಶ್ನೆ ಎದುರಾಗುವ ಸಾಧ್ಯತೆ ಇದೆ. ಹಣಕ್ಕೆ ಟ್ಯಾಕ್ಸ್ ಕಟ್ಟಿದ್ದಾರಾ ಅಂತ ಐಟಿ ಅಧಿಕಾರಿಗಳು ಚೆಕ್ ಮಾಡಲಿದ್ದಾರೆ.

ಇದನ್ನೂ ವೀಕ್ಷಿಸಿ:  ದರ್ಶನ್ ಗ್ಯಾಂಗ್‌ ಮೇಲೆ ಮತ್ತೊಂದು ಆರೋಪ: ಶಾಸಕ ಕದಲೂರು ಉದಯ್ ಗನ್ ಮ್ಯಾನ್ ಮೇಲೆ ಹಲ್ಲೆ ?