ಆತ್ಮಹತ್ಯೆ ಮಾಡಿಕೊಂಡು ಸತ್ತನಾ ಶ್ರೀಧರ್ ? ಅನುಮಾನ ಹುಟ್ಟಿಸಿದ ಡೆತ್‌​ನೋಟ್..ಸಹಿ ಹಾಕಿದ ಮೇಲೂ ಹೆಬ್ಬೆಟ್ಟು ಹಾಕಿದ್ಯಾಕೆ ?

ದರ್ಶನ್ ಫಾರ್ಮ್​ಹೌಸ್​ನಲ್ಲಿ ಮ್ಯಾನೇಜರ್ ಶ್ರೀಧರ್ ಸಾವಿಗೆ ಕಾರಣ ಏನು..?
ಆತ್ಮಹತ್ಯೆಯಿಂದ ಸಾವು ಎಂಬ ನಿರ್ಣಯಕ್ಕೆ ಬಂದ ಆನೇಕಲ್ ಪೊಲೀಸರು
ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಗಿಸಿದ್ದ ಪೊಲೀಸರು

Share this Video
  • FB
  • Linkdin
  • Whatsapp

ಎರಡು ತಿಂಗಳ ಹಿಂದೆ ದರ್ಶನ್(Darshan)​ ಫಾರ್ಮ್‌ಹೌಸ್‌ನಲ್ಲಿ ಮ್ಯಾನೇಜರ್ ಶವ ಸಿಕ್ಕಿತ್ತು. ಫಾರ್ಮ್ ಹೌಸ್ ಪಕ್ಕದ ಕಲ್ಲು ಬಂಡೆ ಮೇಲೆ ರಕ್ತಕಾರಿ ಶ್ರೀಧರ್ ಸತ್ತಿದ್ದ. ಆನೇಕಲ್‌​ನ(Anekal) ಬಗ್ಗನದೊಡ್ಡಿಯಲ್ಲಿ ಶ್ರೀಧರ್ ಮೃತದೇಹ ಪತ್ತೆಯಾಗಿದ್ದು, ದರ್ಶನ್‌​ಗೆ ಸೇರಿದ ದುರ್ಗಾ ಫಾರ್ಮ್ ಹೌಸ್‌​ನಲ್ಲಿ(Durga Farm House) ಶ್ರೀಧರ್ ಕೆಲಸಕ್ಕಿದ್ದರು. ಏಪ್ರಿಲ್ 17ನೇ ತಾರೀಕು ಸಂಶಯಾಸ್ಪದ ರೀತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಅಸಹಜ ಸಾವು ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದರು. ಒಂಟಿತನದ ಕಾರಣದಿಂದ ಆತ್ಮಹತ್ಯೆ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ನನ್ನ ಸಾವಿನ ಬಗ್ಗೆ ಅನುಮಾನ ಪಟ್ಟು ದೂರು ಕೊಟ್ಟರೆ ತೆಗೆದುಕೊಳ್ಳಬೇಡಿ. ನನ್ನ ಅಪ್ಪ, ಅಮ್ಮ, ಅಕ್ಕಂದಿರು, ಸ್ನೇಹಿತರು ದೂರು ಕೊಟ್ಟರೆ ತೆಗೆದುಕೊಳ್ಳಬೇಡಿ. ಪೊಲೀಸ್ ಸರ್..ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ: ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ ಹಿನ್ನೆಲೆ: ಅಲ್ಲಿದ್ದ ನೂರಾರು ವಾಹನ ಸವಾರರಿಗೂ ಸಂಕಷ್ಟ!

Related Video