Asianet Suvarna News Asianet Suvarna News

ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ ಹಿನ್ನೆಲೆ: ಅಲ್ಲಿದ್ದ ನೂರಾರು ವಾಹನ ಸವಾರರಿಗೂ ಸಂಕಷ್ಟ!

ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಭೀಕರ ಹತ್ಯೆಯಾದ ಹಿನ್ನೆಲೆ ಶೆಡ್‌​​ನಲ್ಲಿ ಸೀಜ್ ಆದ ನೂರಾರು​​​ ವಾಹನ ಸವಾರರಿಗೂ ಇದೀಗ ಸಂಕಷ್ಟ ಶುರುವಾಗಿದೆ.

ಪಟ್ಟಣಗೆರೆ ಶೆಡ್‌ನಲ್ಲಿ(Pattanagere Shed) ರೇಣುಕಾಸ್ವಾಮಿ ಭೀಕರ ಹತ್ಯೆಯಾದ(Renukaswamy Murder Case) ಹಿನ್ನೆಲೆ ಅಲ್ಲಿ ಇದ್ದ ನೂರಾರು ವಾಹನ ಸವಾರರಿಗೂ ಸಂಕಷ್ಟ ಶುರುವಾಗಿದೆ. ಶೆಡ್‌​​​ನಲ್ಲಿರುವ ವಾಹನ ಸವಾರರಿಗೂ ಸಂಕಷ್ಟ  ಶುರುವಾದಂತೆ ಆಗಿದೆ. ಪಟ್ಟಣಗೆರೆ ಶೆಡ್‌​​ನಲ್ಲಿ ಸೀಜ್ ಆದ ನೂರಾರು​​​ ವಾಹನಗಳು ಇವೆ. ಲೋನ್​​ ಕ್ಲೀಯರ್ ಮಾಡಿ ವಾಹನ ಪಡೆಯಲು ಬಂದವರಿಗೆ ಶಾಕ್ ಆಗಿದೆ. ಕೊಲೆ ಕೇಸ್ ಮುಗಿಯೋವರೆಗೂ ವಾಹನ ಕೊಡದಿರಲು ತೀರ್ಮಾನ ಮಾಡಲಾಗಿದೆಯಂತೆ. ವಾಹನ ಮಾಲೀಕರು ಶೆಡ್ ಬಳಿ ಬಂದು ವಾಪಸ್ ಹೋಗುತ್ತಿದ್ದಾರೆ. ಅಲ್ಲದೇ ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ನನ್ನ ವೆಹಿಕಲ್ ಒಳಗಿದೆ, ಲೋನ್ ಕ್ಲಿಯರ್ ಆದ್ರೂ ಕೊಡುತ್ತಿಲ್ಲ. ದರ್ಶನ್​  ಪ್ರಕರಣದ ತನಿಖೆ ನಡೀತಿದೆ ಕೊಡೋಕೆ ಆಗಲ್ಲ ಅಂತಿದ್ದಾರೆ ಎಂದು ವಾಹನ ಮಾಲೀಕರೊಬ್ಬರು ತಮ್ಮ ಅಳಲನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮುಂದೆ ತೋಡಿಕೊಂಡಿದ್ದಾರೆ.

ಇದನ್ನೂ ವೀಕ್ಷಿಸಿ:  ಎಲ್ಲಾ ಆಯಾಮದಲ್ಲಿ ತನಿಖೆ ನಡೆಯುತ್ತಿದ್ದು,ಒಂದೊಂದು ಕೆಲಸಕ್ಕೆ ಇನ್‌ಸ್​ಪೆಕ್ಟರ್​ ನೇಮಿಸಿದ್ದೇವೆ: ದಯಾನಂದ್‌

Video Top Stories